ಕಗ್ಗ-೫

ಕಗ್ಗ-೫

ದೇವರೆಂಬುದದೇನು ಕಗ್ಗತ್ತಲ ಗವಿಯೆ?

ನಾವರಿಯಲಾದೆಲ್ಲದರೊಟ್ಟು ಹೆಸರೇ?

ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?

ಸಾವು ಹುಟ್ಟುಗಳೇನು?- ಮಂಕುತಿಮ್ಮ

ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?

ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ.

ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.

ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವಿನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವೀ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ. ಕಾಡು ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ. ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣು ಹಂಪಲುಗಳು ಯತೇಚ್ಚವಾಗಿ ಸಿಗುತ್ತದೆ. ಹಾಗೇ ಗಗನದಿಂದ ಬಂದ ಮಳೆ ತನಗೆ ಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು” ದೇವರು” ಎಂದ. ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನ ಸ್ತಿತಿ ಹಾಗೆ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ ಪಕ್ಷಿ ಗಿಡ ಮರ,ನದಿ ಸಮುದ್ರ, ಮಳೆ ಬಿಸಿಲು ಬೆಳಕು ಹೂವು ಹಣ್ಣು ಹೀಗೆ ಎಲ್ಲವೂ ಅವನಿಗೆ ದೈವ ಸಮಾನ.

ಆದರೆ ಆ ದೇವರೇನು ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ ” ಅದು ” ಇದೇ” ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ ಅಲ್ಲವೆ?. ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ( ಪರಿಭಾಷೆ = definition )ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ.

ವಾಚಕರೆ, ನೋಡಿ ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ? ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಕೇಳುತ್ತಾರೆ.
ಹಾಗೆ ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ? ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಕಗ್ಗದ ಮೂಲಕ ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.

Leave a comment

Filed under ಕಗ್ಗದ ಹುಗ್ಗಿ

ಕಗ್ಗ -೪

ಕಗ್ಗ-೪

ಏನು ಜೀವನದರ್ಥ? ಏನು ಪ್ರಪಂಚಾರ್ಥ ?

ಏನು ಜೀವಪ್ರಪಂಚಗಳ ಸಂಬಂಧ?

ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು?

ಜ್ಞಾನಪ್ರಮಾಣವೇಮ್? ಮಂಕುತಿಮ್ಮ

ಕಾಣದಿಲ್ಲಿರ್ಪುದೇನಾನುಮುಂಟೆ = ಕಾಣದೆ + ಇಲ್ಲಿ+ ಇರ್ಪುದು(ಇರುವುದು)+ಏನಾನುಂ( ಏನಾದರೂ)+ ಉಂಟೆ

“ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? ಅದು ನಮ್ಮ ವಿಚಾರ ಮತ್ತು ಜ್ಞಾನದ ಪರಿಧಿಯಿಂದ ಮೀರಿದೆಯೇ? ಹಾಗಾದರೆ ಅದು ಏನು? ” ಎಂಬ ಭಾವಗಳನ್ನು ವ್ಯಕ್ತಪಡಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಶ್ರೀ ಡಿ.ವಿ.ಜಿ ಯವರು.

ವಾಚಕರೆ, ಅಲ್ಪ ಸ್ವಲ್ಪ ವಿಚಾರಮಾಡುವ ಶಕ್ತಿ ಇರುವವರೂ ಸಹ ಈ ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಅನೇಕ ಬಾರಿ ಕೇಳಿಕೊಳ್ಳುತ್ತಾರೆ. ಅಲ್ಲವೇ?

ನಾವು ಹುಟ್ಟುತ್ತೇವೆ, ಬೆಳೆಯುತ್ತೇವೆ, ಬದುಕುತ್ತೇವೆ ಮತ್ತು ಒಂದು ದಿನ ಸಾವಿನ ತೆಕ್ಕೆಗೆ ಬೀಳುತ್ತೇವೆ. ಈ ಎಲ್ಲಕ್ಕೂ ಏನಾದರೂ ಅರ್ಥವಿದೆಯೇ? ನಾವು ಇಲ್ಲಿರುವಾಗ ನಮ್ಮ ಜೀವನದಲ್ಲಿ ಜ್ಞಾನದ ಜೊತೆಯಲ್ಲಿ ಪ್ರೀತಿ, ಪ್ರೇಮ, ಕೋಪ, ದ್ವೇಷ, ಅಸೂಯೆ, ಅನುರಾಗ ಮುಂತಾದ ಹಲವಾರು ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆ ಭಾವನೆಗಳ ಜೊತೆಗೆ ಜೀವಿಸುತ್ತೇವೆ. ಈ ರೀತಿಯ ಜೀವನಕ್ಕೇನಾದರೂ ಅರ್ಥವಿದೆಯೇ? ವಾಸ್ತವ ಬದುಕಿಗೆ ಮಾತ್ರ ಮಾಸ್ತವವೇ ಕಾರಣವೋ ಅಥವಾ ನಮ್ಮ ಕಣ್ಣಿಗೆ ಕಾಣದ ಆದರೂ ಈ ಎಲ್ಲವನ್ನೂ ನಿಯಂತ್ರಿಸುವ ಬೇರೆ ಯಾವುದಾದರೂ ಶಕ್ತಿ ಇದೆಯೇ. ಇದ್ದರೆ ಅದರ ಸ್ವರೂಪವೇನು ಮತ್ತು ಅದರ ಕಾರ್ಯ ವೈಖರಿಯೇನು ಎನ್ನುವುದು ಎಲ್ಲ ವಿಚಾರವಂತರಿಗೂ ಬರುವ ಸಂದೇಹಗಳು.

ಪ್ರತಿ ಜೀವಿಯ ಹುಟ್ಟು ಏಕಾಗುತ್ತದೆ? ಭೌತಿಕ ಕಾರಣವು ಎಲ್ಲರಿಗೂ ಗೊತ್ತು. ಆದರೆ ಈ ಭೌತಿಕ ಕಾರಣವಲ್ಲದೆ ಬೇರೆ ಏನಾದರೂ ಕಾರಣವಿದೆಯೇ? ಆ ಕಾರಣವೇ ನಮ್ಮ ಪ್ರತಿ ನಿಮಿಷದ ಕಾರ್ಯಗಳನ್ನೂ ನಿಯಂತ್ರಿಸುತ್ತದೆಯೇ?

ನಮ್ಮ ಭಾರತೀಯ ಸಿದ್ಧಾಂತದ ಪ್ರಕಾರ ಪ್ರತಿ ಜೀವಿಯೂ ಒಂದು ಪೂರ್ವ ನಿಯೋಜಿತ ಕಾರಣಕ್ಕಾಗಿ ಜನಿಸಿ ಮತ್ತು ಆ ಪೂರ್ವ ನಿಯೋಜಿತ ಕ್ರಮದಲ್ಲಿಯೇ ತನ್ನ ಜೀವನವನ್ನು ನಡೆಸುತ್ತದೆ ಎಂದು ಹೇಳಲ್ಪಟ್ಟಿದೆ. ಹಾಗಿದ್ದರೆ ಆ ಕಾರಣದ ಮೂಲವೇನು? ಆ ಕಾರಣಕ್ಕೆ ಕಾರಕರಾರು? ಬಹಳ ಕ್ಲಿಷ್ಟವಾದ ಪ್ರಶ್ನೆ.

ನಮ್ಮ ಋಷಿ ಮುನಿಗಳೂ ಸಹ ಈ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಾಣಲು ಮಾಡಿದ ಪ್ರಯತ್ನದ ಫಲವೇ ಭಾರತೀಯ ವೇದ ಶಾಸ್ತ್ರಗಳು, ಉಪನಿಷತ್ತುಗಳು . ಹೀಗೆ ಎಲ್ಲರಲ್ಲೂ ಸಾಮಾನ್ಯವಾಗಿ ಉದ್ಭವವಾಗುವ ಮತ್ತು ಎಲ್ಲರೂ ವಿಚಾರ ಮಾಡಬಹುದಾದ ಅಥವಾ ಮಾಡಲೇಬೇಕಾದ ಪ್ರಶ್ನೆಗಳ ಸ್ವರೂಪವೇ ಈ ಕಗ್ಗ.

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೩

ಕಗ್ಗ-೩
ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ I

ಮಹಿಯಿಂ ಜಗವಾಗಿ ಜೀವವೇಷದಲಿ II

ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ I

ಗಹನ ತತ್ತ್ವಕೆ ಶರಣೋ – ಮಂಕುತಿಮ್ಮ II

ತಿಳಿಯಗೊಡದೊಂದು=ತಿಳಿಯಗೊಡದ ಒಂದು

ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು

ನಿಸದವಾದೊಡಾ = ನಿಸದವಾದೊಡೆ + ಆ

ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು.

ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. ಆ ದೇವರೆಂಬ ವಸ್ತು ಇದೆಯೋ ಇಲ್ಲವೋ ಎಂದು. ಇದೆ ಎಂದರೆ, ಅದಕ್ಕೆ  ಹೆಸರುಗಳು, ರೂಪಗಳು, ಪೂಜೆಗಳು, ಹಲವು ಪೂಜಾ ವಿಧಾನಗಳು, ಆಚಾರಗಳು, ಸಂಪ್ರದಾಯಗಳು ಆ ದೇವರ ರೂಪ ಮತ್ತು ಕಾರ್ಯವೈಖರಿಗೆ ನಾನಾ ಭಾಷ್ಯಗಳು. ಅನಾದಿ ಕಾಲದಲ್ಲೂ ಆ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ” ಚಾರ್ವಾಕ” ರೆಂಬುವರೂ ಇದ್ದರು. ಇಂದಿಗೂ ಆ ದೇವರೆಂಬ ವಸ್ತುವನ್ನು ನಂಬದಿರುವರು ಇದ್ದಾರೆ. ಕೆಲವರಿಗೆ ಧೃಢವಾದ ನಂಬಿಕೆ. ಇನ್ನೂ ಕೆಲವರಿಗೆ ಅನುಮಾನ. ಮತ್ತೆ ಕೆಲವರಿಗೆ ಅದು ಆಗಾಗ ಬಂದು ಹೋಗುವ ವಿಚಾರ. ಕೆಲವರಿಗೆ ಸಂಕಟ ಬಂದಾಗ ಮಾತ್ರ ದೇವರ ನೆನಪು, ಕೆಲವರಿಗೆ ಬರೀ ತೋರಿಕೆಗೆ ಭಕ್ತಿ. ಮತ್ತು ಕೆಲವರಿಗೆ ಹೊರಗೆ ತೋರದಿದ್ದರೂ ಆಂತರ್ಯದಲ್ಲಿ ಶುಧ್ಧ ಭಕ್ತಿ.

ಇಲ್ಲಿ ಡಿ.ವಿ.ಜಿ ಯವರೂ ಸಹ ” ನಿಸದವಾದೊಡೆ” ಎಂದಿದ್ದಾರೆ. ” ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ” ಎಂದಿದ್ದಾರೆ ದಾಸರು. ಅಂದರೆ ಜಗತ್ತನ್ನು ಸೃಷ್ಟಿಸಿ, ಜಗತ್ತಿನ ಎಲ್ಲ ಜೀವರಾಶಿಗಳನ್ನೂ ತನ್ನ ಇಷ್ಟದಂತೆ ಪರಮಾತ್ಮ ಆಡಿಸುವನೆಂಬ ಅರ್ಥದಲ್ಲಿದೆ ದಾಸರ ಉಕ್ತಿ. ಹಾಗೆ ಇಡೀ ವಿಶ್ವವನ್ನು ಸೃಷ್ಟಿಮಾಡಿ, ಎಲ್ಲ ಜಡ ಮತ್ತು ಜೀವಿಗಳಲ್ಲೂ ತಾನೇ ತಾನಾಗಿ ವ್ಯಾಪಿಸಿರುವ ಆ ಪರಮಾತ್ಮನೆಂಬುವುದು ಒಳ್ಳೆಯದು ಮತ್ತು ಇರುವುದು ಸತ್ಯವಾದರೆ, ಆ ಗಹನಕ್ಕೆ ಅಂದರೆ ಗೂಢವಾದ, ಊಹೆ, ಅರಿವು ಮತ್ತು ತರ್ಕಕ್ಕೆ ನಿಲುಕದ ಆ ಗುಹ್ಯವಾದ ವಸ್ತುವಿಗೆ ಶರಣಾಗು ಎನ್ನುತ್ತಾರೆ ಡಿ.ವಿ.ಜಿ . ಇಲ್ಲಿ ಸತ್ಯವಾದರೆ ಎಂದಿದ್ದಾರೆ. ಅಂದರೆ ಅದು ಅಸತ್ಯವೂ ಆಗಿರಬಹುದೇ? ಎಂದರೆ, ಅದು ಹಾಗಲ್ಲ. ನಂಬುವವನ ಮನಸ್ಸಿಗೆ, ಮಾತಿಗೆ ಅದು ಸತ್ಯ ಎಂದು ಗೋಚರಿಸಿದರೆ, ಅದನ್ನು ನಂಬು ಮತ್ತು ಶರಣಾಗು ಎಂದು ಹೇಳಿದ್ದಾರೆ. ನಾನು ನಂಬಲ್ಲ ಎಂಬುವವನೂ ಸಹ ” ನಾನು ದೇವರನ್ನು ನಂಬುವುದಿಲ್ಲ ” ಎನ್ನುತ್ತಾನೆ. ಅಂದರೆ ಅವನು ” ” ದೇವರು” ಎನ್ನುವ ವಸ್ತುವೊಂದಿದೆ ನಾನು ಅದನ್ನು ನಂಬುವುದಿಲ್ಲ ಎಂದು ಅರ್ಥವಲ್ಲವೇ?

ಹಾಗಾಗಿ ವಾಚಕರೆ ನಿಮಗೆ ಆ ಪರಮಾತ್ಮ ವಸ್ತುವಿನಲ್ಲಿ ನಂಬಿಕೆ ಇದ್ದರೆ, ಶುಧ್ಧವಾಗಿ ನಂಬಿ, ಶರಣಾಗಿ ಎನ್ನುತ್ತಾರೆ ಡಿ.ವಿ.ಜಿ .

Leave a comment

Filed under ಕಗ್ಗದ ಹುಗ್ಗಿ

ಕಗ್ಗ ೨

ಕಗ್ಗ೨
ಜೀವ ಜಡರೂಪ ಪ್ರಪಂಚವನದಾವುದೋ I
ಆವರಿಸಿಕೊಂಡುಮೊಳನೆರೆದುಮಿಹುದಂತೆ II
ಭಾವಕೊಳಪಡದಂತೆ ಅಳತೆಗಳವಡದಂತೆ I
ಆ ವಿಶೇಷಕೆ ಮಣಿಯೋ – ಮಂಕುತಿಮ್ಮ II

(ಜೀವ ಜಡ ರೂಪ ಪ್ರಪಂಚವನು ಅದಾವುದೋ ಆವರಿಸಿಕೊಂಡು ಒಳನೆರೆದು ಇಹುದಂತೆ ಭಾವಕ್ಕೆ ಒಳಪಡದಂತೆ ಅಳತೆಗೆ ಅಳವಡದಂತೆ ಆ ವಿಶೇಷಕೆ ಮಣಿಯೋ- ಮಂಕುತಿಮ್ಮ )

(ಒಳನೆರೆದು=ಒಳಗೆ ತುಂಬಿ , ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ)
ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ ತುಂಬಿಕೊಂಡಿರುವ,

ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ (ಪರಮಾತ್ಮನಿಗೆ) ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ.
“ಯತಃ ಸರ್ವಾಣಿ ಭೂತಾನಿ ಭವ೦ನ್ತ್ಯಾದಿ ಯುಗಾಗಮೆ – ಯಸ್ಮಿನ್ಸ್ಚ ಪ್ರಳಯಂ ಯಾಂತಿ ಪುನರೇವ ಯುಗಕ್ಷಯೇ.” ಎಂದು ಯುಧಿಷ್ಠಿರನು ಕೇಳುವ ಐದು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪರಮಾತ್ಮ ಸ್ವರೂಪವನ್ನು ವಿವರಿಸುವಾಗ ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ಹೇಳುತ್ತಾರೆ. ಎಂದರೆ “ಯುಗದ ಆದಿಯಲ್ಲಿ ಯಾರಿಂದ ಎಲ್ಲವೂ ಪ್ರಕಟಗೊಳ್ಳುತ್ತದೋ ಮತ್ತು ಯುಗದ ಅಂತ್ಯದಲ್ಲಿ ಯಾರಲ್ಲಿ ಎಲ್ಲವೂ ವಿಲೀನವಾಗುತ್ತದೋ, ಅದೇ ಪರಮಾತ್ಮ ” ಎನ್ನುತ್ತಾರೆ.

ಈ ಪರಮಾತ್ಮ -ಜಡ-ಜೀವ ಪರಸ್ಪರ ಸಂಬಂಧವನ್ನು ಕುರಿತು ಹೇರಳವಾದ ವ್ಯಾಖ್ಯಾನಗಲಿದ್ದರೂ “ಇದೇ” ಇದು ಎಂದು ಹೇಳುವುದು ಅಸಾಧ್ಯ. ಅದು ಅನುಭವ ವೇಧ್ಯ. ” ಅನ್ನಮಾಚಾರ್ಯರು” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಆಟು ತಾನೈ” ಎಂದು ಹೇಳುತ್ತಾರೆ. ಅಂದರೆ ಎಲ್ಲರಲ್ಲೂ ಹುಟ್ಟು ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನೇ ಆಗಿ” ಎಂದು ಆ ಪರಮಾತ್ಮನನ್ನು ವರ್ಣಿಸುತ್ತಾರೆ. ಇಲ್ಲಿ ನಮಗೆ ಆ ಪರಮ ಪುರುಷನು ತಾನೇ ಇಡೀ ಜಗತ್ತು ಮತ್ತು ಅದರಲ್ಲಿರುವ ಸಕಲವೂ ಆಗಿ ತಾನೇ ಪ್ರಕಟಗೊಂಡಿದ್ದಾನೆ ಎಂದು ಅರ್ಥ ಬರುತ್ತದೆ. ಇರಲಿ ನಾವೂ ಸಹ ಇದನ್ನು ನಮ್ಮ ನಮ್ಮ ಮತಿಯ ಮಿತಿಯಲ್ಲಿ ವಿಚಾರದ ಒರೆಗೆ ಹಚ್ಚಿ ನಮ್ಮ ನಮ್ಮ ವಿಚಾರದ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡಬೇಕು.

ಆದರೆ ಎಂತೆಂತ ಮಹಾಮಹಿಮಾನ್ವಿತರಿಗೂ ಊಹಿಸಲು, ಅಳೆಯಲು ಮತ್ತು ತಿಳಿಯಲು ಕಷ್ಟಸಾಧ್ಯವಾದ ಆ ಪರಮಾತ್ಮ ಸ್ವರೂಪವನ್ನು ,ವಿಚಿತ್ರ-ವಿಶೇಷ ಎಂದು ಕರೆದಿದ್ದಾರೆ, ಡಿ.ವಿ.ಜಿ.ಯವರು. ಅದಕ್ಕೆ, ನಮಿಸು ಮಣಿ ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು.

Leave a comment

Filed under ಕಗ್ಗದ ಹುಗ್ಗಿ

ಕಗ್ಗದ ಹುಗ್ಗಿ

ಕಗ್ಗ-೧
ವಿಷ್ಣು ವಿಶ್ವಾದಿಮೂಲ ಮಾಯಾಲೋಲ

ದೇವ ಸರ್ವೇಶ ಪರಬೊಮ್ಮನೆಂದು ಜನಂ //

ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ

ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ //

ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ

ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು.

ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ

ಸೌರಮಂಡಲಗಲಿರುವ ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಲಿರುವ ಅಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಲಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ.

ಅವರವರ ಭಾವಕ್ಕೆ ಅವರವರ ಭಕುತಿಗೆ

ಅವರವರ ತೆರನಾಗಿ ಇರುತಿಹನು ಶಿವಯೋಗಿ

ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ

ನರರೇನು ಭಾವುಸುವರದರಂತೆ ಕಾಣುವನು

ಶಿವ ಶರಣರ ಮಾತು. ಹೀಗೆ ಒಂದೇ ಸತ್ಯವನ್ನು ಎಲ್ಲ ಮಹಾ ಮಹಿಮರೂ ಹೇಳಿದ್ದರೆ ಅಲ್ಲವೆ.

Leave a comment

Filed under Uncategorized

ವಾಟ್ಸಾಪ್ ಉವಾಚ…

[11/12 6:16 AM] Shyama: ಅಶೋಕ್ ಚಕ್ರ ಪುರಸ್ಕೃತರ ಮನೆಯವರೊಬ್ಬರಿಗೆ ಭಾರತದ ಎಲ್ಲಾ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಇರತ್ತೆ. ಅದಕ್ಕೊಂದು ಐಡೆಂಟಿಟಿ ಕಾರ್ಡ್ ಕೊಟ್ಟಿರ್ತಾರೆ. ಅದನ್ನ ಟೋಲ್ನಲ್ಲಿ ಕುಳಿತಿದ್ದ ಹುಡುಗನಿಗೆ ತೋರಿಸಿದೆ.

’ನಿಮ್ಮ ಕಾರಿಗೆ ರೆಡ್ ಲೈಟ್ ಇಲ್ಲ, ಮತ್ತೆ ನೀವ್ಹೆಂಗೆ ವಿ.ಐ.ಪಿ ಆಗ್ತೀರಿ..?’ ಅಂತ ಕೇಳಿದ…

ಏನುತ್ತರ ಕೊಡಬೇಕೋ ಅರ್ಥ ಆಗಲಿಲ್ಲ… ’ನಾನು, ವಿ.ಐ.ಪಿ ಅಲ್ಲಪ್ಪಾ… ಮರಣೋತ್ತರ ಅಶೋಕ ಚಕ್ರ ಪಡೆದ ಅಧಿಕಾರಿಯ ಹೆಂಡತಿ. ನಮಗೆ ಟೋಲ್ಗಳಲ್ಲಿ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಸರಕಾರಿ ಆದೇಶ ಇಲ್ಲಿದೆ ನೋಡು’ ಅಂದೆ…

’ಇಲ್ಲಾರೀ… ಇಂಥವಕ್ಕೆಲ್ಲ ಅಲವ್ ಮಾಡಲ್ಲ… ಐವತ್ತು ರುಪಾಯಿ ಕೊಡಿ’ ಅಂದ ಅವನು…

’ಈ ದೇಶಕ್ಕಾಗಿ ಗಂಡನ್ನೇ ಕೊಟ್ಟವಳಪ್ಪಾ ನಾನು… ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ ಅಂತಂದು ದುಡ್ಡು ಕೊಟ್ಟು ಟಿಕೆಟ್ ತಗೊಂಡೆ… ಅದೇ ಕೊನೆ… ಮತ್ಯಾವತ್ತೂ ನಾನು ಯಾವ ಟೋಲ್ನಲ್ಲೂ ನನ್ನ ಗಂಡನ ಅಶೋಕ ಚಕ್ರದ ಕಾರ್ಡ್ ತೋರೀಸಲಿಲ್ಲ ಅಂದರು’

ಯಾಕೋ ಕಣ್ಣೀರು ತಡೆಯಲೇ ಇಲ್ಲ… ಕ್ಯಾಮರಾಮ್ಯಾನ್ಗೆ ಶೂಟಿಂಗ್ ನಿಲ್ಲಿಸು ಅಂತಂದುಬಿಟ್ಟೆ… ಕೆಲವು ನಿಮಿಷ ಬೇಕಾದವು ಯಥಾಸ್ಥಿತಿಗೆ ಬರೋದಕ್ಕೆ…

’ನಿಮ್ಮ ಗಂಡ ಒಂದು ನಿಯತ್ತಿಲ್ಲದ ಸಮಾಜಕ್ಕಾಗಿ ಬಡಿದಾಡಿ ಸತ್ತು ಹೋದರು ಅಂತ ಈ ಐದು ವರ್ಷಗಳಲ್ಲಿ ಯಾವತ್ತಾದರೂ ಅನ್ನಿಸಿದೆಯಾ..?’ ಮ್ಲಾನವಾಗಿ ಕೇಳಿದೆ…

ಸ್ಮೀತಾರ ಕಣ್ಣಿನಲ್ಲಿ ನೀರಿನ ಪರದೆ… ಅವರು ಸ್ಮೀತಾ ಸಲಾಸ್ಕರ್… ಐದು ವರ್ಷಗಳ ಹಿಂದೆ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಾಸ್ಕರ್ ಹೆಂಡತಿ… ನಿನ್ನೆ ಮಧ್ಯಾಹ್ನ ಅವರ ಸಂದರ್ಶನ ಮಾಡಿ, 26/11ಗೆ ಸಂಬಂಧಿಸಿದ ಇನ್ನೊಂದಷ್ಟು ಕೆಲಸ ಮುಗಿಸಿ ರಾತ್ರಿ ಬೆಂಗಳೂರು ತಲುಪಿದೆ. ಇವತ್ತು ಬೆಳಿಗ್ಗೆ ಆಫೀಸು… ಏನ್ ಮಾಡೋದಕ್ಕೆ ಹೋದರೂ, ಸ್ಮೀತಾ ಸಲಾಸ್ಕರರ ಆ ಧ್ವನಿ ಬೆನ್ನತ್ತಿ ನರುತ್ತಿದೆ ಅನ್ನೋ ಭಾವ…

’ಈ ದೇಶಕ್ಕಾಗಿ ಗಂಡನನ್ನೇ ಕೊಟ್ಟವಳಪ್ಪಾ ನಾನು… ನಿನಗೆ ಐವತ್ತು ರುಪಾಯಿ ಕೊಡಲ್ಲ ಅಂತೀನಾ..?’

Forwarded as received….
[11/12 9:29 AM] ‪+91 94486 65959‬: ಜಪದಿಂದ ಮನಸ್ಸಿಗೆ ವ್ಯಾಯಾಮ ಮತ್ತು ಶಾಂತಿ…

“ಜಪ” ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು “ಜಪಿಸು” ಎನ್ನುವ ಪದದಿಂದ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು.

“ಜಪ” ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

“ಜ” ಕಾರೋ ಜನ್ಮ ವಿಚ್ಚೇದನ
“ಪ” ಕಾರೋ ಪಾಪನಾಶಕl
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕll

“ಜ”ಕಾರವು ಜನ್ಮ ವಿನಾಶಕವಾದದ್ದೆಂದೂ “ಪ” ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ “ಜಪ” ಅವಶ್ಯಕವೆಂದಾಗುತ್ತದೆ.

“ಜಪ” ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ “ಜಪ”. ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ “ಬೀಜ” ಮಂತ್ರವಾಗಲೀ, “ತಾರಕ” ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

“ಜಪ”ದಲ್ಲಿ ಮೂರು ವಿಧಾನಗಳಿವೆ. ಅವುಗಳೆಂದರೆ: 🔹ವಾಚಕ 🔹ಉಪಾಂಶು 🔹ಮಾನಸೀ ಜಪ.
ವಾಚಕ: ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು.
ಉಪಾಂಶು:ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು.
ಮಾನಸಿಕ ಜಪ: ಮನಸ್ಸಿನಲ್ಲಿ ಧ್ಯಾನಿಸುವುದು.
ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು. ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ. ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು “ಮೌನ”ವೆಂದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು “ಗುರು” ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ ಹೀಗಿದೆ “ಗು” ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) “ರು” ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ.

ಗುರುವು ಉಪದೇಶ ಮಾಡುವ ಮಂತ್ರವು, 🔸ಏಕಾಕ್ಷರಿ🔸ದ್ವೈಕ್ಷರಿ 🔸ಪಂಚಾಕ್ಷರಿ🔸ಅಷ್ಟಾಕ್ಷರಿ 🔸ದಶಾಕ್ಷರಿ🔸ಪಂಚ ದಶಾಕ್ಷರಿ 🔸ಶೋಡಶಾಕ್ಷರಿ. ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣ ಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು (ಮುಸಲ್ಮಾನರು ಮತ್ತು ಕ್ರೈಸ್ತರು) ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ.

ಜಪಸರದಲ್ಲಿ ೧೦೮ ಮಣಿಗಳಿರ ಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.

ಜಪದಲ್ಲಿ ವಿಧಗಳಿವೆ.
🔶ನಿತ್ಯ ಜಪ
🔶ವೈಯಕ್ತಿಕ ಜಪ
🔶ಪ್ರಾಯಶ್ಚಿತ್ತ ಜಪ
🔶ಅಚಲ ಜಪ
🔶ಜಲ ಜಪ
🔶ಅಖಂಡ ಜಪ
🔶ಪ್ರದಕ್ಷಿಣ ಜಪ
🔶ಲಿಖಿತ ಜಪ
🔶ಕಾಮ್ಯ ಜಪ

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ.

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು
ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರ ಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡ ಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗದಿಂದ ಮುಕ್ತನಾಗಿ ಏಕ ಮನಸ್ಸಿನಿಂದ ಜಪಿಸ ಬೇಕು.

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (೧೦೮) ಜಪ ಮಾಡ ಬೇಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸ ಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿ ಕೊಳ್ಳ ಬೇಕು.

ಅಸಂಖ್ಯಾ ಮಸುರಂ ಯಸ್ಮಾತ್l
ತಸ್ಮಾದತೆ ಗಣೀಯತೆ ದೈವಂll

ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.

ಪ್ರತಿ ನಿತ್ಯವೂ ಜಪ ಮಾಡುವುದರಿಂದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.

ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಭಗವಂತನ ಕಡೆಗೆ ವಂತೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ. ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಆದರೆ ತೋರಿಕೆಗಾಗಿ ಮಾಡುವ ಜಪದಿಂದ ಯಾವುದೇ ಪುಣ್ಯ, ಪುರುಷಾರ್ಥವಾಗಲೀ ದೊರಕುವುದಿಲ್ಲ.

ಜಪ, ತಪ, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಮುಖಗಳು, ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ.

ಎಲ್ಲಾ ನದಿಗಳೂ ಸಮುದ್ರವನ್ನು ಸೇರುವಂತೆ, ಪೂಜಿಸುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಹೆಸರಿನಿಂದಿರಲಿ, ಎಲ್ಲವೂ ಸರ್ವಶಕ್ತನಾದ ಭಗವಂತನಿಗೇ ಸಲ್ಲುತ್ತದೆ.

ಓಂ ಶಾಂತಿ ಶಾಂತಿ ಶಾಂತಿಃ
[11/12 9:41 AM] ‪+91 94486 65959‬: ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಮುಖ್ಯವಾದ 6 ಲಾಭಗಳು ಇಲ್ಲಿವೆ.1) ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.2) ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ (Free radicals) ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.3) ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.4) ನೀವು ತಟ್ಟೆಗಳಲ್ಲಿ ಊಟ ಮಾಡಿದರೆಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.5) ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು.ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿತಣ್ಣಗಾಗುತ್ತದೆ.6) ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು. ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.
[11/12 9:41 AM] ‪+91 94486 65959‬: 🌞🌞ಮನಸಿನ ಮಾತು🌞🌞

ಆತ್ಮೀಯರೆ…….,

ನಮ್ಮ ಬದುಕಿನಲ್ಲಿ ಹುದ್ದೆ,
ಉದ್ಯೋಗ ಕಂಡುಕೊಂಡ್ಮೇಲೆ,
ನೂರೆಂಟು ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
ಕೆಲಸ ಮಾಡುತ್ತಾ,ಮಾಡುತ್ತಾ ನಾವು ಮಾಡುವ ಕೆಲಸ ಸಣ್ಣದಾಗುತ್ತದೆ.
ಬೇರೆಯವರು ಮಾಡುವ ಹುದ್ದೆ ಶ್ರೇಷ್ಠ ಎನಿಸಲು ಮನಸಿನಲಿ ಲೆಕ್ಕ ಹಾಕುತ್ತಿರುತ್ತೇವೆ ಅಲ್ವಾ…?

ಒಂದು ಕಥೆ ನೆನಪಾಗುತ್ತೆ.

ಸುಂದರವಾದ ಎತ್ತರದ ಮರದ ಕೆಳಗೆ ಪಚ್ಚನೆಯ ಹಸಿರು ತುಂಬಿದ ಹುಲ್ಲು ಅಲ್ಲಿ ಎರಡು ಇಲಿಗಳು ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ ಬೆಕ್ಕು ಬರುವುದನ್ನು ಕಂಡು ಅಂಜಿ ಇಲಿಯು ನಾನು ಬೆಕ್ಕಾಗಿದ್ದರೆ ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು ಮನದಲಿ ಬಗೆಯುತ್ತಿರುವಾಗ ಬೆಕ್ಕಾಗಿ ಮಾರ್ಪಟ್ಟಿತು.
ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ ನಾಯಿ ಅಟ್ಟಿಸಿಕೊಂಡು ಬರುತ್ತದೆ. ನಾನು ನಾಯಿ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ ನಾಯಿ ಆಯಿತು, ಖುಷಿಯಾಯಿತು.
ಆನೆಯು ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ ಆನೆಯಾಗಿದ್ದರೆ ಚೆನ್ನ ಎಂದಿತು ಮರುಕ್ಷಣವೇ ಆನೆ ಆಯಿತು,ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
ಸಿಂಹವು ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು ಸಿಂಹವು ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ ಸಿಂಹವಾಯಿತು,

ನಾನೇ ಕಾಡಿನ ರಾಜ ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. ಬೇಟೆಗಾರ ಬಿಲ್ಲು ಬಾಣ ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
ಅಯ್ಯೋ ಬೇಟಗಾರನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ ಬೇಟಾರನಾಗಿ ಮಾರ್ಪಟ್ಟಿತು.
ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ ಸುತ್ತಿ,ಸುತ್ತಿ ಸುಸ್ತು ಆದರೂ, ಒಂದು ಪ್ರಾಣಿಯು ಸಿಗಲೇ ಇಲ್ಲ. ತೃಷೆಯಾಗಿ,
ಆಯಾಸಗೊಂಡು ಎತ್ತರವಾದ ಸುಂದರವಾದ ಮರದ ಕೆಳಗೆ ಕುಂತು ವಿಶ್ರಾಂತಿ ಪಡೆಯುತ್ತಿರು
ವಾಗ, ಎಷ್ಟು ಕಷ್ಟದ ಜೀವನ
ಇದು ಎಂದು, ಮೇಲೆ ನೋಡಿದಾಗ,
ಸುಂದರವಾದ ಮರ ಕಾಣಿಸುತ್ತದೆ,
ಮರವಾದರೆ ಬೇಟೆ ಆಡುವುದು,
ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
ಮರವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಮರವಾಯಿತು.
ನಾನು ಇನ್ಮುಂದೆ ಆರಾಮವಾಗಿ ಜೀವಿಸಬಹುವುದು,ಜೀವದ ಭಯ,ಯಾರ ಹೆದರಿಕೆಯೂ ಇಲ್ಲ ಎಂದು ಖುಷಿಪಟ್ಟು ಕೆಳಗಡೆ ನೋಡುತ್ತಿರುವಾಗ ಇಲಿಗಳು ಮರದ ಬೇರುಗಳನ್ನು ಕಡಿಯುತ್ತಿದ್ದವು.
ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು ನೆಲಕ್ಕೆ ಉರುಳಿ,ಒಣ ಕಟ್ಟಿಗೆಯಾಗಿ ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು ಇಲಿ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ ಇಲಿ ಆಯಾಯಿತು. ಆ ಇಲಿಗೆ
ನಿದ್ದೆಯಿಂದ ಎಚ್ಚರವಾಯಿತು.
ಕನಸಿನಿಂದ ಹೊರಬಂದು ಯಾವುದೂ ಶ್ರೇಷ್ಠ ಅಲ್ಲ ನನ್ನ ಬದುಕು,ನನ್ನ ವೃತ್ತಿಯೇ ಶ್ರೇಷ್ಠ
ಎಂದು, ಅರಿವಾಯಿತು.

ಆದ್ದರಿಂದ ನಾವೂ ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ ಡಿ.ಸಿ. ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು ಅದು ಶ್ರೇಷ್ಠ. ಆಗ ಆರಾಮವಾಗಿರುತ್ತೇವೆ,
ನನ್ನ ವೃತ್ತಿ ,ನನ್ನ ಜೀವನ ಸರಿಯಿಲ್ಲ ಎಂದು ಮರುಕು ದಃಖ ಪಟ್ಟರೇ “ಇಲಿಯ” ಕನಸಿನಂತೆ ಅಲ್ವಾ..?

ಇದ್ದ ಬದುಕು, ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ.

ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ.

ಈ ಪ್ರಪಂಚಕ್ಕೆ ನಾವು ಬಂದಿರುವುದು ನಾವು ಕಟ್ಟಿಕೊಂಡ ಬದುಕಿನಲ್ಲಿ ಸಂತೋಷದಿಂದ ಬದುಕುವುದಕ್ಕೆ .
ಇಲ್ಲ ಸಲ್ಲದ ಆಸೆಗಳಿಂದ ನಗು ಮತ್ತು ಸಂತೋಷವನ್ನೇ ಮರೆತು ಹೋಗಿದ್ದೇವೆ.
ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.

ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ ಸಾವಿರ ವರ್ಷ ಇರಲ್ಲ .

ನಗುವೇ ಜೀವನ.
ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ
ನಗ್ರೀ.

ನಗಿಸಿರಿ.

ನಗ್ನಗ್ತಾ ಇರಿ……..,

🌴🌴HAPPY LIFE🌴🌴
[11/12 9:41 AM] ‪+91 94486 65959‬: ಮನುಷ್ಯತ್ವದ ಬಗ್ಗೆ ನಿಮಗೇನು ಅಚ್ಚರಿ ಹುಟ್ಟಿಸುತ್ತದೆ ಎಂದು ದಲಾಯಿ ಲಾಮರನ್ನು ವಿಚಾರಿಸಿದಾಗ ಅವರು ಉತ್ತರಿಸಿದ್ದು ಹೀಗೆ: “ಮನುಷ್ಯನು ಸಂಪತ್ತು ಗಳಿಸಲು ಆರೋಗ್ಯವನ್ನು ತ್ಯಾಗಮಾಡುತ್ತಾನೆ,ನಂತರ ಆರೋಗ್ಯವನ್ನು ಗಳಿಸಲು ಸಂಪತ್ತನ್ನು ತ್ಯಾಗಮಾಡುತ್ತಾನೆ.ಆಮೇಲೆ ತನ್ನ ಭವಿಷ್ಯತ್ತಿನ ಬಗ್ಗೆ ಎಷ್ಟು ಚಿಂತಾಪರನಾಗುತ್ತಾನೆಂದರ ವರ್ತಮಾನವನ್ನು ಅನುಭವಿಸುವುದನ್ನೇ ಮರೆತುಬಿಡುತ್ತಾನೆ.ಇದರ ಪರಿಣಾಮ ಸ್ವರೂಪವಾಗಿ ಮನುಷ್ಯ ತನ್ನ ವರ್ತಮಾನ ಮತ್ತು ಭವಿಷತ್ತನ್ನು ಅನುಭವಿಸಲಾರದೆ ತನಗೆ ಸಾವೇ ಇಲ್ಲದಂತೆ ವರ್ತಿಸಿ ಕೊನೆಗೆ ಏನನ್ನೂ ಸಾಧಿಸದೆ ಮರಣವನ್ನಪ್ಪುತ್ತಾನೆ.”
[11/12 9:41 AM] ‪+91 94486 65959‬: 💠ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

♦ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll

💠ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

♦ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

💠ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

♦ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

💠ಮಂತ್ರ ಸ್ನಾನ:

♦ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃll

💠 ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

♦ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

♦ ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll

💠ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

♦ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

♦ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

💠ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

♦ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll

💠ಕ್ಷಮಾಪಣೆಗೆ ಹೇಳುವ ಮಂತ್ರ:

♦ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll

♦ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll

♦ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

💠 ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:

♦ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃl
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂl
ಲೋಕಾ ಸಮಸ್ತ ಸುಖಿನೋ ಭವಂತು

💠 ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

♦ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll

💠 ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

♦ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll

💠 ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:

♦ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll

💠ಚಿರಂಜೀವಿಗಳ ಸ್ಮರಿಸುವಿಕೆ:

♦ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ   ಚಿರಜೀವಿನಃll

💠ಮಾತಾ ಪಿತೃಗಳ ಸ್ಮರಣೆ:

♦ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃl

💠 ಸರ್ಪ ಭಯಕ್ಕೆ ಹೇಳುವ ಮಂತ್ರ:

♦ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

💠 ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:

♦ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll

💠 ಶಾಂತಿ ಮಂತ್ರಗಳು:

♦ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯl
ಮೃತ್ಯೋರ್ಮಾ ಅಮೃತಂಗಮಯಾll
ಓಂ ಶಾಂತಿಃ ಶಾಂತಿಃ ಶಾಂತಿಃ

♦ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈl
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈll
ಓಂ ಶಾಂತಿಃ ಶಾಂತಿಃ ಶಾಂತಿಃ

💠ಮಲಗುವಾಗ ಹೇಳುವ ಮಂತ್ರ:

♦ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂlkoko

ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll

ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ನಿಮ್ಮ ದಿನಚರಿಯಲ್ಲಿ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿ.
[11/12 9:41 AM] ‪+91 94486 65959‬: ಪಕ್ವತೆ ಉನ್ನತಿಯ ಲಕ್ಷಣ

ಒಮ್ಮೆ ಒಬ್ಬ ರಾಜ ಬೇಟೆಯಾಡಲು ಹೊರಟ. ಕಾಡಿನಲ್ಲಿ ನುಗ್ಗಿದ. ಉತ್ಸಾಹದಲ್ಲಿ ತುಂಬ ದೂರ ಹೋದದ್ದೇ ತಿಳಿಯಲಿಲ್ಲ. ಸಾಯಂಕಾಲವಾಗುತ್ತ ಬಂದಿತು. ಹಸಿವೆ, ನೀರಡಿಕೆಗಳು ಬಾಧಿಸುತ್ತಿವೆ. ಮರಳಿ ಪಟ್ಟಣಕ್ಕೆ ಹೋಗಬೇಕಾದರೆ ದಾರಿ ತಿಳಿಯುತ್ತಿಲ್ಲ.

ಅಷ್ಟರಲ್ಲಿ ರಾಜನನ್ನು ಹುಡುಕಿಕೊಂಡು ಸೈನಿಕನೊಬ್ಬ ಬಂದ. ಇಬ್ಬರೂ ಮುಂದೆ ಬರುವಾಗ ಮಂತ್ರಿಯೂ ಸೇರಿಕೊಂಡ. ಮೂವರೂ ಸೇರಿ ತಮ್ಮ ಪಟ್ಟಣದ ಮಾರ್ಗ ಅರಸುತ್ತಿದ್ದರು. ಕೊನೆಗೆ ಕಾಡಿನ ಕೊನೆಗೆ ಬಂದು ಒಂದು ಪುಟ್ಟ ಹಳ್ಳಿ ಪ್ರವೇಶಿಸಿದರು. ದಾರಿಯನ್ನು ಕೇಳಲು ಮೂವರೂ ಮೂರು ದಿಕ್ಕಿಗೆ ನಡೆದರು.

ರಾಜನಿಗೆ ಒಂದು ದಾರಿ ಸಿಕ್ಕಿತು, ಆದರೆ ದಾರಿಯಲ್ಲಿ ಯಾರೂ ಇರಲಿಲ್ಲ. ಮುಂದೆ ರಸ್ತೆ ಎರಡು ಭಾಗವಾಗುತ್ತಿತ್ತು. ಆ ಸ್ಥಳದಲ್ಲೇ ಮರದ ಕೆಳಗೆ ಒಬ್ಬ ಸನ್ಯಾಸಿ ಕುಳಿತಿದ್ದ. ಅವನನ್ನು ನೋಡಿದರೆ ಪೂರ್ಣ ಅಂಧನಂತೆ ತೋರುತ್ತಿತ್ತು. ರಾಜ ಹೋಗಿ, `ಪೂಜ್ಯ ಸನ್ಯಾಸಿಗಳೇ ವಂದನೆಗಳು. ನಾನು ದಾರಿ ತಪ್ಪಿಸಿಕೊಂಡಿದ್ದೇನೆ.

ನನಗೆ ಪಟ್ಟಣ ಸೇರಬೇಕಾಗಿದೆ. ಮುಂದಿರುವ ಎರಡು ದಾರಿಗಳಲ್ಲಿ ಯಾವುದು ಸರಿ ಎಂದು ಮಾರ್ಗದರ್ಶನ ನೀಡಬಲ್ಲಿರಾ` ಎಂದು ಕೇಳಿದ. ಆಗ ಅಂಧ ಸನ್ಯಾಸಿ, `ದಯವಿಟ್ಟು ಎಡಗಡೆಯ ರಸ್ತೆಯಲ್ಲೇ ಹೋಗಿ ಅದು ನಿಮ್ಮನ್ನು ಪಟ್ಟಣಕ್ಕೇ ತಲುಪಿಸುತ್ತದೆ` ಎಂದ. ಮಂತ್ರಿಯೂ ಅಲ್ಲಲ್ಲಿ ತಿರುಗಾಡಿ ಮತ್ತೆ ಅಲ್ಲಿಗೇ ಬಂದ. ಅವನೂ ಸನ್ಯಾಸಿಯನ್ನು ಅದೇ ಪ್ರಶ್ನೆ ಕೇಳಿ ಅದೇ ಉತ್ತರ ಪಡೆದುಕೊಂಡ.

ಆದರೆ ಸನ್ಯಾಸಿ ದಾರಿ ತೋರುವಾಗ, `ಇದೇ ತಾನೇ ತಮ್ಮ ರಾಜರು ಹೀಗೆಯೇ ಹೋದರು` ಎಂದ. ಕೆಲ ಸಮಯದ ನಂತರ ಸೈನಿಕ ಅಲ್ಲಿಗೇ ಬಂದ. ಸನ್ಯಾಸಿಯನ್ನು ದಾರಿ ಕೇಳಿದ. ಆಗ ಸನ್ಯಾಸಿ `ಹೌದಪ್ಪ, ಎಡಗಡೆಯ ದಾರಿಯನ್ನೇ ಹಿಡಿದು ಹೋಗು. ಅದೇ ಮಾರ್ಗವಾಗಿ ಇದೀಗ ನಿಮ್ಮ ರಾಜರು ಮತ್ತು ಮಂತ್ರಿಗಳು ಹೋಗಿದ್ದಾರೆ` ಎಂದ.

ನಂತರ ಮೂವರೂ ದಾರಿಯಲ್ಲಿ ಸೇರಿಕೊಂಡಾಗ ಸನ್ಯಾಸಿ ಮಾರ್ಗದರ್ಶನ ಮಾಡಿದ ವಿಷಯ ಚರ್ಚೆಗೆ ಬಂತು. ರಾಜನಿಗೆ ಒಂದು ಸಂದೇಹ ಬಂತು. ತಾನು ಸನ್ಯಾಸಿಯನ್ನು ಕೇವಲ ದಾರಿ ಕೇಳಿದೆನೇ ಹೊರತು ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ಆದರೂ ತಾನು ರಾಜ ಎಂದು ಅವನಿಗೆ ಹೇಗೆ ಗೊತ್ತಾಯಿತು. ಹಾಗಾದರೆ ಆತ ಅಂಧತ್ವದ ನಾಟಕ ಮಾಡುತ್ತಿದ್ದಾನೆಯೇ. ಮಂತ್ರಿಗೂ, ಸೈನಿಕನಿಗೂ ಇದೇ ಪ್ರಶ್ನೆ ಬಂದಿತು.

ಮೂವರೂ ಮರಳಿ ಸನ್ಯಾಸಿಯ ಕಡೆಗೆ ನಡೆದರು. ಆತ ನಿಜವಾಗಿಯೂ ಅಂಧನೇ. ನಮ್ಮ ಪರಿಚಯ ತಮಗೆ ಹೇಗೆ ಆಯಿತು ಎಂದು ಕೇಳಿದಾಗ ಆತ ಹೇಳಿದ, `ತಾವು ದಾರಿ ಕೇಳುವಾಗ ಪೂಜ್ಯ ಸನ್ಯಾಸಿಗಳೇ ಎಂದು ಕರೆದಿರಿ. ತಮ್ಮ ಧ್ವನಿಯಲ್ಲಿದ್ದ ವಿನಯ, ಗಾಂಭೀರ್ಯ ತಾವು ರಾಜರೇ ಇರಬೇಕೆಂದು ತಿಳಿಸಿತು.

ನಂತರ ಬಂದ ಮಂತ್ರಿಗಳು ಸಾಧುಗಳೇ ಎಂದು ಕರೆದರು. ಆಮೇಲೆ ಬಂದ ಸೈನಿಕ ಏ ಕುರುಡ ಬಾಬಾ ಎಂದು ಕೂಗಿದ. ನೀವು ಮೂವರೂ ಬಳಸಿದ ಭಾಷೆ ಮತ್ತು ಧ್ವನಿಯಿಂದ ನಿಮ್ಮ ಸ್ಥಾನಗಳನ್ನು ಊಹಿಸಿದೆ`. ಯಾವಾಗಲೂ ನಮ್ಮ ನಾಲಿಗೆ ನಮ್ಮ ಮಟ್ಟ ಸಾರುತ್ತದೆ. ಅಂತೆಯೇ ಉನ್ನತಸ್ಥಾನಕ್ಕೇರಿದವರು ತಮ್ಮ ಭಾಷೆಯನ್ನೂ, ಧ್ವನಿಯನ್ನು ಮೃದುಗೊಳಿಸಿಕೊಳ್ಳಬೇಕು. ಮೃದುತ್ವ ಪರಿಪಕ್ವವಾದದ್ದರ ಲಕ್ಷಣ.

ಮರ ಎತ್ತರವಾದಷ್ಟೂ ಬಾಗುತ್ತದೆ, ಹಣ್ಣು ತುಂಬಿದ ಮರವೂ ಬಾಗುತ್ತದೆ. ಒಗರು, ಹುಳಿಯಾಗಿದ್ದ ಬಿರುಸು ಕಾಯಿ ಮಾಗಿದ ಹಾಗೆ ಮೃದುವಾಗಿ, ಸಿಹಿಯಾಗುತ್ತದೆ. ಈ ಪಕ್ವತೆಯೇ ಉನ್ನತಿಯ ಲಕ್ಷಣ.
[11/12 9:42 AM] ‪+91 94486 65959‬: ಮನಸಿನ ಮಾತು..

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ….?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ….
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪಾರ್ಸ್’ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

ನಡೆಯುತ್ತಿದ್ದರೆ ಬೂಟ್’ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್’ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್’ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್’ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್’ಗೆ ಒಳ್ಳೆಯ ಬೂಟ್’ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.

‘ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ’ ಎಂಬ ಭಿತ್ತಿಪತ್ರ ಕಾಣಿಸಿತ್ತು.

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ….?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ…..

ಈಗ ಬೂಟ್’ಗಳಿಂದ ನೋವಾಗುತ್ತಿಲ್ಲ….

ಮನೆಯಲ್ಲಿ ಅಪ್ಪ ಇಲ್ಲ… ಸ್ಕೂಟರ್ ಇಲ್ಲ… ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ….!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ….!

” ಬೇಡ ಅಪ್ಪ…! ನನಗೆ ಬೈಕ್ ಬೇಡ….!!ಅಂದೆ

ಆವಾಗ್ಲೆ ಗೊತ್ತಾಗಿದ್ದು ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ ಮಿತ್ರರೆ……..🙏🏼
[11/12 10:14 AM] Umakka: ಸ್ನೇಹಿತರೆಂದರೆ ಹೀಗೆ ಇರಬೇಕು ?

ಎಲ್ಲರಿಗೂ ಇರಲೇಬೇಕಾದ 3 ಬಗೆಯ ಸ್ನೇಹಿತರು

ಬಂಧುಬಾಂಧವರಿಗಿಂತ ಸ್ನೇಹಿತರೇ ಉತ್ತಮ ಎಂಬ ಮಾತುಗಳನ್ನ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ಎಲ್ಲಾ ಸ್ನೇಹಿತರೂ ನಮ್ಮ ಹಿತಕ್ಕೆ ಧಾವಿಸುವುದಿಲ್ಲ. ನಮಗೆ ತುಂಬಾ ಬೇಕಾಗುವ ಮೂರು ಬಗೆಯ ಸ್ನೇಹಿತರು ಯಾರು..?

1) ಏನು ಬೇಕಾದರೂ ಮಾಡುತ್ತಾರೆ..
ಕೆಲ ಅಪರೂಪದ ಸ್ನೇಹಿತರು ಇರುತ್ತಾರೆ. ಸ್ನೇಹಿತರಿಗೆ ಸಹಾಯ ಮಾಡಲು ಇವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಸ್ನೇಹಿತರ ಸಣ್ಣಪುಟ್ಟ ಸಮಸ್ಯೆಗಳಿಗೂ ಇವರು ಸ್ಪಂದಿಸುತ್ತಾರೆ. ತಮಗೆ ಕೈಲಾಗಿದ ಸಹಾಯ ಇವರು ಮಾಡಿಯೇ ತೀರುತ್ತಾರೆ. ಇಂಥ ಸ್ನೇಹಿತರನ್ನ ಹೊಂದಿದವರು ನೆಮ್ಮದಿಯಿಂದ ಇದ್ದೇ ಇರುತ್ತಾರೆ.

2) ಸಂತೈಸುವ ಸ್ನೇಹಿತ..!
ಯಾವುದೇ ವ್ಯಕ್ತಿಯಾದರೂ ಕಷ್ಟಗಳು, ದುಃಖ ದುಮ್ಮಾನಗಳು ತಪ್ಪುವುದಿಲ್ಲ. ದಾರಿ ಕಾಣದೇ ಒದ್ದಾಡುವ ಸಂದರ್ಭದಲ್ಲಿ ಕೆಲ ಸ್ನೇಹಿತರು ಕಾರ್ಮೋಡಗಳನ್ನ ಸರಿಸಿ ನಿಜ ದಾರಿಗಳನ್ನ ತೋರಿಸುತ್ತಾರೆ. ಸ್ನೇಹಿತರಿಗೆ ಪ್ರೇರಣೆ ನೀಡಿ ಮುನ್ನಡೆಯುವಂತೆ ಮಾಡುತ್ತಾರೆ. ದುಃಖಿತ ಸ್ನೇಹಿತರನ್ನ ತೋಳಲ್ಲಿಟ್ಟುಕೊಂಡು ಸಂತೈಸುತ್ತಾರೆ.

3) ನಗಿಸುತ್ತಾರೆ…!
ಮೂಡ್ ಆಗಿದ್ದರೆ ಕೆಲ ಸ್ನೇಹಿತರು ಹಾಸ್ಯ ಚಟಾಕಿ ಸಿಡಿಸಿ ವಾತಾವರಣವನ್ನ ತಿಳಿಗೊಳಿಸುತ್ತಾರೆ. ಖಿನ್ನತೆಯ ಛಾಯೆ ದೂರವಾಗಿ ಮನಸು ನಳನಳಿಸುವಂತೆ ಮಾಡುತ್ತಾರೆ.

ನನ್ನ ಪ್ರಾಣ ಸ್ನೇಹಿತ‌

ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ

ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ

ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ

ಓ ಗೆಳೆಯ! ನೀ ಬ೦ದೆ ಜೀವನದಲಿ.

ಮಮತೆ ತೊರುವ ತಾಯಿಯ೦ತೆ; ಪ್ರೇತಿ ತೋರುವ ತ೦ದೆಯ೦ತೆ

ಕಷ್ಠದಲಿ ಕಾಪಾಡುವ‌ ದೈವದ೦ತೆ; ಬೇಡಿದನ್ನು ನೀಡುವ ಕರ್ಣನ೦ತೆ

ಓ ಗೆಳೆಯಾ! ನಿನ್ನನ್ನು ಪಡೆದಿರುವ ನಾನೆಷ್ಟು ಪುಣ್ಯವ೦ತ‌

ಈಗ ನಾನೇ ಇಲ್ಲಿ ಸಿರಿವ೦ತ!

ಏನು ಪುಣ್ಯ ಮಾಡಿದೆನೂ ನಿನ್ನ ಪಡೆಯಲು ಈ ಜನುಮದಲಿ

ನೀನೇ ಹುಟ್ಟಿ ಬಾ! ಮರುಜನುಮಗಳಲಿ

ಎ೦ದೆ೦ದಿಗೂ ನೀ ತು೦ಬಿರುವೆ ಮನದಲಿ

ಶಾಶ್ವತವಾಗಿ ಉಳಿಯುವೆ ನನ್ನ ನೆನಪಲಿ.

ನಿಮ್ಮ ಪ್ರೀತಿಯ ಸ್ನೇಹಿತ

[15/12 9:50 AM] ‪+91 94486 65959‬:                     ಧಮ೯
ದೃತರಾಷ್ಟ್ರ ವಿದುರನಿಗೆ ಒಂದು ಕೇಳಿದ ಪ್ರಶ್ನೆ ಕೇಳುತ್ತಾನೆ, “ಧಮ೯ದ ಆಚರಣೆ  ಎಂದರೇನು? ಇದು ಇಂತಹವರಿಗೆ ಸಾಧ್ಯ?  ಯಾರಿಗೆ ಧರ್ಮಾತ್ಮ ಎನ್ನುತ್ತಾರೆ ? ”
ವಿದುರನಿಗೆ ಸ್ವಲ್ಪ ಆಶ್ಚರ್ಯವಾದರೂ ರಾಜನಿಗೆ ಸಮರ್ಥವಾಗಿ  ಉತ್ತರ ಹೇಳಲು ಮುಂದಾಗುತ್ತಾನೆ.
“ಮಹಾರಾಜ ,  ಧಮ೯ದ ಹಾದಿ ಎನ್ನುವುದು ಅತ್ಯಂತ ಕಷ್ಟದ ಹಾದಿ.   ಇದನ್ನು ಕೇಳುವುದಕ್ಕೆ ಹಿತವಾಗಿರುತ್ತದೆ,  ಅದನ್ನು ಪಾಲಿಸುವುದು ಬಹಳ ಕಷ್ಟ.  ಆದರೆ, ಇದು ಕೆಲವರಿಗೆ ಮಾತ್ರ ಸಾಧ್ಯ.
ಯಾರು ಲೌಕಿಕದಲ್ಲಿ  ಆಸಕ್ತಿಗಳನ್ನು ಕ್ಷಣಿಕವೇ೦ದು ಭಾವಿಸುತ್ತಾರೋ, ಯಾರು ತನ್ನ ಕತ೯ವ್ಯಕ್ಕೆ ಯಾವುದೇ ಪ್ರತಿಫಲಗಳನ್ನು ನಿರೀಕ್ಷಿಸುವುದಿಲ್ಲವೋ, ಯಾರು ಪರಿಸ್ಥಿತಿ ಮತ್ತು ಸ೦ಧಭ೯ಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದಿಲ್ಲವೋ,  ಯಾರು ಕ್ಷಣಿಕ
ವಸ್ತುಗಳಿಗೆ ಆಸೆಯನ್ನು  ಪಡುವುದಿಲ್ಲವೋ, ಯಾರು ತಾನು ಕಳೆದುಕೊ೦ಡುದುದಕ್ಕೆ ಯಾವುದೇ  ವ್ಯಥೆ ಪಡುವುದಿಲ್ಲವೋ, ಯಾರಿಗೆ ಎ೦ತಹ ಕಠಿಣ  ಪರಿಸ್ಥಿತಿ ಬಂದರು ಅದನ್ನು  ಸಮಥ೯ನಾಗಿ ಮೆಟ್ಟಿನಿಲ್ಲುವ  ಶಕ್ತಿಯನ್ನು ಹೊಂದಿರುತ್ತಾನೋ,
ಯಾರು ಎ೦ತಹ ಸ್ಥಿತಿಯಲ್ಲೂ ಕತ೯ವ್ಯ ವಿಮುಖನಾಗುವುದಿಲ್ಲವೋ, ಯಾರಿಗೆ ಇ೦ದ್ರಿಯಗಳ ಮೇಲೆ ನಿಗ್ರಹವಿರಿಸಿ ಕೊ೦ಡಿರುವವನೋ,  ಯಾರು  ಇಷ್ಟೆಲ್ಲಾ ಗುಣಗಳನ್ನು ಹೊಂದಿರುತ್ತಾರೋ   ಅಂತಹವರಿಗೆ  ಧರ್ಮ ಆಚರಿಸುವುದು ಸಾಧ್ಯ.”
ಅವನೇ ನಿಜವಾದ ಧಮಾ೯ತ್ಮ . ಇ೦ತಹ ಧರ್ಮಾತ್ಮನ  ಹೃದಯ ಸ್ಪಟಿಕದಷ್ಟೇ  ಪಾರದಶ೯ಕ.    ಆತನೊಳಗಿನ ಜ್ಞಾನವೇ ಅವನಿಗೆ ಮಾಗ೯ದಶಿ೯ ಗುರುವಾಗಿರುತ್ತಾನೆ ” .
Regards,

Prakash.H.N
9964827580
[15/12 9:50 AM] ‪+91 94486 65959‬: ಶ್ರೀವಾಣಿ-102

ವಸ್ತು ಎಲ್ಲಿಯವರೆಗೆ ಸೀಮಿತವಾಗಿರುತ್ತದೆ ಅಲ್ಲಿಯವರೆಗೆ ಆಧಾರ ಇರಬೇಕಲ್ಲ. ಎಲ್ಲ ಪದಾರ್ಥಗಳಿಗೆ ಭೂಮಿ ಆಧಾರ. ಆದರೆ ಭೂಮಿ ಆಂತರಿಕ್ಷದಲ್ಲಿ ತೇಲುತ್ತಾ ಇದೆ. ಈ ಭೂಮಿಯ ಚಲನೆಗೆ, ಅಸ್ತಿತ್ವಕ್ಕೆ ಆಧಾರ ಬೇಕಲ್ಲ! ಎಲ್ಲಾ ವಸ್ತುಗಳು ಆಕಾಶದಲ್ಲಿ ತೇಲುತ್ತಾ ಇವೆ. ಆಕಾಶ ಸರಿಸಿದರೆ ಎಲ್ಲಾ ನಿರಾಧಾರ ಆಗುತ್ತದೆ. ಇಂತಹ ಅವಕಾಶ, ಬಯಲು ಸರ್ವ ಪದಾರ್ಥಗಳ ಆಧಾರ.

ಭೌತಶಾಸ್ತ್ರಜ್ಞರು ಹೇಳುವ ಪ್ರಕಾರ ಆಕಾಶವೂ ಶಾಶ್ವತವಲ್ಲ! ಸ್ಟೀಪನ್ ಹಾಕಿನ್ ನಂತವರು ಒಂದು ಸಿದ್ಧಾಂತ ಮಂಡಿಸಿದ್ದಾರೆ. ಈ ಆಕಾಶ, ಪದಾರ್ಥಗಳು, ಭೂಮಿ ಇವು ಪ್ರತ್ಯೇಕ ಅಲ್ಲ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದರ ಅರ್ಥ ಇಷ್ಟೇ ಈ ಜಗತ್ತು ಮೊದಲು ಇರಲಿಲ್ಲ, ಕೊನೆಗೊಮ್ಮೆ ಮರೆಯಾಗುತ್ತದೆ. ಸಮಸ್ತ ಪದಾರ್ಥಗಳೆಲ್ಲಾ ಮರೆಯಾಗುತ್ತವೆ. ಎಲ್ಲಾ ಮರೆಯಾಗಿ ಉಳಿಯುತ್ತದೆಯಲ್ಲ ಅದು ಪರಮ ಸತ್ಯ. ಅದು ದೇವರು, ಪರಮ ಆಧಾರ.

ಯಾವುದು ಎಲ್ಲಾ ಪದಾರ್ಥಗಳಿಗೆ, ಜೀವಜಗತ್ತಿಗೆ ಆಧಾರವಾಗಿದೆಯೋ ಅದು ಪರಮ ಆಧಾರ. ಅದು ಮೂಲ ಅಸ್ತಿತ್ವ, ಅದು ಇಲ್ಲದಿದ್ದರೆ ನಾನು ಇಲ್ಲ, ನೀನು ಇಲ್ಲ, ಜಗತ್ತೇ ಇಲ್ಲ.

ಒಬ್ಬ ಕವಿ ಬರೆಯುತ್ತಾನೆ:

Who flies the kite?
I, said the boy.
I, said the wind.
I, said the string…because I am a thing I fly the kite…
I, said the tail… I make it sail…
All are right … All are wrong said the unknown voice.

ಒಂದು ಗಾಳಿಪಟ ಹೀಗೆ ಆಕಾಶದಲ್ಲಿ ಹಾರುತ್ತದೆ…
ಒಬ್ಬ ಮಹಾಶಯ ಕೇಳುತ್ತಾನೆ. ಯಾರು ಈ ಪಟವನ್ನು ಹಾರಿಸುತ್ತಿದ್ದಾರೆ.
ಹುಡುಗ ಹೇಳಿದ, ನಾನು ಹಾರಿಸುತ್ತಿದ್ದೇನೆ. ನನ್ನ ಆನಂದಕ್ಕೆ ನಾನು ಹಾರಿಸುತ್ತಿದ್ದೇನೆ.
ಗಾಳಿ ಹೇಳಿತು ನಾನು ಹಾರಿಸುತ್ತಿದ್ದೇನೆ. ನನ್ನ ಇಚ್ಛೆಯಂತೆ ಹಾರಿಸುತ್ತಿದ್ದೇನೆ.
ದಾರ ಹೇಳಿತು ನಾನು ಹಾರಿಸುತ್ತಿದ್ದೇನೆ.
ಪತಂಗದ ಬಾಲ ಹೇಳಿತು ನಾನು ಹಾರಿಸುತ್ತಿದ್ದೇನೆ. ನಾನಿಲ್ಲದಿದ್ದರೆ ಪಟ ಹಾರುತ್ತಿರಲಿಲ್ಲ.
ಆಗ ಒಂದು ವಾಣಿ ಹೇಳಿತು ಎಲ್ಲರೂ ಖರೇ ಹೇಳುತ್ತಿದ್ದಾರೆ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ.
ಎಷ್ಟು ಮಜ ಇದೆ.
ಹುಡಗನಿಗೆ ಹಾರಿಸಲು ಬರಲ್ಲ,
ಗಾಳಿಗೆ ಹಾರಿಸಲು ಬರಲ್ಲ,
ಬಾಲಕ್ಕೆ…
ದಾರಕ್ಕೆ…
ಹಾರಿಸಲು ಬರಲ್ಲ.

ಆದರೆ ಎಲ್ಲವನ್ನು ಹಾರಿಸುವ ಅದ್ಭುತ ಶಕ್ತಿ ಇದೆ. ಅದನ್ನು ಮರೆತು ಎಲ್ಲರೂ ಮಾತನಾಡುತ್ತಾರೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

 

When I heard the story of Gautam Buddha, my question was always about his wife and son that he left behind…this write-up by Vikram Bhattacharya touches that part of the story 😊
—————

He left her in the middle of the night, the night their son was
born. When she heard the news
she was devastated.

Yet, she did not complain but her
life lost all meaning. The only
reason for her to live now was
her son. She wanted him to grow
up to be a man that the world
would look up to.

Her friends and relatives came
around and asked her to forget
about the man who had left her
and start life again.

They asked her to marry again
but she refused. She was young
& beautiful & suitors queued up
outside her door, but she refused each one of them.

Then one fine day he came back !

He stood in front of her and she could hardly remember him as the man who had left her. “They call you the Buddha now?” she asked him gently.

“I hear they do,” he answered in
a calm fashion.

“What does it mean?” she further inquired.

“I think it means the enlightened one, a knower,” he informed.

She smiled and then a silence.
“I suppose we have both learned something. Your lessons O Buddha, will make the world richer in spirit, but my lesson will unfortunately remain largely unknown.”
she reflected deeply….

“ And what lesson is that ? ”
The Buddha probed.

Her eyes sparkled with unshed tears, “That a courageous woman does not need anyone to complete her…..
SHE IS COMPLETE ON HER OWN ”

Saluting womanhood for the Yashodhara spirit. !!! 🙏

 

[14/12 10:43 PM] ‪+91 94486 65959‬: ಗೆಳೆಯರೆ ಖಂಡಿತಾ ನಗ್ತಿರಿ ಓದಿ ಈ ಕಥೆನ…
¤¤¤¤¤¤¤¤¤¤¤¤¤¤¤¤

ಅಪ್ಪ ಮಗ ಕಟ್ಟಿಗೆ ತರಲು ಕಾಡಿಗೆ ಹೋದರು ………..
ಮಗ ಕಟ್ಟಿಗೆ ಕಡಿಯುವಾಗ ಕಾಲು ಜಾರಿ ನೀರಿಗೆ ಬಿದ್ದ……..
ತಂದೆ ದೇವರನ್ನು ಪ್ರಾರ್ಥಿಸಲು, ದೇವರು ಪ್ರತ್ಯೇಕ್ಷನಾಗಿ ಸಮಸ್ಯೆ ಅರಿತು ನೀರಿನಲ್ಲಿ ಮುಳುಗಿದ…
ಮುಳುಗಿದ್ದ ದೇವರು ಸಿದ್ರಾಮಯ್ಯನ ಎತ್ತಿಕೊಂಡು ಬಂದು ಇವನ ನಿನ್ನ ಮಗ ಎಂದು ಕೇಳಲು, ತಂದೆ ಹೌದು ಎಂದ.

ದೇವರು :ಅಂದು ಚಿನ್ನ ಬೆಳ್ಳಿ ಯ ಕೊಡಲಿಗಳನ್ನೆ ನನ್ನದಲ್ಲ ಎಂದೆ. ಇಂದು ಏನಾಯ್ತಪ್ಪ ನಿನ್ನ ನಿಯತ್ತು?

ತಂದೆ :ಅಂದು ಮೊದಲು ನೀನು ಚಿನ್ನದ ಕೊಡಲಿ ತಂದೆ ನಾ ನನ್ನದಲ್ಲ ಎಂದೆಳಲು ನಂತರ ಬೆಳ್ಳಿ ಕೊಡಲಿ ತಂದೆ ಕೊನೆಗೆ ನನ್ನ ಕೊಡಲಿ ತಂದು ಮೂರನ್ನು ನೀನೆ ಇಟ್ಟಿಕೊ ಎಂದೆ.

ಇಂದು ಮೊದಲು ಸಿದ್ರಾಮಯ್ಯನ ಎತ್ತಿಕೊಂಡು ಬಂದೆ.
ನಾನು ನನ್ನ ಮಗನಲ್ಲ ಎಂದಿದ್ದರೆ ನಂತರ ರಾಹುಲ್ ನ ಎತ್ತಿಕೊಂಡು ಬರುತ್ತಿದ್ದೆ ಆಗಲೂ ನನ್ನ ಮಗನಲ್ಲ ಎಂದಿದ್ದರೆ ಕೊನೆಗೆ ನನ್ನ ಮಗನೆತ್ತಿಕೊಂಡು ಬಂದು ಮೂರು ಜನರನ್ನು ನೀನೆ ಸಾಕಿಕೊ ಎನ್ನುತ್ತಿದ್ದೆ.

ದೇವರು : ಹೌದು. ಅದಕ್ಕೆ?

ತಂದೆ : ದೇವರೇ, ನಾನು ಬಡವ
ಒಬ್ಬ ಮುಟ್ಠಾಳನ ಸಾಕೊದೆ ಕಷ್ಟ ಮೂರು ಮೂರು ಜನ ಮುಟ್ಠಾಳರನ್ನು ಹೇಗೆ ಸಾಕಲಿ.😜😝😜😝
[14/12 10:43 PM] ‪+91 94486 65959‬: ಪ್ರೇಮಕಥೆ”

ಒಂದುದಿನ ಒಬ್ಬ ಸುಂದರ ಹುಡುಗ ಒಂದು ಹುಡುಗಿಯ ಮನೆಯ ಮುಂದೆ ತನ್ನ ಸೈಕಲ್ ನಿಲ್ಲಿಸಿಕೊಂಡಿದ್ದ. ಆ ಹುಡುಗಿ ಕಾಲೇಜಿಗೆ ಹೋದ ಬಳಿಕ ಆತ ತನ್ನ ಮನೆಗೆ ಹೋಗುತಿದ್ದ. ಇದುದಿನ ಹೀಗೆ ನಡೆಯುತಿತ್ತ್ತು. ಎಂದು ಆತ ಆ ಹುಡುಗಿಯೋಂದಿಗೆ ಮಾತಾಡಿರಲಿಲ್ಲ . ಅಕೆಯು ಪ್ರತಿ ದಿನವೂ ಆತನನ್ನು ಗಮನಿಸತ್ತಾ ಇದ್ದಳು. ಅವಳು ಗೇಟ್ ದಾಟಿ ಹೊರ ಬಂದಾಗ ಆತ ಅಕೆಯನ್ನು ಗಮನಿಸಿದೆ ಮೊಬೈಲ್ ನಲ್ಲಿ ಮುಳುಗಿದಂತೆ ನಟಿಸುತಿದ್ದ ಅವಳನ್ನು ಮಾತನಾಡಿಸುವ ಧೈರ್ಯ ಮಾಡಲೆ ಇಲ್ಲ. ಆ ಹುಡುಗಿಗೆ ಇದು ಇವನು ನನ್ನ ಲವ್ ಮಾಡ್ತ ಇರ್ಬೇಕು ಅಂತ ಅನ್ನಿಸಿತು. ಇವನ ದಿನಚರಿ ಹೀಗೆ ತಿಂಗಳುಗಳ ಕಾಲ ನಡೆಯುತ್ತಿರುವುದು ಗಮನಿಸಿದ ತಂದೆ ತಾಯಿ ಆ ಹುಡುಗಿಗೆ ಬೇರೆ ಹುಡುಗನ ಜೊತೆಗೆ ಮದುವೆ ಮಾಡಲು ನಿರ್ಧರಿಸದರು. ಆ ಹುಡುಗಿ ಈತನ ನಡತೆಯಿಂದ ಪ್ರಭಾವಿತಳಾಗಿ ಆ ಹುಡುಗನ ಪ್ರೇಮ ನಿವೇದನೆಗಾಗಿ ಕಾಯ್ತಾಳೆ. ಅದರೆ ಅವನು ಪ್ರಫೋಸ್ ಮಾಡದಿದ್ದಾಗ ಇನೊ ತಡಮಾಡಿದರೆ ತಂದೆತಾಯೆ ನನಗೆ ಬೇರೆ ಮದುವೆ ಮಾಡ್ತಾರಿ ಅಂತ ತಿಳಿದು ಅವಳೇ ಅತನ ಮುಂದೆ ನಿಂತು ಹೇಳುತ್ತಾಳೆ “ನೀನು ಇಷ್ಟು ದಿನಗಳ ಕಾಲ ನಮ್ಮ ಮನೆ ಮುಂದೆ ನಿಂತ್ತದ್ದು ಯಾಕೆ ಅಂತ ತಿಳಿಯಿತು. ನನ್ನ ಬರುವುದನ್ನು ಕಾದು ನಿನ್ನ ಪ್ರೀತಿಯನ್ನು ಹೇಳಿಕೊಳ್ಳದೆ ಹಾಗೆ ಹೋಗ್ತಾ ಇದ್ದೇ ಅಲ್ವ ಈಗ ನಿಜವಾಗಿ ಹೇಳ್ತಾ ಇದ್ದೇನೆ ಐ ಲವ್ ಯು ಕಣೋ. ನಾನು ನಿನ್ನ ತುಂಬಾ ಪ್ರೀತಿಸ್ತಾ ಇದ್ದೇನೆ. ” ಹುಡುಗ ಶಾಕ್ ಆಗಿ ಹೇಳಿದ “ಹಲೋ ಆ ಉದ್ದೇಶದಿಂದ ನಿಮ್ಮ ಮನೆ ಹತ್ತಿರ ನಿಂತಿದ್ದಲ್ಲ. ಇಲ್ಲಿ ವೈ-ಫೈ ಕನೆಕ್ಟ ಆಗುತ್ತೆ ಅದ್ಕೆ ನಿಲ್ತಿದ್ದೆ ಅಷ್ಟೇ ಓಕೆನಾ… ” ಎಂದಾಗ ಆಕೆ ತಿರುಗಿಯು ನೋಡದೆ ಸಾಗುತ್ತಾಳೆ. . . . . .. . .
💖💖💖💖💖💖
Simpallag ondu love story..😀😀

[15/12 6:52 PM] Umakka: रामायण कथा का एक अंश, जिससे हमे सीख मिलती है “एहसास” की…

श्री राम, लक्ष्मण एवम् सीता’ मैया चित्रकूट पर्वत की ओर जा रहे थे,
राह बहुत पथरीली और कंटीली थी !
की यकायक श्री राम के चरणों मे कांटा चुभ गया !

श्रीराम रूष्ट या क्रोधित नहीं हुए, बल्कि हाथ जोड़कर धरती माता से अनुरोध करने लगे !
बोले- “माँ, मेरी एक विनम्र प्रार्थना है आपसे, क्या आप स्वीकार करेंगी ?”

धरती बोली- “प्रभु प्रार्थना नहीं, आज्ञा दीजिए !”

प्रभु बोले, “माँ, मेरी बस यही विनती है कि जब भरत मेरी खोज मे इस पथ से गुज़रे, तो आप नरम हो जाना !
कूछ पल के लिए अपने आँचल के ये पत्थर और कांटे छूपा लेना !
मुझे कांटा चुभा सो चुभा, पर मेरे भरत के पाँव मे अघात मत करना”

श्री राम को यूँ व्यग्र देखकर धरा दंग रह गई !
पूछा- “भगवन, धृष्टता क्षमा हो ! पर क्या भरत आपसे अधिक सुकूमार है ?
जब आप इतनी सहजता से सब सहन कर गए, तो क्या कूमार भरत सहन नही कर पाँएगें ?
फिर उनको लेकर आपके चित मे ऐसी व्याकूलता क्यों ?”

श्री राम बोले- “नही…नही माते, आप मेरे कहने का अभिप्राय नही समझीं ! भरत को यदि कांटा चुभा, तो वह उसके पाँव को नही, उसके हृदय को विदीर्ण कर देगा !”

“हृदय विदीर्ण !! ऐसा क्यों प्रभु ?”,
धरती माँ जिज्ञासा भरे स्वर में बोलीं !

“अपनी पीड़ा से नहीं माँ, बल्कि यह सोचकर कि…इसी कंटीली राह से मेरे भैया राम गुज़रे होंगे और ये शूल उनके पगों मे भी चुभे होंगे !
मैया, मेरा भरत कल्पना मे भी मेरी पीड़ा सहन नहीं कर सकता, इसलिए उसकी उपस्थिति मे आप कमल पंखुड़ियों सी कोमल बन जाना..!!”

अर्थात
रिश्ते अंदरूनी एहसास, आत्मीय अनुभूति के दम पर ही टिकते हैं ।
जहाँ गहरी आत्मीयता नही, वो रिश्ता शायद नही परंतू दिखावा हो सकता है ।

इसीलिए कहा गया है कि…
रिश्ते खून से नहीं, परिवार से नही,
मित्रता से नही, व्यवहार से नही,
बल्कि…
सिर्फ और सिर्फ आत्मीय “एहसास” से ही बनते और निर्वहन किए जाते हैं ।
जहाँ एहसास ही नहीं,
आत्मीयता ही नहीं ..
वहाँ अपनापन कहाँ से आएगा ।
[15/12 10:07 PM] ‪+91 94486 65959‬: #ಶ್ರೀವಾಣಿ_147

ದೇವನು ಅಬಂಧಿತ:-
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- ‘ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!’
ಸಿರಿವಂತನು ದೇಶ – ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ‘ದೇವರು ನನ್ನ ಮಂದಿರದಲ್ಲಿ ಬಂಧಿತನಾದ!’ ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
“ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು.” ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- “ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?” ಬಾಲಕ ಹೇಳಿದ – “ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!” ಆ ವ್ಯಕ್ತಿ ಹೇಳಿದ – “ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!……… ನಿತ್ಯಮುಕ್ತ!” ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!
[15/12 10:07 PM] ‪+91 94486 65959‬: ಮಾನಿತ್ವ

—–ಅಂತರಂಗ—–

ಸ್ವಾಮೀ ಆದಿತ್ಯಾನಂದ ಸರಸ್ವತೀ
ಚಿನ್ಮಯ ಮಿಷನ್, ಮಂಡ್ಯ..

ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಶ್ರೇಷ್ಠನಾಗಬೇಕು ಎಂಬಂತೆ ಬಯಸುತ್ತದೆ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಮಾನಿತ್ವವೆಂದು ಕರೆದಿದ್ದಾನೆ. ಈ ಮಾನಿತ್ವವು ನಮಗೆ ನಮ್ಮ ಭಾಷೆಯಲ್ಲಿ, ನಮ್ಮ ದೇಶದಲ್ಲಿ, ನಮ್ಮ ರೂಪದಲ್ಲಿ, ನಮ್ಮ ವಿದ್ಯೆಯಲ್ಲಿ, ನಮ್ಮ ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ನಮ್ಮ ಅಜ್ಞಾನ. ನಾವು ಮನಸ್ಸನ್ನು ವಿಶಾಲಗೊಳಿಸುತ್ತ ಹೋದಂತೆ ನಮ್ಮ ಸಣ್ಣತನ ನಮ್ಮಿಂದ ದೂರವಾಗುತ್ತದೆ. ಒಂದು ವೇಳೆ ನಾವು ಹೀಗೆ ಮಾಡದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಬೀಜ ನೆಟ್ಟಂತಾಗುತ್ತದೆ. ಹಲವಾರು ಪುರಾಣ ಇತಿಹಾಸದಲ್ಲಿ ನಾವು ಈ ಸತ್ಯವನ್ನು ಕಂಡಿದ್ದೇವೆ.

ಪಾಂಡವರು ಮತ್ತು ಕೌರವರಿಗೆ ಗುರುಗಳು ದ್ರೋಣಾಚಾರ್ಯರು. ವಿದ್ಯಾಭ್ಯಾಸವಾದ ಮೇಲೆ ಗುರುದಕ್ಷಿಣೆಯನ್ನು ಸಮರ್ಪಿಸಲು ಅವರು ಬಂದಾಗ ಆಚಾರ್ಯರು ತಮ್ಮ ಹಾಗೂ ದ್ರುಪದನ ಸ್ನೇಹ ಹಾಗೂ ದ್ವೇಷದ ವೃತ್ತಾಂತವನ್ನು ತಿಳಿಸಿ, ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಪಾದದಡಿಯಲ್ಲಿ ಬೀಳುವಂತೆ ಮಾಡಿದರೆ ಅದೇ ನಿಮ್ಮ ಗುರುದಕ್ಷಿಣೆ ಎನ್ನುತ್ತಾರೆ. ಅರ್ಜುನನು ಆಚಾರ್ಯರ ಆಸೆಯನ್ನು ಪೂರ್ಣಗೊಳಿಸುತ್ತಾನೆ. ಆಗ ದ್ರೋಣರು ದ್ರುಪದನಿಗೆ ‘ಈಗ ಪೂರ್ತಿ ರಾಜ್ಯ ನನ್ನದಾಯಿತು. ಆದರೂ ನೀನು ನನ್ನ ಮಿತ್ರ. ನಿನಗೆ ನನ್ನ ರಾಜ್ಯದಲ್ಲಿ ಅರ್ಧವನ್ನು ಕೊಡುತ್ತೇನೆ’ ಎಂದು ಹೇಳಿ ಆತನನ್ನು ಹಿಂದೆ ಕಳುಹಿಸುತ್ತಾರೆ.

ಅವಮಾನಗೊಂಡ ದ್ರುಪದ ಸುಮ್ಮನಿರದೆ ಒಂದು ಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಆತನ ಆಸೆ ದ್ರೋಣನನ್ನು ಕೊಲ್ಲುವ ಒಬ್ಬ ಮಗ ಹಾಗೂ ಅರ್ಜುನನಿಗೆ ಕೊಟ್ಟು ವಿವಾಹ ಮಾಡಲು ಒಬ್ಬ ಮಗಳು ತನಗೆ ಜನಿಸಬೇಕು ಎಂಬುದಾಗಿರುತ್ತದೆ. ಯಾಗ ಫಲಪ್ರದವಾಗುತ್ತದೆ. ದ್ರುಪದ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ದ್ರೋಣರ ಬಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ದ್ರುಪದನ ಮನಸ್ಸನ್ನು ಅರಿತಿದ್ದ ದ್ರೋಣರು ಆತನ ಮಗನಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಕೊನೆಯಲ್ಲಿ ಶಿಷ್ಯನೇ ಕುರುಕ್ಷೇತ್ರದಲ್ಲಿ ಗುರುವನ್ನು ಸಂಹರಿಸುತ್ತಾನೆ.

ಇಲ್ಲಿ ನಾವು ಮಾನಿತ್ವದ ಉದಾಹರಣೆಯನ್ನು ಕಾಣುತ್ತೇವೆ. ದ್ರೋಣರಲ್ಲೂ ಮಾನಿತ್ವವು ಕಾಣುತ್ತದೆ ಹಾಗೂ ದ್ರುಪದನಲ್ಲೂ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದರ ಫಲ ಮರಣ. ನಮ್ಮ ಹಿರಿಯರು ಜ್ಞಾನಿಗಳು ಇದನ್ನರಿತು ನಮಗೆ ಶ್ರದ್ಧೆ, ಗೌರವ ಇನ್ನೂ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಯಲು ಹೇಳುತ್ತಾರೆ.

ಜ್ಞಾನಿಗಳು ಮಾನಿತ್ವದ ಪ್ರದರ್ಶನ ಮಾಡುವುದಿಲ್ಲ. ತಮಗೆ ಎಲ್ಲ ತಿಳಿದಿದ್ದರೂ ಏನೂ ತಿಳಿಯದ ಹಾಗೆ ವರ್ತಿಸುತ್ತಾರೆ. ತಾವು ತಿಳಿಸಿದ ಜ್ಞಾನ ತಮಗೆ ತಮ್ಮ ಗುರುಗಳಿಂದ ಹಿರಿಯರಿಂದ ಬಂದದ್ದು ಎಂದು ಹೇಳುತ್ತಾರೆ.

[15/12 6:52 PM] Umakka: रामायण कथा का एक अंश, जिससे हमे सीख मिलती है “एहसास” की…

श्री राम, लक्ष्मण एवम् सीता’ मैया चित्रकूट पर्वत की ओर जा रहे थे,
राह बहुत पथरीली और कंटीली थी !
की यकायक श्री राम के चरणों मे कांटा चुभ गया !

श्रीराम रूष्ट या क्रोधित नहीं हुए, बल्कि हाथ जोड़कर धरती माता से अनुरोध करने लगे !
बोले- “माँ, मेरी एक विनम्र प्रार्थना है आपसे, क्या आप स्वीकार करेंगी ?”

धरती बोली- “प्रभु प्रार्थना नहीं, आज्ञा दीजिए !”

प्रभु बोले, “माँ, मेरी बस यही विनती है कि जब भरत मेरी खोज मे इस पथ से गुज़रे, तो आप नरम हो जाना !
कूछ पल के लिए अपने#ವಾಣಿ_147

ದೇವನು ಅಬಂಧಿತ:-
ಒಬ್ಬ ಆಗರ್ಭ ಸಿರಿವಂತ ಇದ್ದ. ಒಂದು ದಿನ ಆತನಿಗೆ ತನ್ನ ಸಂಪತ್ತಿನ ಬಲದಿಂದ ದೇವರನ್ನು ಹೇಗಾದರೂ ಬಂಧಿಸಬೇಕು ಎನಿಸಿತು. ಯಾರೋ ಹೇಳಿದರು- ‘ಹಾಗಾದರೆ ನೀನು ಒಂದು ಭವ್ಯವಾದ ಮಂದಿರವನ್ನು ಕಟ್ಟು. ಖಂಡಿತವಾಗಿಯೂ ದೇವರು ಅದರಲ್ಲಿ ತಾನಾಗಿಯೇ ಬಂದು ನೆಲೆಸುತ್ತಾನೆ.!’
ಸಿರಿವಂತನು ದೇಶ – ವಿದೇಶಗಳಿಂದ ಪ್ರಸಿದ್ಧ ಶಿಲ್ಪಿಗಳನ್ನು ಕರೆಯಿಸಿದ. ಹತ್ತಾರು ವರುಷ ಅವರೆಲ್ಲ ದುಡಿದು ಸುಪ್ರಸಿದ್ದ ಸುಂದರ ಮಂದಿರ ಕಟ್ಟಿದರು. ಒಂದು ದಿನ ಶುಭಮುಹೂರ್ತದಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ‘ದೇವರು ನನ್ನ ಮಂದಿರದಲ್ಲಿ ಬಂಧಿತನಾದ!’ ಎಂದು ಸಿರಿವಂತ ಭಾವಿಸಿದ. ಅದೇ ಸಂತಸದಲ್ಲಿ ಸಿರಿವಂತ ಮನೆಗೆ ಹೋಗಿ ಮಲಗಿದ. ಹತ್ತಿರದಲ್ಲಿಯೇ ಆತನ ಮೂಮ್ಮಗನೂ ಮಲಗಿದ್ದ.
“ನಮ್ಮಜ್ಜ ದೇವರನ್ನು ಮಂದಿರದಲ್ಲಿ ಕೂಡಿಹಾಕಿದ್ದಾನೆ. ಆತನನ್ನು ಮುಕ್ತಗೊಳಿಸಬೇಕು.” ಎಂದು ಬಾಲಕ ಚಿಂತಿಸಿದ. ನಿದ್ರೆ ಬರಲಿಲ್ಲ. ಮಧ್ಯರಾತ್ರಿಯಲ್ಲಿ ಬಾಲಕನು ಅಜ್ಜನ ಪಕ್ಕದಲ್ಲಿದ್ದ ಕೀಲಿಕೈ ತೆಗೆದುಕೊಂಡು ಮಂದಿರಕ್ಕೆ ಬಂದ. ದೊಡ್ಡ ದೇವರ ಗುಡಿಗೆ ದೊಡ್ಡ ಕೀಲಿಕೈ ಹಾಕಲಾಗಿತ್ತು. ಬಾಲಕನಿಗೆ ಅದು ನಿಲುಕಲಿಲ್ಲ. ಆದರೂ ಆತ ಬಾಗಿಲ ಕೀಲಿತೆಗೆಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ಬಾಲಕನ ಬೆನ್ನು ಚಪ್ಪರಿಸಿ ಕೇಳಿದರು- “ಮಗು, ಏನು ಮಾಡುತ್ತಿರುವೆ ಈ ಮಧ್ಯರಾತ್ರಿಯಲ್ಲಿ ?” ಬಾಲಕ ಹೇಳಿದ – “ನಮ್ಮಜ್ಜ ಇಲ್ಲಿ ದೇವರನ್ನು ಬಂಧಿಸಿ ಬಿಟ್ಟಿದ್ದಾನೆ. ಆತನನ್ನು ಮುಕ್ತಗೊಳಿಸುತ್ತಿರುವೆ!” ಆ ವ್ಯಕ್ತಿ ಹೇಳಿದ – “ನಿಮ್ಮ ಅಜ್ಜನಿಗೆ ಎಲ್ಲೋ ಭ್ರಮೆಯಾಗಿದೆ. ದೇವರನ್ನು ಬಂಧಿಸುವ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ! ದೇವರು ಜಗದಗಲ, ಮುಗಿಲಗಲ, ಮಿಗೆಯಗಲ!……… ನಿತ್ಯಮುಕ್ತ!” ಈ ಮಾತನ್ನು ಕೇಳುತ್ತಲೇ ಬಾಲಕನಿಗೆ ಅಪಾರ ಹರ್ಷವಾಯಿತು! ಆ ಬಾಲಕನನ್ನು ಸಂತೈಸಿದವನು ಬೇರೆ ಯಾರೂ ಅಲ್ಲ ದಯಾಸಾಗರನಾದ ದೇವರೇ!
[15/12 10:07 PM] ‪+91 94486 65959‬: ಮಾನಿತ್ವ

—–ಅಂತರಂಗ—–

ಸ್ವಾಮೀ ಆದಿತ್ಯಾನಂದ ಸರಸ್ವತೀ
ಚಿನ್ಮಯ ಮಿಷನ್, ಮಂಡ್ಯ..

ನಮ್ಮ ಮನಸ್ಸು ಯಾವಾಗಲೂ ತಾನು ಎಲ್ಲರಿಗಿಂತ ಶ್ರೇಷ್ಠನಾಗಬೇಕು ಎಂಬಂತೆ ಬಯಸುತ್ತದೆ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಮಾನಿತ್ವವೆಂದು ಕರೆದಿದ್ದಾನೆ. ಈ ಮಾನಿತ್ವವು ನಮಗೆ ನಮ್ಮ ಭಾಷೆಯಲ್ಲಿ, ನಮ್ಮ ದೇಶದಲ್ಲಿ, ನಮ್ಮ ರೂಪದಲ್ಲಿ, ನಮ್ಮ ವಿದ್ಯೆಯಲ್ಲಿ, ನಮ್ಮ ಜಾತಿಯಲ್ಲಿ, ಕೆಲಸದಲ್ಲಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಮೂಲಕಾರಣ ಸತ್ಯದ ಅರಿವು ನಮಗಿಲ್ಲದಿರುವುದು ಮತ್ತು ನಮ್ಮ ಅಜ್ಞಾನ. ನಾವು ಮನಸ್ಸನ್ನು ವಿಶಾಲಗೊಳಿಸುತ್ತ ಹೋದಂತೆ ನಮ್ಮ ಸಣ್ಣತನ ನಮ್ಮಿಂದ ದೂರವಾಗುತ್ತದೆ. ಒಂದು ವೇಳೆ ನಾವು ಹೀಗೆ ಮಾಡದಿದ್ದರೆ ನಮ್ಮ ಅಂತ್ಯಕ್ಕೆ ನಾವೇ ಬೀಜ ನೆಟ್ಟಂತಾಗುತ್ತದೆ. ಹಲವಾರು ಪುರಾಣ ಇತಿಹಾಸದಲ್ಲಿ ನಾವು ಈ ಸತ್ಯವನ್ನು ಕಂಡಿದ್ದೇವೆ.

ಪಾಂಡವರು ಮತ್ತು ಕೌರವರಿಗೆ ಗುರುಗಳು ದ್ರೋಣಾಚಾರ್ಯರು. ವಿದ್ಯಾಭ್ಯಾಸವಾದ ಮೇಲೆ ಗುರುದಕ್ಷಿಣೆಯನ್ನು ಸಮರ್ಪಿಸಲು ಅವರು ಬಂದಾಗ ಆಚಾರ್ಯರು ತಮ್ಮ ಹಾಗೂ ದ್ರುಪದನ ಸ್ನೇಹ ಹಾಗೂ ದ್ವೇಷದ ವೃತ್ತಾಂತವನ್ನು ತಿಳಿಸಿ, ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಪಾದದಡಿಯಲ್ಲಿ ಬೀಳುವಂತೆ ಮಾಡಿದರೆ ಅದೇ ನಿಮ್ಮ ಗುರುದಕ್ಷಿಣೆ ಎನ್ನುತ್ತಾರೆ. ಅರ್ಜುನನು ಆಚಾರ್ಯರ ಆಸೆಯನ್ನು ಪೂರ್ಣಗೊಳಿಸುತ್ತಾನೆ. ಆಗ ದ್ರೋಣರು ದ್ರುಪದನಿಗೆ ‘ಈಗ ಪೂರ್ತಿ ರಾಜ್ಯ ನನ್ನದಾಯಿತು. ಆದರೂ ನೀನು ನನ್ನ ಮಿತ್ರ. ನಿನಗೆ ನನ್ನ ರಾಜ್ಯದಲ್ಲಿ ಅರ್ಧವನ್ನು ಕೊಡುತ್ತೇನೆ’ ಎಂದು ಹೇಳಿ ಆತನನ್ನು ಹಿಂದೆ ಕಳುಹಿಸುತ್ತಾರೆ.

ಅವಮಾನಗೊಂಡ ದ್ರುಪದ ಸುಮ್ಮನಿರದೆ ಒಂದು ಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಆತನ ಆಸೆ ದ್ರೋಣನನ್ನು ಕೊಲ್ಲುವ ಒಬ್ಬ ಮಗ ಹಾಗೂ ಅರ್ಜುನನಿಗೆ ಕೊಟ್ಟು ವಿವಾಹ ಮಾಡಲು ಒಬ್ಬ ಮಗಳು ತನಗೆ ಜನಿಸಬೇಕು ಎಂಬುದಾಗಿರುತ್ತದೆ. ಯಾಗ ಫಲಪ್ರದವಾಗುತ್ತದೆ. ದ್ರುಪದ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ದ್ರೋಣರ ಬಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸುತ್ತಾನೆ. ದ್ರುಪದನ ಮನಸ್ಸನ್ನು ಅರಿತಿದ್ದ ದ್ರೋಣರು ಆತನ ಮಗನಿಗೆ ವಿದ್ಯಾಭ್ಯಾಸ ನೀಡುತ್ತಾರೆ. ಆದರೆ ಕೊನೆಯಲ್ಲಿ ಶಿಷ್ಯನೇ ಕುರುಕ್ಷೇತ್ರದಲ್ಲಿ ಗುರುವನ್ನು ಸಂಹರಿಸುತ್ತಾನೆ.

ಇಲ್ಲಿ ನಾವು ಮಾನಿತ್ವದ ಉದಾಹರಣೆಯನ್ನು ಕಾಣುತ್ತೇವೆ. ದ್ರೋಣರಲ್ಲೂ ಮಾನಿತ್ವವು ಕಾಣುತ್ತದೆ ಹಾಗೂ ದ್ರುಪದನಲ್ಲೂ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದರ ಫಲ ಮರಣ. ನಮ್ಮ ಹಿರಿಯರು ಜ್ಞಾನಿಗಳು ಇದನ್ನರಿತು ನಮಗೆ ಶ್ರದ್ಧೆ, ಗೌರವ ಇನ್ನೂ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಯಲು ಹೇಳುತ್ತಾರೆ.

ಜ್ಞಾನಿಗಳು ಮಾನಿತ್ವದ ಪ್ರದರ್ಶನ ಮಾಡುವುದಿಲ್ಲ. ತಮಗೆ ಎಲ್ಲ ತಿಳಿದಿದ್ದರೂ ಏನೂ ತಿಳಿಯದ ಹಾಗೆ ವರ್ತಿಸುತ್ತಾರೆ. ತಾವು ತಿಳಿಸಿದ ಜ್ಞಾನ ತಮಗೆ ತಮ್ಮ ಗುರುಗಳಿಂದ ಹಿರಿಯರಿಂದ ಬಂದದ್ದು ಎಂದು ಹೇಳುತ್ತಾರೆ.

 

“ದೀಪ”:-

(ಸಂಗ್ರಹ: ಅರವಿಂದ್ – ಮೈಸೂರು)

ನಮ್ಮಲ್ಲಿ ಕೆಲವರು ಹೇಳುವುದುಂಟ
“ಯಾಕೆ ಅಷ್ಟೊಂದು ದೀಪಗಳನ್ನು ಹಚ್ಚಿ ಖರ್ಚು ಮಾಡುತ್ತಿ-ಎಣ್ಣ ಬೆಲೆ ಗಗನಕ್ಕೆ ಏರಿದೆ. ತುಪ್ಪದ ಬೆಲೆಯಂತು ಕೇಳೋರಿಲ್ಲ. ಇಂಥ ಕಾಲದಲ್ಲಿ ಒಂದೋ-ಎರಡೊ ದೀಪಗಳನ್ನು ಹಚ್ಚಿದರೆ ಆಗೋದಿಲ್ವೇ?” ಅನ್ನುತ್ತಾ ಬಯ್ಯುವರೂ ಉಂಟು.
ದೀಪಗಳನ್ನು ಭಗವಂತನ ಮುಂದೆ ಬೆಳಗಿ ಅನಂತ ಪುಣ್ಯವನ್ನ ಸಂಪಾದಿಸಬಹುದಲ್ಲವೇ?
ಅಂಥವರಿಗೆ ಉತ್ತರ.
“ನಮ್ಮ ಮನೆಗಳಲ್ಲಿ ದೀಪವನ್ನು ಎರಡೂ ಹೊತ್ತು ಹಚ್ಚುವೆವು.
ಕಾರ್ತೀಕ ಮಾಸದಲ್ಲಿ ದೀಪದಾನವನ್ನೂ ಮಾಡುವೆವು. ದಾನ ಮಾಡ ಬೇಕು ಅಂತ ಗೊತ್ತು
ದೀಪ ಬೆಳಗಿದರೆ ಅಥವಾ ದಾನ ಮಾಡಿದರೆ ಯಾವ ಫಲ ಉಂಟಾಗುತ್ತದೆ ?”
ಪದ್ಮ ಪುರಾಣ ಕೇಳಿದ್ದೇವೆ. ಅದರಲ್ಲಿ ರುದ್ರದೇವರು ಪಾರ್ವತಿಗೆ ಹೀಗೆ ಹೇಳುತ್ತಾರೆ

ನಿಮಿಷಂ ವಾ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್
ಕಲ್ಪಕೋಟಿಸಹಸ್ರಾಣಿ ವಿಷ್ಣುಲೋಕೇ ಮಹೀಯತೇ!!

ದೀಪ ದಾನದಿಂದ ಏನು ಫಲ ಎಂಬ ಪ್ರಶ್ನೆ”
ದೀಪ ದಾನದಿಂದ ಉತ್ತಮವಾದ ನೇತ್ರಗಳು ಪ್ರಾಪ್ತಿಯಾಗುತ್ತದೆ.
“ದೀಪದಃ ಚಕ್ಷುರುತ್ತಮಮ್”
“ಒಂದು ಘೃತ ದೀಪವನ್ನು ಹಚ್ಚಿದರೇ ಭೂಮಿಯಲ್ಲಿ ರಾಜನಾಗುವ ಯೋಗವಿದೆ.
ಹಾಗೆಂದಮೇಲೆ ಬಹಳಷ್ಟು ದೀಪಗಳನ್ನು ಬೆಳಗಿದರೆ ಫಲವನ್ನು ಹೇಳಲು ನಾನೇ ಅಸಮರ್ಥ” ಎಂದು ರುದ್ರದೇವರು ಹೇಳುವರು ಅಂದಮೇಲೆ ಇದರ ಫಲ ಏನೆಂಬುದು ನಮಗೆ ಅರಿವಾಗುತ್ತದೆ.
ಶುಭವಾಗಲಿ…

“ದೀಪ”:-

(ಸಂಗ್ರಹ: ಅರವಿಂದ್ – ಮೈಸೂರು)

ನಮ್ಮಲ್ಲಿ ಕೆಲವರು ಹೇಳುವುದುಂಟ
“ಯಾಕೆ ಅಷ್ಟೊಂದು ದೀಪಗಳನ್ನು ಹಚ್ಚಿ ಖರ್ಚು ಮಾಡುತ್ತಿ-ಎಣ್ಣ ಬೆಲೆ ಗಗನಕ್ಕೆ ಏರಿದೆ. ತುಪ್ಪದ ಬೆಲೆಯಂತು ಕೇಳೋರಿಲ್ಲ. ಇಂಥ ಕಾಲದಲ್ಲಿ ಒಂದೋ-ಎರಡೊ ದೀಪಗಳನ್ನು ಹಚ್ಚಿದರೆ ಆಗೋದಿಲ್ವೇ?” ಅನ್ನುತ್ತಾ ಬಯ್ಯುವರೂ ಉಂಟು.
ದೀಪಗಳನ್ನು ಭಗವಂತನ ಮುಂದೆ ಬೆಳಗಿ ಅನಂತ ಪುಣ್ಯವನ್ನ ಸಂಪಾದಿಸಬಹುದಲ್ಲವೇ?
ಅಂಥವರಿಗೆ ಉತ್ತರ.
“ನಮ್ಮ ಮನೆಗಳಲ್ಲಿ ದೀಪವನ್ನು ಎರಡೂ ಹೊತ್ತು ಹಚ್ಚುವೆವು.
ಕಾರ್ತೀಕ ಮಾಸದಲ್ಲಿ ದೀಪದಾನವನ್ನೂ ಮಾಡುವೆವು. ದಾನ ಮಾಡ ಬೇಕು ಅಂತ ಗೊತ್ತು
ದೀಪ ಬೆಳಗಿದರೆ ಅಥವಾ ದಾನ ಮಾಡಿದರೆ ಯಾವ ಫಲ ಉಂಟಾಗುತ್ತದೆ ?”
ಪದ್ಮ ಪುರಾಣ ಕೇಳಿದ್ದೇವೆ. ಅದರಲ್ಲಿ ರುದ್ರದೇವರು ಪಾರ್ವತಿಗೆ ಹೀಗೆ ಹೇಳುತ್ತಾರೆ

ನಿಮಿಷಂ ವಾ ನಿಮಿಷಾರ್ಧಂ ವಾ ಘೃತದೀಪಂ ನಿವೇದಯೇತ್
ಕಲ್ಪಕೋಟಿಸಹಸ್ರಾಣಿ ವಿಷ್ಣುಲೋಕೇ ಮಹೀಯತೇ!!

ದೀಪ ದಾನದಿಂದ ಏನು ಫಲ ಎಂಬ ಪ್ರಶ್ನೆ”
ದೀಪ ದಾನದಿಂದ ಉತ್ತಮವಾದ ನೇತ್ರಗಳು

[16/12 7:56 AM] ‪+91 94486 65959‬: ದಿನಕ್ಕೊಂದು ಕಗ್ಗ

ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ ।
ಪರಸತ್ವಘನದ ವಿದ್ರವರೂಪ ವಿಶ್ವ ।।
ಪರಮಾರ್ಥಕೊಂದಕ್ಷಿ ವ್ಯವಹಾರಕಿನ್ನೊಂದು ।
ಎರಡುಮೊಂದಾಂತರ್ಯ – ಮಂಕುತಿಮ್ಮ ।।

ಆಚಲವಾದಂತಹ ಹಿಮಾಲಯ ಪರ್ವತದಂತೆ ಪರಬ್ರಹ್ಮ ವಸ್ತುವು. ಜಗತ್ತಿನ ಮಾಯೆಯೇ ಆ ಹಿಮಾಲಯ ಪರ್ವತದಿಂದ ಹೊರಡುವ ಜಾಹ್ನವಿ,ಎಂದರೆ ಗಂಗಾನದಿಯಂತೆ. ಹಾಗೆಯೇ ಪರಸತ್ವ ಎನ್ನುವುದು
ಘನರೂಪವಾದರೆ, ಈ ವಿಶ್ವ ಆ ಪರಸತ್ವದ ದ್ರವ ರೂಪ. ಪರಮಾರ್ಥವನ್ನು ನೋಡುವ ಮತ್ತು ಜಗತ್ತಿನ ವ್ಯವಹಾರವನ್ನು ನೋಡುವ ನಮ್ಮ ದೃಷ್ಟಿ ಬೇರೆಬೇರೆಯಾದರೂ ಎರಡರೊಳಗಿರುವ ಅಂತರಂಗದ ಸತ್ವ ಒಂದೇ.

ಶುಭೋದಯ 🌞 ಶುಭದಿನ
#ಅಭಿಷ್ಟಿ ಪ್ರಕಾಶನ.
“The immovable Himalaya is like the Creator. The flowing Ganges is like the illusion of this creation. The world is the molten form of the solid matter of the universal truth. One who knows how to see the truth as well as the world in two different views (and balance them) will find peace inside.” – Mankutimma

Good Morning 🌞 Good Day 😊
#ABHISHTI Publication
[16/12 8:13 AM] ‪+91 94486 65959‬: ಸ್ವಾಮಿ ಆದಿತ್ಯಾನಂದ ಸರಸ್ವತೀ ಚಿನ್ಮಯ ಮಿಷನ್, ಮಂಡ್ಯ

Manasse Heege…

ಸ್ವಾಮಿ ಚಿನ್ಮಯಾನಂದರು ಬಹಳ ಸುಂದರವಾದ ಒಂದು ಕಥೆಯನ್ನು ಹೇಳುತ್ತಿದ್ದರು. ಒಂದು ಊರಿನಲ್ಲಿ ಒಂದು ಕಾಲಿಲ್ಲದ ಒಬ್ಬ ವ್ಯಕ್ತಿ ವಾಸಿಸುತ್ತಿದ್ದ. ಆತ ಪ್ರತಿನಿತ್ಯವೂ ಎರಡು ಮರದ ಕೋಲುಗಳ ಸಹಾಯದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ತನ್ನ ಕೆಲಸಕ್ಕೆ ನಡೆದುಹೋಗುತ್ತಿದ್ದ. ಆತನಿಗೆ ಬಹಳ ಬಡತನವಿತ್ತು. ಹೀಗೆ ಹಲವಾರು ವರ್ಷಗಳು ಕಳೆಯಲು ಈತನನ್ನು ಕಂಡ ಒಬ್ಬ ಉದಾರ ಹೃದಯದ ವ್ಯಕ್ತಿ ತನ್ನ ಸ್ವಂತ ಹಣದಿಂದ ಮೂರು ಚಕ್ರದ ಒಂದು ಸೈಕಲ್ ದಾನವಾಗಿ ಕೊಟ್ಟ. ಆ ಕಾಲಿಲ್ಲದ ವ್ಯಕ್ತಿಗೆ ಸ್ವರ್ಗವೇ ಭೂಮಿಗಿಳಿದಂತಿತ್ತು. ದಾನ ನೀಡಿದ ವ್ಯಕ್ತಿಗೆ ‘ಸ್ವಾಮೀ, ನೀವೇ ದೇವರು, ಇಷ್ಟು ದಿನ ನಾನು ಕಷ್ಟಪಡುತ್ತಿದ್ದದ್ದನ್ನು ಹಣವುಳ್ಳ ಹಲವಾರು ಜನ ಕಂಡಿದ್ದರು. ಆದರೆ ನೀವು ನನ್ನ ಕಷ್ಟವನ್ನು ಅರಿತು ಸಹಾಯ ಮಾಡಿರುವಿರಿ. ನೀವೇ ದೇವರು’ ಎಂದು ಹೇಳಿ ವಂದಿಸಿದ.

ಈಗ ಪ್ರತಿನಿತ್ಯವು ಮೂರು ಚಕ್ರದ ಸೈಕಲ್ಲಿನಲ್ಲಿ ಕುಳಿತು ಕೈಗಳ ಸಹಾಯದಿಂದ ಗಾಲಿಯನ್ನು ತಿರುವುತ್ತ ತನ್ನ ಕೆಲಸಕ್ಕೆ ಸಾಗುತ್ತಿದ್ದ. ಆತನ ಆನಂದಕ್ಕೆ ಪಾರವೇ ಇಲ್ಲವಾಯಿತು. ಹೀಗೆ ಒಂದೆರಡು ವರ್ಷ ಕಳೆಯಿತು. ಸೈಕಲ್ ದಾನ ಮಾಡಿದ್ದ ವ್ಯಕ್ತಿ ಕಾಲಿಲ್ಲದವನನ್ನು ಒಮ್ಮೆ ಕಂಡು ‘ನೆಮ್ಮದಿಯಿಂದ ಇರುವೆಯಾ?’ ಎಂದು ಪ್ರಶ್ನಿಸಿದ.

ಆಗ ಆತ ‘ಏನು ಹೇಳಲಿ ಸ್ವಾಮಿ? ಮೊದಲೇ ಕಾಲಿಲ್ಲ. ಈ ಕೈಗಳು ಸೋತುಹೋಗಿವೆ. ದಿನನಿತ್ಯ ಕೈಗಳು ಗಾಲಿಯನ್ನು ತಿರುಗಿಸಿ ತಿರುಗಿಸಿ ನಿಶ್ಶಕ್ತಿಯಿಂದ ಬಳಲುತ್ತಿವೆ. ತಾವು ಮನಸ್ಸು ಮಾಡಿ ನನಗೆ ಮೂರು ಚಕ್ರದ ಸ್ಕೂಟರ್ ಕೊಡಿಸಿದರೆ ಮಹದುಪಕಾರವಾಗುತ್ತದೆ’ ಎಂದು ಬೇಡಿಕೊಂಡ. ದಾನಿಯ ಹೃದಯ ಕಂಪಿಸಿತು. ತನ್ನ ಸ್ನೇಹಿತರ ಸಹಾಯದಿಂದ ಹಾಗೂ ತನ್ನ ಸ್ವಂತ ಹಣವನ್ನು ಸೇರಿಸಿ ಒಂದು ಮೂರು ಚಕ್ರದ ಸ್ಕೂಟರ್ ಆತನಿಗೆ ಕೊಡಿಸಿದ. ಕಾಲಿಲ್ಲದ ವ್ಯಕ್ತಿ ಬಹಳ ಸಂತೋಷಪಟ್ಟ. ಈಗ ಆತ ಪ್ರತಿನಿತ್ಯ ತನ್ನ ಕೈಗಳಿಂದ ಗಾಲಿಯನ್ನು ತಿರುಗಿಸಬೇಕಿರಲಿಲ್ಲ. ಕೇವಲ ತನ್ನ ಬಲಗೈಯಿಂದ ಆಕ್ಸಲೇಟರ್ ಕೊಟ್ಟರೂ ಗಾಡಿ ಮುಂದೆ ಸಾಗುತ್ತಿತ್ತು.

ಕಾಲಚಕ್ರ ಮುಂದೆ ಸಾಗಿತು. ಐದಾರು ವರ್ಷಗಳ ನಂತರ ಕಾಲಿಲ್ಲದ ವ್ಯಕ್ತಿ ಮೊದಲಿನಂತೆ ನಿರಾಶೆಯಿಂದ ಇರುವುದು ಕಂಡುಬಂತು. ಯಾರಾದರೂ ಆತನನ್ನು ಕೇಳಿದರೆ ಆತ ಸೂರ್ಯನ ಬಿಸಿಲು ಜಾಸ್ತಿ, ಮಳೆಯ ತೊಂದರೆ, ಹೆಚ್ಚು ಚಳಿ ಹೀಗೆ ಹಲವಾರು ಅನಾನುಕೂಲಗಳ ಕಾರಣಗಳನ್ನು ಕೊಡುತ್ತಿದ್ದ. ನಮ್ಮ ಮನಸ್ಸೇ ಹೀಗೆ. ಇರುವುದನ್ನು ಮರೆತು ಇಲ್ಲದ್ದನ್ನು ನೆನೆದು ದುಃಖಿಸುತ್ತಿರುತ್ತದೆ.
[16/12 8:13 AM] ‪+91 94486 65959‬: Read it….

8 boys were standing on a track for racing.

Ready !

Steady !

Bang !

With sound of Pistol all boys started running.

Hardly had they covered 10 to 15 steps,
1 boy slipped & fell.

He started crying due to pain.

When other 7 Boys heard him, all of them STOPPED running..

STOOD for a while,

turned BACK & RAN
towards him.

All the 7 Boys LIFTED the Boy,
pacified him,
joined hands together,
walked together &
reached WINNING Post.

Officials were shocked.

Many Eyes were
filled with tears.

It happened at Pune.

Race was conducted by
National Institute of
Mental Health…

All participants were
Mentally RETARDED.

What did they teach ?
Teamwork,
Humanity,
Sportsman spirit,
Love,
Care,
&
Equality..
[16/12 8:13 AM] ‪+91 94486 65959‬: ಶಿವ ಸೂತ್ರ – ಉದ್ಯಮೋ ಭೈರವಃ :

ಉದ್ಯೋಗವೇ ಭೈರವ

“ಉದ್ಯೋಗ” ವೆಂದರೆ ನೀನು ಶರೀರವೆಂಬ ಕಾರಾಗೃಹ ವನ್ನು ಬಿಟ್ಟು ಹೊರಗೆ ಬರಲು ಮಾಡುವ ಪ್ರಯಾಸ – ಪ್ರಯತ್ನ. ಅದೇ ಭೈರವ.

“ಭೈರವ” ಎಂಬ ಶಬ್ದ ಪಾರಿಭಾಶಿಕ ವಾದದ್ದು.

“ಭ” – ಎಂದರೆ ‘ಭರಣ’ – ಹೊತ್ತು ಕೊಳುವುದು.
“ರ” – ಎಂದರೆ  ‘ರವಣ’  – ಸಂಹಾರ.
“ವ” – ಎಂದರೆ ‘ವಮನ’ – ಹರಡುವುದು.

ಭೈರವ ಎಂದರೆ “ಬ್ರಹ್ಮ” – ಯಾವುದು ಎಲ್ಲವನ್ನು ಹೊತ್ತಿದೆಯೋ, ಸಂಬಾಳಿಸುತ್ತಿದೆಯೋ, ಯಾವುದು ನಮ್ಮ ಹುಟ್ಟಿಗೆ ಕಾರಣವೋ – ಸತ್ತು ಯಾವುದರಲ್ಲಿ ಸೇರಿಹೋಗುವೆವೋ, ಯಾವುದು ಅತಿ ಸಂಕುಚಿತ ವಾಗುವುದೋ – ಅನಂತ ವಿಸ್ತಾರವಾಗಿದೆಯೋ ಅದು. ಯಾವುದು ಸೃಷ್ಟಿ ಗೆ ಉದ್ಭವವೋ…ಪ್ರಳಯಂಕರವೋ – ಆ ಮೂಲ ಅಸ್ತಿತ್ವದ ಹೆಸರೇ ಭೈರವ.

ಶಿವನು ಹೇಳುವುದು – ‘ ಉದ್ಯಮವೇ ಭೈರವ’ ಎಂದು. ಎಂದು ನೀನು ಆಧ್ಯಾತ್ಮಿಕ ಜೀವನಕ್ಕೆ ಬೇಕಾಗುವ ಪ್ರಯತ್ನಗಳನ್ನು ಪ್ರಾರಂಭಿಸುವೆಯೋ ಅಂದು ನೀನು ಭೈರವನಾಗೊಡಗಿದಂತೆ. ನೀನು ಪರಮಾತ್ಮನೊಂದಿಗೆ ಒಂದಾಗತೊಡಗಿದಂತೆ. ಮುಕ್ತನಾಗಬೇಕೆಂಬ ನಿನ್ನ ಮೊಟ್ಟ ಮೊದಲ ಭಾವನೆಯೇ ಸಾಕು. ಇನ್ನು ನಿನಗೆ ಮುಟ್ಟಬೇಕಾದ ಗುರಿ ದೂರವುಳಿಯದು.
ಏಕೆಂದರೆ ಮೊದಲ ಹೆಜ್ಜೆ ಬಹುಮಟ್ಟಿಗೆ ಅರ್ಧಯಾತ್ರೆ ಮಾಡಿದಂತೆಯೇ.

‘ ಉದ್ಯಮವೇ ಭೈರವ’. ಪಡೆವುವೆ.
ಹೆಚ್ಚೇನು ಹೊತ್ತಾಗದು. ಗುರಿಮುಟ್ಟಲು ಹೊತ್ತು ಹಿಡಿಯಬಹುದು. ” ನಾನಿನ್ನು ಎದ್ದೇಳುವೆ.
ಈ ಶರೀರದಿಂದ ಮುಕ್ತನಾಗಿ ಮನ್ನಡೆಯುವೆ.
ಈ ವಾಸನೆಗಳನ್ನು ಜೇಡರಬಲೆಯನ್ನು ಹರಿದೊಗೆಯುವೆ “. ಈ ಭಾವನೆಗಳು ನಿನ್ನೊಳಗೆ ದಟ್ಟವಾಗುತ್ತಿದ್ದಂತೆಯೇ , ಹಂಬಲ ಹೆಚ್ಚಾಗುತ್ತಾ ಬಂದು ನೀನು ಒಡನೆಯೇ ಬೈರವನಾಗುವೆ. ಒಡನೆಯೇ ಬ್ರಹ್ಮ ದೊಂದಿಗೆ ಒಂದಾಗತೊಡಗುವೆ. ಅಸಲಿಗೆ ನೀನು ಒಂದೇ ಆಗಿರುವೆ. ಕೇವಲ ನಿನ್ನಲ್ಲಿ ಎಚ್ಚರ ಮೂಡಬೇಕು. ಬ್ರಹ್ಮ ನೆಂಬ ಆ ಮಹಾಸಾಗರದ ಒಂದು ತೊರೆಯೇ ನೀನಾಗಿರುವೆ. ಬ್ರಹ್ಮನೆಂಬ ಸೂರ್ಯನ ಕಿರಣವೇ ಆಗಿರುವೆ. ಬ್ರಹ್ಮನೆಂಬ ಆ ಮಹಾಕಾಶದ ಒಂದುತುಂಡೇ ನೀನಾಗಿರುವೆ.
ನಿನ್ನಲ್ಲಿ ಸ್ಮರಣೆ ಸ್ಫುರಿಸಬೇಕು ಅಷ್ಟೇ. ಸ್ಫುರಿಸಿದೊಡನೆ ಆ ಮಹಾಕಾಶದೊಂದಿಗೆ ನೀನು ಒಂದಾಗಿ ವಿಜೃಂಭಿಸುವೆ.

‘ ಉದ್ಯಮವೇ ಭೈರವ’. ಬಲವಾದ ಪ್ರಯತ್ನ ಘನೀಭೂತವಾದ ಪ್ರಯಾಸ ಬೇಕಷ್ಟೆ.  ಸತತವಾಗಿ ಬಡಿದಾಗ ಮಾತ್ರ ಗಾಢನಿದ್ರೆ ಮುರಿದೀತು. ಆಲಸ್ಯ ,ಉದಾಸೀನ ಮಾಡಿದರೆ ಆಗದು. ಒಂದು ಕೈಯಿಂದ ಮುರಿದು ಇನ್ನೊಂದು ಕೈಯಿಂದ ಕಟ್ಟುತ್ತಾ ಹೋದರೆ ಅದು ವ್ಯರ್ಥ, ಪುನಃ ಅಂಡೆಲೆತವೇ ಗತಿ.
ನಿಮ್ಮೆಲ್ಲಾ ಸಂಪೂರ್ಣ ಪ್ರಯತ್ನಗಳು ಸಂಲಗ್ನವಾಗಲಿ.

ಈ ಜಗತ್ತಿನಲ್ಲಿ ಅನ್ಯಾಯ ಆಗುವುದೇ ಇಲ್ಲ.ಇಲ್ಲಿ ನಡೆಯುವುದೆಲ್ಲಾ ನ್ಯಾಯವಾಗಿಯೇ ನಡೆಯುವುದು. ನ್ಯಾಯ ಅನ್ಯಾಯ ಗಳು ಮನುಷ್ಯನ ಪರಿಧಿಗೆ ಒಳಪಟ್ಟಿಲ್ಲ.
ಈ ಜಗತ್ತಿನಲ್ಲಿ ಕೆಲವು ನಿಯಮಗಳವೆ. ಆ ನಿಯಮಗಳ ಹೆಸರೇ ‘ಧರ್ಮ’. ಧರ್ಮವೆಂಬುದು ಈ ಜಗತ್ತಿನ ತಟಸ್ಥ ನಿಯಮಗಳು. ಅಡ್ಡಾದಿಡ್ಡಿಯಾಗಿ ನಡೆದರೆ ಕೆಡವುವುದು, ನೇರವಾಗಿ ನಡೆದರೆ ಸಂಬಾಳಿಸುವುದು.
ಧರ್ಮವನ್ನು ಹಿಂದೂಗಳು “ಯತ” ಎಂದು ಕರೆದಿರುವರು. ಅದು ಪರಮ ನಿಯಮ. ಅದಕ್ಕೆ ನಿನ್ನ ಮೇಲೆ ಯಾವ ಪಕ್ಷಪಾತವೂ ಇಲ್ಲ. ಕೆಡವಬೇಕೆಂದೂ ಇಲ್ಲ, ಎತ್ತ ಬೇಕೆಂದೂ ಇಲ್ಲ. ಎರಡೂ ಸ್ಥಿತಿ ಗೂ ಅದು ಅದು ನೆರವಾಗುವುದು. ಹೇಗೆ ಬೇಕಿದ್ದರೂ ಅದನ್ನು ಬಳಸಿಕೊಳ್ಳಬಹುದು. ಅದು ಮುಕ್ತವಾದದ್ದು. ಅದರ ಬಾಗಿಲು ಮುಚ್ಚಿಲ್ಲ.
ಅದರ ಬಾಗಿಲಿಗೆ ನೀನು ಬೇಕಾದರೆ ತಲೆ ಚಚ್ಚಿಕೊಳ್ಳಬಹುದು. ಬಾಗಿಲ ಒಳಹೋಗುವ ಇಚ್ಛೆಯಿದ್ದಲ್ಲಿ ಒಳಹೋಗಲೂಬಹುದು. ಅದು ತಟಸ್ಥ.

‘ ಉದ್ಯಮವು ಭೈರವ’. ಅತೀವ ಶ್ರಮಪಡಬೇಕು. ಉದ್ಯಮದ ಅರ್ಥವೇ ಗಾಢ ಪರಿಶ್ರಮವೆಂದು. ಆ ಶ್ರಮದಲ್ಲಿ ನೀನು ಸಮಗ್ರವಾಗಿ ಬೆರೆಯಬೇಕು. ಆಗ ಮಾತ್ರ ಅದು ಉದ್ಯಮವಾದೀತು. ಆಗ ನೀನು ಭೈರವನಾಗಲು ಹೊತ್ತು ಹಿಡಿಯದು.

Msg as recd & shared
“Cow is just an animal like a hen or goat… then why should one not kill and eat it?”

Cow is also an animal, but… a cow has many specialities that no other animal (not even human beings) has in this world. This is the reason that Hindus consider cow as ‘mother’ after their own mother, and pray to the cow with respect calling it “go-matha”.

These are some truths about go-matha.

·  If a cow eats something poisonous by mistake, and we drink its milk, will we fall ill? To find out, one cow was regularly fed a particular quantity of a poison every day. After 24 hours, its blood, urine, dung and milk were tested in a lab to check where the poison could be found. In this way, the tests were done not for 1 or 2 days, but continuously for 90 days in All India Institute of Medical Sciences (AIIMS) New Delhi. The researcher did not find any trace of poison in milk, blood, urine or dung of that cow.

Then where did this poison fed for 90 days go? Just like Lord Shiva held poison in his throat, the go-matha hid the entire poison in her throat. This is a special quality that no other animal has.

·  This is the only creature that inhales oxygen and also exhales oxygen.

· Cow milk has the quality of countering poison.

·  There are diseases that medical science has not yet understood; urine of Go-matha has the power to cure them

·  If cow-ghee and rice are cooked together, two powerful gases called ethylene-oxide, propylene-oxide are released. Propylene-oxide is the best gas used for creating artificial rain.

·  Cow-urine is the world’s best killer of microbes

·  With medicines made using cow dung and cow urine, stomach-related ailments can be cured.

·  We can save ourselves from radio-waves by plastering the home floors and area outside home with cow-dung

· Cow-dung has the power to destroy the microbes causing cholera

· If 10 grams of cow-ghee is put in fire (yagnya), 1 ton of oxygen is generated.

If you feel useful, pl share with your contacts.

 

ನಮ್ಮ ಸನಾತನ ಧರ್ಮದಲ್ಲಿ
33 ಕೋಟಿ ದೇವಾನುದೇವತೆಗಳಿದ್ದಾರೆಂದು ನಂಬಿದ್ದೇವೆ..

ಯಾರಾದರೂ ಬಂದು ನಿಮ್ಮ
ದೇವರುಗಳ ಹೆಸರೇಳಿ ಎಂದು ಕೇಳಿದರೆ
೩೩ಕೋಟಿ ದೇವರುಗಳ ಹೆಸರನ್ನು
ಹೇಳಬಲ್ಲೆವೇ.??

ಖಂಡಿತ ಸಾಧ್ಯವಿಲ್ಲ..

ಅಬ್ಬಬ್ಬಾ ಎಂದರೆ ನೂರು , ನೂರೈವತ್ತು
ದೇವರುಗಳ ಹೆಸರನ್ನು ಹೇಳಬಹುದು..
33 ಕೋಟಿ ದೇವರುಗಳ ಹೆಸರನ್ನು ತಿಳಿಸಲು
ಯಾರಿಂದಲೂ ಸಾಧ್ಯವಿಲ್ಲ ಬಿಡಿ..

ಹಾಗಾದರೆ ನಮ್ಮ ನಂಬಿಕೆ ತಪ್ಪೇ..??

33ಕೋಟಿ ದೇವರುಗಳು ಎಂಬ ಕಲ್ಪನೆ ತಪ್ಪು..!!

ಅದು 33 ದೇವರುಗಳ ಕುಟುಂಬವೆಂದು..ಅಚ್ಚರಿಯಾಯಿತೇ..??

ಈ ಲೇಖನವನ್ನು ತಪ್ಪದೆ ಓದಿ..
ಶೇರ್ ಮಾಡಿ..

ಕೋಟಿ ಎಂಬ ಶಬ್ದ ಸಂಸ್ಕೃತದಿಂದ ಬಂದಿದ್ದು..
ಕೋಟಿ ಎಂಬುದು (Crore) ಹೌದು ನಿಜ..
ಆದರೆ ಅದರ ಮತ್ತೊಂದು ಅರ್ಥ ವಿಧ(Types)
ಅಂದರೆ ಸನಾತನ ಧರ್ಮದಲ್ಲಿ 33 ಕೋಟಿ
ದೇವರುಗಳಿವೆ ಎಂಬರ್ಥದಲ್ಲಿ ಕೋಟಿ
ಶಬ್ದವನ್ನು ಬಳಸಬೇಕಿಲ್ಲ…

ಇದರ ಸ್ಪಷ್ಟಾರ್ಥ ,

33 ದೇವರುಗಳ ಪರಿವಾರವೆಂದು..!!

ಅವು -12 ಆದಿತ್ಯರು +11 ರುದ್ರರು +8
ವಸುಗಳು + ಪ್ರಜಾಪತಿ ಬ್ರಹ್ಮ + ಶ್ರೀಹರಿ ವಿಷ್ಣು =
ಒಟ್ಟಿಗೆ 33 ದೇವಕುಟುಂಬಗಳು..

12 ಆದಿತ್ಯರು (ದ್ವಾದಶಾದಿತ್ಯರು) – ತ್ವಷ್ಟ ,
ಪೂಷ , ವಿವಸ್ವಾನ್ , ಮಿತ್ರ , ಧಾತಾ,
ವಿಷ್ಣು , ಭಗ , ವರುಣ , ಸವಿತೃ , ಶಕ್ರ ,
ಅಂಶ , ಅರ್ಯಮಾ. 11 ರುದ್ರರು
(ಏಕಾದಶರುದ್ರಾಃ) – ಮನ್ಯು ,
ಮನು , ಮಹಿನಸ , ಮಹಾನ್ , ಶಿವ ,
ಋತಧ್ವಜ, ಉಗ್ರರೇತಾ , ಭವ , ಕಾಲ ,
ವಾಮದೇವ , ಧೃತವೃತ..

8 ವಸುಗಳು (ಆಷ್ಟವಸವಃ) – ದ್ರೋಣ , ಪ್ರಾಣ,
ಧ್ರುವ , ಅಕ , ಅಗ್ನಿ , ದೋಷ , ವಸು , ವಿಭಾವಸು.
ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ ಹಾಗೂ ಜಗತ್ತಿನ
ಪರಿಪಾಲಕ ಮಹಾವಿಷ್ಣು..

ಆದ್ದರಿಂದ 33 ಕೋಟಿ
ದೇವರುಗಳು ಎಂಬುದೇ ತಪ್ಪು ಕಲ್ಪನೆ..
೩೩ ದೇವತಾಪರಿವಾರಗಳಷ್ಟೇ..

ವಸ್ತುತಃ ಸನಾತನಧರ್ಮದಲ್ಲಿ ದೇವನೊಬ್ಬನೇ..
ಆತ ಬ್ರಹ್ಮನ್..
ದೇವನೊಬ್ಬನಾದರೂ ನಾಮ ಹಲವು..
ಯಾವ ದೇವರನ್ನು ಪೂಜಿಸಿದರೂ ಅದು
ಸರ್ವಶಕ್ತನಾದ ಬ್ರಹ್ಮನನ್ನೇ ಸೇರುತ್ತದೆ.

“ಏಕಂ ಸದ್ವಿಪ್ರಾಃ ಬಹುಧಾ ವದಂತಿ”
(ಇರುವುದೊಂದೇ ಸತ್ (ಪರಮಾತ್ಮ) ಆದರೆ
ಜನರು ಬಹಳ ಹೆಸರಿನಿಂದ ಕರೆಯುತ್ತಾರೆ)

ದಿನಕ್ಕೊಂದು ಕಗ್ಗ

ತರಣಿ ಕಿರಣದ ನಂಟು ಗಗನ ಸಲಿಲದ ನಂಟು ।
ಧರಣಿ ಚಲನೆಯ ನಂಟು ಮರುತನೊಳ್ನಂಟು ॥
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ ।
ಕಿರಿದು ಪಿರಿದೊಂದಂಟು – ಮಂಕುತಿಮ್ಮ ॥ ೭೧ ॥

ಸೂರ್ಯನ ಮತ್ತು ಕಿರಣದ ಸಂಬಂಧ, ಆಕಾಶದ ಮತ್ತು ಮಳೆ ನೀರಿನಸಂಬಂಧ, ಭೂಮಿಯ ಸುತ್ತುವಿಕೆಯ ಸಂಬಂಧ, ಮತ್ತು ಅದಕ್ಕನುಗುಣವಾಗಿ ಬೀಸುವ ಗಾಳಿಯ ಸಂಬಂಧ,ಹೀಗೆ ಒಂದಕ್ಕೊಂದು ನಂಟು ಹಾಕಿಕೊಂಡು ಹಲವಾರು ಬಗೆಯ ಸಂಬಂಧಗಳ ಒಂದು ಗಂಟೆ ಈ ಜಗತ್ತು ಇದರಲ್ಲಿ ಕೆಲವು ಸಣ್ಣ ಸಣ್ಣ ನಂಟುಗಳು ಮತ್ತೆ ಕೆಲವು ದೊಡ್ಡದಾದ ಗಂಟುಗಳು ಎಂದು ಈ ಜಗತ್ತಿನ ಎಲ್ಲವಸ್ತುಗಳ ಪರಸ್ಪರ ಸಂಬಂಧಗಳನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಶುಭೋದಯ 🌞 ಶುಭದಿನ 😊
#ಉತ್ತಿಷ್ಠಭಾರತ #ಡಿವಿಜಿ

This whole world is made of complex knot of connections – some small and some big. The sun is related to his rays, the sky has attachment to the water below, earth is connected to its movement, together they are connected to the flow of air. – Mankutimma

Good Morning 🌞 Good Day 😊
#UttishtaBharatha #DVG

Leave a comment

Filed under ವಾಟ್ಸಪ್

ಅಬ್ಬೇಪಾರಿ ಮತ್ತು ಕಳ್ಳಾ ಪುಲಿ (ಗೆಳತಿಗೊಂದು ಪತ್ರ)

images

ನಿಮ್ಮ ಮಗ ಅಥವಾ ಮಗಳು ಮುಂದೆ ಏನಾಗಬೇಕೆಂದು ನೀವು ಬಯಸುತ್ತೀರಿ?

Self -aware parenting ಬಗ್ಗೆ ChicagoNow ನಲ್ಲಿನ ಲೇಖನವೊಂದನ್ನು ಇತ್ತೀಚಿಗೆ ಓದುತ್ತಿರುವಾಗ ಅನೇಕ ವಿಚಾರಗಳು ಕಣ್ಮುಂದೆ ಬಂದವು. ಈ ಲೇಖನದ ಲೇಖಕಿ ಒಬ್ಬ motivational writer . ಇವರಿಗೆ ಪತ್ರ ಬರೆಯುವ ಅನೇಕರು ತಮ್ಮ ಮಕ್ಕಳನ್ನು ಈ ವರ್ಷಕ್ಕಿಂತ ಮುಂದಿನ ವರ್ಷ ತಮ್ಮ ಶಾಲಾ ವಿಷಯಗಳಲ್ಲಿ ಹೇಗೆ ಮುಂದೆ ತರುವುದು, ಅವರ ಅಂಕಗಳನ್ನು ಹೆಚ್ಚಿಸುವ ಬಗೆ ಹೇಗೆ ಎನ್ನುವ ವಿಚಾರಗಳನ್ನೇ ಚರ್ಚಿಸುತ್ತಾರೆ. ಬೇಸಿಗೆ ರಜೆ ಅವಧಿಯಲ್ಲಿ ತಮ್ಮ ಮಕ್ಕಳನ್ನು ಯಾವರೀತಿಯಲ್ಲಿ engage ಮಾಡುವುದು ಎನ್ನುವ ಬಗ್ಗೆಯೂ ಲೇಖಕಿಯ ಅಭಿಪ್ರಾಯ ಕೇಳುತ್ತಾರೆ. ಮುಂದೆ ಓದುತ್ತಾ ಹೋದಂತೆಲ್ಲಾ ಲೇಖಕಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ರ್ಯ ಮತ್ತು ಅವರನ್ನು ಕಾಡುವ ಅನೇಕ anxiety ಸಮಸ್ಯೆಗಳು ಮತ್ತು ಅದರಿಂದ ಹೊರತರುವ ಬಗ್ಗೆ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸಾಗುವಾಗ ಒಂದು race to nowhere ಎನ್ನುವ documentary ನೆನಪಿಗೆ ಬರುತ್ತದೆ. ಇದರ ಕರ್ತೃ ವಿಕಿ ಅಬ್ಲೆಸ್  ತನ್ನ ಮಗಳು ಅನುಭವಿಸಿದ ವಿಚಿತ್ರ anxiety ಸಮಸ್ಯೆಗಳು ಮತ್ತು ಶಾಲೆಯ stress ನ ಬಗ್ಗೆ ಅಧ್ಯಯನ ಮಾಡಿ ಬರೆದು ನಿರ್ಮಿಸಿರುವ ಡಾಕ್ಯುಮೆಂಟರಿ ಇದು. ನೀವಿದನ್ನು ನೋಡಿಲ್ಲದಿದ್ದಲ್ಲಿ ಈ URL ನಲ್ಲಿ ವೀಕ್ಷಿಸಬಹುದು.

https://www.youtube.com/watch?v=GAxoSd7BJiY .

ವೀಕ್ಷಿಸಲು ಸೋಮಾರಿತನವಿದ್ದವರಿಗೆ ಇದೋ ಈ ಡಾಕ್ಯುಮೆಂಟರಿಯ Plot summary

RACE TO NOWHERE is a close-up look at the pressures on today’s students, offering an intimate view of lives packed with activities, leaving little room for down-time or family time. Parents today are expected to raise high-achieving children, who are good at everything: academics, sports, the arts, community-service. The film tackles the tragic side of our often achievement-obsessed culture, with interviews that explore the hidden world of over-burdened schedules, student suicide, academic cheating, young people who have checked out. RACE TO NOWHERE asks the question: Are the young people of today prepared to step fully and productively into their future? We hear from students who feel they are being pushed to the brink, educators who worry students aren’t learning anything substantive, and college professors and business leaders, concerned their incoming employees lack the skills needed to succeed in the business world: passion, creativity, and internal motivation.

ಇದನ್ನು ಓದಿದ ಅಥವಾ ನೋಡಿದ ನಂತರ ನಿಮ್ಮಲ್ಲಿ ಕೆಲವರು ಇದನ್ನು ಅತಿಯಾಗಿ ಮೆಚ್ಚಲೂ ಬಹುದು. ಕೆಲವರು ಕೈಲಾಗದವರ ಮೈಪರಚಿಕೊಳ್ಳುವಿಕೆಯಂತಿದೆ ಎಂದು ಸಮರ್ಥನೆಯನ್ನೂ ಕೊಡಬಹುದು. ಇಲ್ಲಿ ಮಧ್ಯೆ ಮಧ್ಯೆ ಇಣುಕುವ ಹದಿಹರೆಯದವರ ಆತ್ಮಹತ್ಯೆ, ಸಮೂಹಮಾಧ್ಯಮಗಳು ಬೀರುತ್ತಿರುವ ಪ್ರಭಾವ, ಪೋಷಕರ ಸಂಪಾದನೆಯಲ್ಲಿರುವ ಏರುಪೇರುಗಳು ಎಲ್ಲವಕ್ಕೂ ಶಿಕ್ಷಣದ ಪದ್ಧತಿಯೇ ಗುರಿಯೇ ಎಂದು ನೀವು ವಾದಿಸಲೂ ಬಹುದು. ಇವೆಲ್ಲಾ ಏನೇ ಇರಲಿ, ನಾವೆಲ್ಲರೂ ನಮ್ಮ ಮಕ್ಕಳು ಮುಂದೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಹಾಗೂ ಸಾಮಾಜಿಕ ವ್ಯಕ್ತಿತ್ವದಲ್ಲೂ ಮೇರು ಸ್ಥಾನ ಗಳಿಸಲಿ ಎಂದು ಖಂಡಿತಾ ಆಶಿಸುತ್ತಿರುತ್ತೇವೆ. ಆದರೆ ಕೆಲವು ಮಕ್ಕಳಿಗೆ ಇದು ಸಾಧ್ಯವಾದರೆ ಮತ್ತೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಒಂದೇ ತಂದೆ-ತಾಯಿಯರ ಎರಡು ಮಕ್ಕಳಲ್ಲಿ ಒಂದೇ ಬಗೆಯ ಬುದ್ಧಿಶಕ್ತಿ ಕಾಣಸಿಗುವುದಿಲ್ಲ ಮತ್ತು ಕೆಲವೊಮ್ಮೆ ಇಬ್ಬರೂ ಬುದ್ಧಿವಂತರಾದ ಉದಾಹರಣೆಯೂ ಇರುತ್ತವೆ. ನಮ್ಮ ದೇಶದ ಅಂಕಿ-ಅಂಶಗಳನ್ನೇ ತೆಗೆದುಕೊಂಡರೂ ಅನೇಕ ಕಡಿಮೆ ಸೌಲಭ್ಯ ಹೊಂದಿದ ಗ್ರಾಮೀಣ ಮಕ್ಕಳು ಉನ್ನತ ಸ್ಥಾನಕ್ಕೇರಿರುವ ಉದಾಹರಣೆಗಳಿವೆ. ಎಲ್ಲಾ ಸೌಲಭ್ಯ ಹೊಂದಿರುವ ಮಕ್ಕಳು ಹಿಂದುಳಿವ ಸಾಧ್ಯತೆಗಳೂ ಇವೆ. ಈ ಎಲ್ಲ ವೈವಿಧ್ಯಗಳು ಏಕೆ ಮಕ್ಕಳಲ್ಲಿ ಕಾಣಸಿಗುತ್ತವೆ. ಇವುಗಳ ಕಾರಣಗಳೇನು? 

ಮೊದಲನೆಯಾದಾಗಿ ಸ್ವಾಭಾವಿಕವಾಗಿ ಅನುವಂಶೀಯವಾಗಿ ಬಂದಿರುವ ಬುದ್ಧಿಶಕ್ತಿ, ತಾಯಿಯ ಗರ್ಭಾವಸ್ಥೆಯಲ್ಲಿ ತಗುಲಿರಬಹುದಾದ ಏನಾದರು ಸೋಂಕುಗಳ ಅಥವಾ ದುಶ್ಚಟಗಳ ಪ್ರಭಾವ, ಶಿಶುವಿನ ಜನನಾನಂತರ ಬಂದಿರಬಹುದಾದ ಆರೋಗ್ಯದ ಏರುಪೇರು, ಅಪಘಾತಗಳು (ದೈಹಿಕ-ಮಾನಸಿಕ), ಮತ್ತು ಕೊನೆಯದಾಗಿ stress handling threshold (ಇದಕ್ಕೆ ಪೂರಕವಾಗುವ ಮನೆಯ ವಾತಾವರಣ, ಸಾಮಾಜಿಕ ವಾತಾವರಣ ಹಾಗೂ ತಂದೆತಾಯಿಗಳ ಪ್ರೋತ್ಸಾಹ) ಇವೆಲ್ಲವುಗಳಿಂದ ಒಂದು ಮಗುವಿನ ಜೀವನದ ಗಟ್ಟಿತನ ನಿರ್ಧಾರವಾಗುತ್ತದೆ. ಎಷ್ಟೋಸಾರಿ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಮಗುವಿಗೆ ಬೇಕಾದ ಭದ್ರತೆ ಕೊಡಲು ಸೋತಿರುತ್ತಾರೆ; ಅಥವಾ ಅನವಶ್ಯಕ ಓವರ್-ಪ್ರೊಟೆಕ್ಷನ್ ಕೊಟ್ಟು ಮಗುವನ್ನು ಸೋಲಿಸುತ್ತಾರೆ. ಇಲ್ಲಿ ಎಲ್ಲಾ ಕಡೆಯಲ್ಲೂ ಶೈಕ್ಷಣಿಕ ಪದ್ಧತಿಯನ್ನೇ ದೂರುವುದು ಸಮಂಜಸವಲ್ಲ. ಜೊತೆಗೆ ತಮ್ಮ ಬದುಕನ್ನು ಮಗುವಿನ ಮೂಲಕ ಬದುಕುವ ಅನೇಕ ತಾಯ್ತಂದೆಗಳ ಧೋರಣೆಯೂ ಸಮಂಜಸವಲ್ಲ. ಬದುಕಿಗೆ ಪುರುಷಾಕಾರ ಪ್ರಧಾನವಾದ ಮಹತ್ವಾಕಾ0ಕ್ಷೆಗಳನ್ನು ಬಿಡುವುದೂ ಅಲ್ಲ. ಪ್ರಯತ್ನ, ಛಲ, ಸಾಧನೆ, ಶ್ರದ್ಧೆಗಳ ಮೊದಲ ಪಾಠ ಮನೆಯಲ್ಲಿ ಆಗಲೇಬೇಕು. ಎಲ್ಲಾ ತಾಯ್ತಂದೆಗಳೂ ಎಲ್ಲದರಲ್ಲೂ ಪರಿಪಕ್ವರಲ್ಲ ಹಾಗೆಯೇ ಅವರವರ ಮಕ್ಕಳೂ ಕೂಡ! ಪ್ರತಿಯೊಬ್ಬರೂ ಮೊದಲನೆಯದಾಗಿ ಮಗುವಿನ ಆರೋಗ್ಯ, ಓದು ಬರಹದ ಜೊತೆಗೆ ಸಮಾಜದಲ್ಲಿ ಅವನು/ಅವಳು ಹೇಗೆ ಹೊಂದಿಕೊಂಡು ಬಾಳುವುದು ಎನ್ನುವುದರ ಅರಿವು ಮಗುವಿನಲ್ಲಿ ಮೂಡಿಸಬೇಕಾಗುತ್ತದೆ. ವೈರುಧ್ಯಗಳ ಜೊತೆ, ವೈಪರೀತ್ಯಗಳ ಜೊತೆ ಹೋರಾಡುವ ಮಾನಸಿಕ ಶಕ್ತಿಯನ್ನೂ ಬೆಳೆಸಿಕೊಳ್ಳುವ ಬಗ್ಗೆ ಜ್ಞಾನ ಕೊಡಬೇಕಾಗುತ್ತದೆ. ಇದೆಲ್ಲಾ ಮಾಡಿದ ನಂತರವೂ ಮಗು ಹಿಂದುಳಿದಿದ್ದೇ ಆದರೆ ವಿಧಿಯನ್ನು ದೂರುವುದೇ?………..

ಖಂಡಿತಾ ಅಲ್ಲ. ಬದುಕು ಎನ್ನುವುದು ಒಂದು ದಿನದ ಆಟವಲ್ಲ, ಇದು ನಿರಂತರ ಬದಲಾವಣೆಗಳ, ಪ್ರಯತ್ನಗಳ, ಪರೀಕ್ಷೆಗಳ ಪ್ರಯೋಗಶಾಲೆ. ಇಲ್ಲಿ ತಂದೆತಾಯ್ಗಳೂ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಮತ್ತು ಮಕ್ಕಳೂ ಹೋರಾಟಗಾರರಾಗಬೇಕಾಗುತ್ತದೆ. ಕಷ್ಟಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಕೂರುವಂತಿಲ್ಲ, ಮರಳಿ ಯತ್ನವ ಮಾಡಿ ಗುರಿಸಾಧಿಸುವ ಛಲ ಬೆಳೆಸಿಕೊಳ್ಳುವ ಆತ್ಮ ಬಲ ಮಕ್ಕಳಲ್ಲಿ ಬೆಳೆಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಸಂಪಾದಿಸುವ ಎಲ್ಲರೂ ತಮ್ಮ ಕೆಲಸವನ್ನು ಪ್ರೀತಿಸುತ್ತಿರಲಾರರು, ದೊಡ್ಡ ಓದು ಓದಿಕೊಂಡ ಎಲ್ಲರೂ ಸಂತೋಷವಾಗಿರುತ್ತಾರೆಂದುಕೊಂಡರೆ ಅದೂ ಸರಿಯಲ್ಲ. ಇಷ್ಟ ಪಟ್ಟು, ಕಷ್ಟಪಟ್ಟು ಕಲಿತು, ಮಾಡುವ ಕೆಲಸದಲ್ಲಿ ನೆಮ್ಮದಿ ಕಾಣುತ್ತಾ, ಸಾಮಾಜಿಕ ಜವಾಬ್ದಾರಿಗಳನ್ನೂ ಜೊತೆಯಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನೂ ಸರಿತೂಗಿಸುವ contentment ಇರುವ ಬದುಕು ಸರ್ವಕಾಲೀನ ಸುಂದರ. ಈ ಹಂತ ತಲುಪುವವರೆಗೂ ಹೋರಾಟ ತಪ್ಪಿದ್ದಲ್ಲ, ಅಲ್ಲವೇ?

ನಿರಂತರ ತಲೆ ಕೆಡಿಸಿಕೊಂಡು ಪೇಚಾಡುವ ನನ್ನ ಆತ್ಮೀಯ ಗೆಳತಿಯೇ ಈ ನಿರಂತರ ಹೋರಾಟದಲ್ಲಿ ತೊಡಗಿರುವ ನಿನಗೂ ಒಂದು ಜೀವನವಿದೆ. ಬದುಕಿನ lighter side ಗೂ ಒಮ್ಮೊಮ್ಮೆ ನೀನು ನಿನ್ನ ಮನಸ್ಸನ್ನು ತಂದು ರಿಫ್ರೆಶ್ ಮಾಡಿಕೊಳ್ಳದಿದ್ದರೆ ನಿರಂತರ ಮನೋರೋಗಿಯಾದೇಯೆ!

 ಒಂದು ವಿಷಯ ಹೇಳೋದಿತ್ತು ನಿನಗೆ! ಮನೆಯಿಂದ ಹೊರಗೆ ನಾನು ಇಣುಕಿ ಮೊನ್ನೆಗೆ ಸರಿಯಾಗಿ 15 ದಿನಗಳಾಗಿತ್ತು. ಕಳೆದ ವಾರ ಬಂದಿದ್ದ ನನ್ನ ಶಾಮಣ್ಣನೆದುರು ‘ಯಾಕೋ ತಲೆ ಒಂಥರಾ ಆಗುತ್ತೆ ಕಣೋ, ಈ viral fever ನ ನಂತರ’ ಎಂದು ಪೇಚಾಡಿಕೊಂಡೆ. ಅದಕ್ಕವನು ಅಯ್ಯೋ ಅಷ್ಟೇ ತಾನೇ ಎನ್ನುವ ಹಾಗೆ “ಮನೆಯಿಂದ ಹೊರಗೇ ಹೋಗುತ್ತಿಲ್ಲ ನೀನು ಅನ್ಸುತ್ತೆ ಕಣೆ. ಹೊರಗೆ ನಾಲ್ಕು ಹೆಜ್ಜೆ ಹಾಕಿಕೊಂಡು ಬಾ, ಎಲ್ಲಾ ಸರಿಹೋಗುತ್ತೆ” ಎಂದು ಸುಲಭೋಪಾಯ ಸೂಚಿಸಿದ. ಅವನು ಹೇಳಿದ್ದು ನಿಜ, ಚಿಕ್ಕ ವಯಸ್ಸಿಂದಲೂ ತಿರುಗಿದ ಜೀವ, ಈಗ ಮನೇಲಿ ಕೂತರೆ ಇಲ್ಲದ ಸಮಸ್ಯೆಗಳು. ಎಷ್ಟಾದರೂ ಜೊತೆಯಲ್ಲಿ ಅಲೆದ ಜೀವಗಳಲ್ಲವೇ, ನಮ್ಮ ನಮ್ಮ ದೇವರ ಸತ್ಯ ನಮಗೆ ಚೆನ್ನಾಗಿ ಗೊತ್ತು, ಹೀಗಾಗಿ ತಲೆ imbalance ನ ಒಳಮರ್ಮ ಅವನಿಗೆ ಗೊತ್ತಾಯಿತು. ಮೊನ್ನೆ ದೊಡ್ಡ ಮನಸ್ಸು ಮಾಡಿ ನಸುಕಿಗೇ ಮನೆಬಿಟ್ಟೆ. ದೊಡ್ಡ ವಾಕ್ ನಿಜಕ್ಕೂ ಚೇತೋಹಾರಿಯಾಗಿತ್ತು. ಮರೆತ ಎಷ್ಟೋ ಸದ್ವಿಚಾರಗಳು ನೆನೆಪಿಗೆ ಬಂದವು; ಬೇಡದ ಎಷ್ಟೋ ಕ್ಲೀಷೆಗಳು ಮರೆವಿಗೆ ಸಂದವು. ಈರುಳ್ಳಿ ಮಾರುವ ಬಸವರಾಜು “ಅಕ್ಕಾ ನನ್ನ ಮಗಳಿಗೆ ಮಗು ಆಯ್ತು, ತಾಯಿ ಮಗಳು ಆರೋಗ್ಯವಾಗಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಂಡ. ಅವನಿಗೆ ಶುಭಾಶಯ ಹೇಳಿದೆ. ಮನೆಗೆ ಮರಳಿ ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ.  ನಮ್ಮನೆ ರೋಡ್ ನಲ್ಲಿ ಪ್ಬತಿದಿನವೂ ಬೆಳಗ್ಗೆ 8:30 ರ ಸುಮಾರಿಗೆ ‘ಅ.. ಬ್ಬೇ.. ಪಾ… ರೀ …’ ಎನ್ನುವ ಕೂಗು ಘಂಟಾಘೋಷವಾಗಿ ಕೇಳುತ್ತಿರುತ್ತದೆ. ಅದು ನನಗೆ ತೀರಾ ಪರಿಚಿತವೇ ಮತ್ತು ಆ ಧ್ವನಿಯ ಒಡೆಯನೂ ಕೂಡ. ಅಬ್ಬೇಪಾರಿ ಎಂದರೆ irresponsible fellow ಅಂತಿರಬಹುದು ಅರ್ಥ, ಈತ ಹಾಗಲ್ಲ. ಈ ದಿನಗಳಲ್ಲಿ ನಾನು ಆತನನ್ನು ಮಾತೇ ಆಡಿಸಿರಲಿಲ್ಲ, ಪಾಪ! ಇವತ್ತು ನಾನಾಗಿ ನಾನೇ ಮಾತನಾಡಿಸಲು ಹೋದೆ. ಅವನು ತನ್ನ ರಥ ನಿಲ್ಲಿಸಿ ಮಾತಿಗೆ ಬಂದ. ಮಾಮೂಲಿನಂತೆ ‘ಏನಾದ್ರೂ ಐತಕಾ’ ಎಂದ. ಅವನ accent ಟೇ ಹಾಗೆ! ‘ಏನೂ ಇಲ್ಲಪ್ಪ, ಚೆನ್ನಾಗಿದ್ದೀಯ, ಏನು ಸಮಾಚಾರ’ ನಾನು ಕುಶಲೋಪರಿ ವಿಚಾರಿಸಿದೆ. ‘ಊಂ ನಕಾ ..ಈಗ ನೀ ಉಸಾರಾ? ನಮ್ ಅಳಗು ಕು ಮ್ಯಾರೇಜ್ ಸೆಟ್ ಅಯ್ತಕಾ ‘ ಎಂದು ಹಲ್ಲು ಕಿರಿದ. ಎಷ್ಟೊಂದು ದಿನದ ತಪಸ್ಸು ಆತನದು, ಮಗಳ ಮದುವೆ ಆಗಬೇಕೆನ್ನುವುದು!, ಸಧ್ಯ ಸೆಟ್ಲ್ ಆಯಿತಲ್ಲಾ ..ನನಗೂ ಸಂತೋಷವಾಯ್ತು. ‘ಯಾರಪ್ಪ ಹುಡುಗ ?’ ನಾನು ಕುತೂಹಲದಿಂದ ಕೇಳಿದೆ. ‘ಏ ಅದೇಕಾ …ಕಳ್ಳಾಪುಲಿ ಮಗ ಮುರುಗನ್.’ ಅವನ ಧ್ವನಿಯಲ್ಲಿ ನೆಮ್ಮದಿಯ ನಗೆಯಿತ್ತು. ‘ತುಂಬಾ ಸಂತೋಷ ಕಣಪ್ಪ…ಕರ್ಕೊಂಡು ಬಾ ಮಗಳನ್ನ ಯಾವಾಗ್ಲಾದ್ರು ‘ ಎಂದೆ. ‘ಸರೇಕಾ ..’ ಎನ್ನುತ್ತಾ ಅವನು ತನ್ನ ರಥ ಚಾಲೂ ಮಾಡಿ ಮತ್ತಷ್ಟು ಹುಮ್ಮಸ್ಸಿನಿಂದ ಕೂಗುತ್ತಾ ಹೊರಟ, ಆ ಬ್ಬೇ ಪಾ ರೀ …. ನಾವು medical transcriptionist ಗಳಿಗೆ ಒಂದು ವಿಶೇಷ ಚಟ ಅಂಟಿಕೊಂಡಿರುತ್ತದೆ, ಅದೇನೆಂದರೆ ಒಂದು ಪದವನ್ನು ಮೂರು ನಾಲ್ಕು ಥರಾ ಕೇಳಿಸಿಕೊಳ್ಳುವುದು! ಇದು ಎಷ್ಟೋ ಸಾರಿ ಎರ್ರಾಬಿರ್ರಿ ಖುಷಿಯನ್ನು ಸಹಾ ತಂದುಕೊಡಲು ನೆರವಾಗುತ್ತದೆ.  ಈ ಆ.. ಬ್ಬೇ.. ಪಾ.. ರೀ.. ಯಾರೆಂದುಕೊಂಡೇ?  ತಮಿಳು accent ನಲ್ಲಿ ‘ಆ.. ಪೇ..ಪ..ರ್..ರ್ರಿ …’ ಎಂದು ಕೂಗುವ ಹಳೇ ಪೇಪರ್ ಮತ್ತು ಗುಜರಿ ವಸ್ತುಗಳನ್ನು ಕೊಳ್ಳುವವನು.  ಮತ್ತೆ ಆ ಕಳ್ಳಾ-ಪುಲಿ ? ದಿನವೂ ವ್ಯಾಪಾರವಾಗಲೀ- ಬಿಡಲಿ ಕಡಲೆಪುರಿ ಮಾರುತ್ತಾ ಬರುವ ಕರ್ಮಜೀವಿ. ಅಂದಹಾಗೇ ಇವರಿಬ್ಬರೂ ನನ್ನ ತಾಯಿ ಒಂದು ವರ್ಷದ ಹಿಂದೆ ಬಚ್ಚಲಲ್ಲಿ ಕಾಲು ಜಾರಿ ಬಿದ್ದಾಗ ಕರೆದೊಡನೆಯೇ ಬಂದು ಎತ್ತಿ ಕೂರಿಸಿ ನೆರವಾದ ಬಂಧುಗಳು! ಸಂತೋಷದ definition ಒಬ್ಬರಿಂದೊಬ್ಬರಿಗೆ ಬೇರೆ ಬೇರೆಯಾಗಿರುತ್ತವೆ, ಹಾಗೆಯೇ ಬದುಕೂ ಕೂಡ ಅಲ್ವಾ….. ಹೇಗೋ ಬದುಕುವುದನ್ನು ಕಲಿಸಿಯೇ ಬಿಡುತ್ತದೆ!

Leave a comment

Filed under ಲೇಖನಗಳು

ಅಲೆಮಾರಿ ಅಕ್ಕ-ತಂಗಿಯರ ಟ್ರಯಲ್ಗಳು ಮತ್ತು ಟ್ರಾಮಾಗಳು!

imagesಆಗ ನಾನು ಹೈಸ್ಕೂಲಿನಲ್ಲಿದ್ದೆ. ಲಕ್ಷ್ಮಿಯ ಸಿ.ಇ.ಟಿ. ಜಸ್ಟ್ ಮುಗಿದು ಸೀಟಿನ ನಿರೀಕ್ಷೆಯಲ್ಲಿದ್ದಳು. ಲಕ್ಷ್ಮಿ ನನ್ನ ದಾವಣಗೆರೆಯ ಅಕ್ಕ. ಆಗ ಇಬ್ಬರೂ ಲಂಗ-ಬ್ಲೌಸ್ ತೊಡುತ್ತಿದ್ದ ಕಾಲ, ಜೊತೆಗೆ ಇಬ್ಬರಿಗೂ ಶಾಪಿಂಗ್ ಹುಚ್ಚು ಅದು ಹೇಗೋ ಮೈಗಂಟಿಕೊಂಡಿತ್ತು. ನಮ್ಮಿಬ್ಬರಿಗೂ ಪ್ರತ್ಯೇಕವಾಗಿ ಮನೆಯಲ್ಲಿ ಪಾಕೆಟ್ ಮನಿ ಕೊಡುತ್ತಿದ್ದರೆಂದು ನೀವು ಭಾವಿಸಿದರೆ ಮೂರ್ಖರಾದೀರಿ! ಒಂದು ಹತ್ತು ರೂಪಾಯಿ ನಮ್ಮ ಪರ್ಸಿನಲ್ಲಿ ಜಮಾ ಆಗಿದ್ದರೆ ಅದೇ ಇಬ್ಬರಿಗೂ ದೊಡ್ಡ ಮೊತ್ತ. ಆದರೂ ಆಸೆಗಳು ಇಬ್ಬರಿಗೂ ನೂರಾರು, ಅದು ಚೆನ್ನ, ಇದು ಚೆನ್ನ ಎಂದು ಇಬ್ಬರೂ ಮನಸ್ಸಲ್ಲಿ ಮಂಡಿಗೆ ತಿಂದೂ ತಿಂದೂ ಖುಷಿಪಡುತ್ತಿದ್ದೆವು. ಅದೇನೋ ಇಬ್ಬರೂ ವಿಪರೀತ ಮಾತನಾಡುತ್ತಿದ್ದೆವು. ರಾತ್ರಿ, ಬೆಳಗು, ಮಧ್ಯಾಹ್ನ ಸಮಯ ಸಿಕ್ಕಾಗೆಲ್ಲ ವಿಪರೀತ ವಿಷಯಗಳು ಮಾತಾಡಿದ್ದೂ ಆಡಿದ್ದೆ. ಅದೇನೇನು ಎನ್ನುವುದು ದೇವರೇ ಬಲ್ಲ! ತಿರುಗಾಟದ ಹುಚ್ಚು ನಮ್ಮ ಖಾಂದಾನ್-ಖಾಂದಾನಿಗೆ ಇತ್ತು ಒಂದು ವಯಸ್ಸಿನಲ್ಲಿ ಅನ್ನಿಸುತ್ತೆ. ತರಕಾರಿ ತರುವ ನೆಪದಲ್ಲಿ ನಾನೂ ಲಕ್ಷ್ಮಿಯೂ ಬೆಳಗ್ಗೆ ೭ ಕ್ಕೆ ಹೊರಬಿದ್ದರೆ ಪಕ್ಕದ ರೋಡ್ ನಿಂದ ೮ ಕ್ಕೇ ಬರುತ್ತಿದ್ದುದು. ಅದೇನು ಅಷ್ಟೊಂದು ಲೇಟು ಅಂತೀರಾ? ಹೌದು, ನಮ್ಮ ಮರೆತಿದ್ದ ಮಾತುಗಳು ಇದ್ದಕ್ಕಿದ್ದ ಹಾಗೇ ಮನೆಯಿಂದ ಕಾಲ್ತೆಗೆದ ಕೂಡಲೇ ನೆನಪಾಗುತ್ತಿದ್ದವು! ಯಾರ್ಯಾರೋ ನಮ್ಮ ಗೆಳತಿಯರ ಕಸಿನ್ಸು, ಅವರ ಕಷ್ಟ ಸುಖ ಇವೆಲ್ಲಾ…ಈಗಿನ ಕಾಲದ ಹುಡುಗಿಯರೂ ಅಥವಾ ಎಲ್ಲಾ ಹುಡುಗಿಯರೂ ಹೀಗೆನಾ? ಅಥವಾ ನಾವು ಎಕ್ಸೆಪ್ಶನ್ನಾ? ಈ ಥರ ತಲೆ ಹುಳ ನೆಲಕ್ಕೆ ಕೊಡವಿಕೊಳ್ಳುವ ಹುಡುಗಿಯರನ್ನು ಕಂಡು ಅಮ್ಮನಂಥಾ ಅಮ್ಮನೂ ದಂಗಾಗಿದ್ದಳು. ಅವರೇನು ಕಡಿಮೆಯಿರಲಿಲ್ಲ. ಅಕ್ಕ ತಂಗಿಯರೆಲ್ಲ ಒಟ್ಟು ಸೇರಿದಾಗ ರಾತ್ರಿ ಮಾತಿಗೆ ಕೂತರೆ(ಮಲಗಿದರೆ?!) ಬೆಳಕು ಹರಿಸುವಂಥಾ ಗಟ್ಟಿಗರು. ಅವರ ಮಕ್ಕಳಲ್ಲವೇ ನಾವು, ನಾವೂ ಅವರಂತೆಯೇ ತಯಾರಾಗುತ್ತಿದ್ದೆವು. ಉಮ (ಶ್ರೀರಂಗಪಟ್ಟಣದ ಅಕ್ಕ) , ಲಕ್ಷ್ಮಿ ಮತ್ತು ನಾನು ಮೂರೂ ಹುಡುಗಿಯರೂ ಮಾತು ವಿಪರೀತ ಆಡುತ್ತವೆ, ಒಂದರ ಜೊತೆ ಒಂದು ಸೇರಿದರೇ ಎಂದು ಅಮ್ಮ ರಿಸರ್ಚು ಮಾಡಿ ಕಂಡುಕೊಂಡಿದ್ದಳು. ನಾನೂ ಲಕ್ಷ್ಮಿಯಂತೂ ಇತಿಹಾಸವನ್ನೇ ಸೃಷ್ಠಿ ಮಾಡುವಷ್ಟು ಮಾತನಾಡಿ ಅಮ್ಮನ ಕೆಂಗಣ್ಣಿಗೆ ಕಾರಣರಾಗಿದ್ದೆವು. ಹೀಗಿರುವಾಗಿನ ಒಂದು ದಿನವೇ ನಮ್ಮಿಬ್ಬರಿಗೂ ಶಾಪಿಂಗ್ ಹುಚ್ಚು ತಲೆಗಡರಿಕೊಂಡಿದ್ದು! ಇಬ್ಬರ ಹತ್ತಿರವೂ ಹತ್ತು ಹತ್ತು ರೂಪಾಯಿ ಇದ್ದು ಬಸ್ಸ್ ಚಾರ್ಜಿಗೆ ೨-೨ ರೂಪಾಯಿ ಹೋದರೂ ಇನ್ನೂ ೮-೮ ರೂಪಾಯಿಗಳು ಇರುತ್ತವೆ ಎಂದು ನಮ್ಮ ಲೆಕ್ಖಾಚಾರ, ಇದು 1986 ರ ಸುಮಾರಿನ ವರ್ಷದಲ್ಲಿ. ಆಗ ನಮ್ಮ ಮನೆ ರಾಜಾಜಿನಗರ ಎಂಟ್ರೆನ್ಸಿನಲ್ಲಿತ್ತು. ನಮ್ಮ ಶಾಪಿಂಗ್ ಸ್ಪಾಟು ಮೆಜೆಸ್ಟಿಕ್ ಎಂದು ಒಂದು ದಿನ ರಾತ್ರಿಯೇ ರಾತ್ರಿ ಸುತ್ತಿನ ಮಾತುಕತೆಯಲ್ಲಿ ತೀರ್ಮಾನಿಸಿಕೊಂಡು ಬೆಳಗ್ಗೆ ಇಬ್ಬರೂ ಹೆಚ್ಚುಕಡಿಮೆ ಒಂದೇಬಣ್ಣದ ಲಂಗ-ಬ್ಲೌಸ್ ಧರಿಸಿಕೊಂಡು ತಯಾರಾದೆವು. ಮಾಮೂಲಿನಂತೆ ಹತ್ತು ಗಂಟೆಗೆಲ್ಲಾ ಬ್ರಂಚ್ ಮುಗಿಸಿ ಬಸ್ಸು ಹತ್ತಿದೆವು. ಮೆಜೆಸ್ಟಿಕ್ ತಲುಪುವವರೆಗೂ ಮಾತೂ ಮಾತೂ! ತಲುಪಿದಮೇಲಂತೂ ಸ್ವರ್ಗಕ್ಕೆ ರೆಕ್ಕೆ ಹಚ್ಚಿದ ಹಕ್ಕಿಗಳು ನಾವಿಬ್ಬರೂ! ತಿರುಗಾಡದ ಗಲ್ಲಿಗಳೇ ಇಲ್ಲ, ನೋಡದ ವಸ್ತುಗಳೂ ಇಲ್ಲ. ವಿಪರೀತ ಅಲೆದು ಸುಸ್ತಾದರೂ ಕ್ಯಾಂಟೀನಿನಂಥಾ ಕಡೆ ಏನಾದರೂ ಕುಡಿದು ತಿಂದು ಮಾಡಲು ಇಬ್ಬರಿಗೂ ಭಯ; ನೀರು ಕುಡಿಯಲು ಬಿಸ್ಲೇರಿಯೂ ಇಲ್ಲ, ಬಿಸಿಲೇರಿ ಸತ್ತು ಬೀಳುವವರೆಗೂ ಅಲೆದಿದ್ದೇ ಸೌಭಾಗ್ಯ! ಆದರೂ ನಮ್ಮಿಬ್ಬರ ವ್ಯಾಪಾರಕ್ಕೇನೂ ಕೊರತೆಯಿರಲಿಲ್ಲ. ಶಾಂತಲ ಸಿಲ್ಕ್ ಹೌಸಿಗೆ ಹೋಗಿ ನಮ್ಮಕ್ಕನ ಮದುವೆಗೆ ಸೀರೆ ವೆರೈಟೇಸ್ ನೋಡಬೇಕು ಅಂತ ಹತ್ತಾರು ಸಲ ಮಹಡಿ ಹತ್ತಿ-ಇಳಿದು ನೂರಾರು ಸೀರೆಗಳನ್ನು ನೋಡಿದ್ದೇ ನೋಡಿದ್ದು. ನಮ್ಮ ಓಡಾಟದಲ್ಲಿದ್ದ ಸಡಗರ, ಉತ್ಸಾಹ ಬಹುಶಃ ಶಾಂತಲ ಸಿಲ್ಕ್ ಹೌಸ್ನವರನ್ನೂ ದಂಗುಬಡಿಸಿದ್ದೀತು! ಕೊನೆಗೆ ಎಲ್ಲಾ ಸೆಲೆಕ್ಷನ್ ಮಾಡಿ ದೊಡ್ಡವರನ್ನು ಕರೆತರುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಪರಾರಿಯಾದಾಗ ಅರ್ಧ ಬೆಂಗಳೂರೇ ಗೆದ್ದ ಹಾಗೆ ಬೀಗಿದೆವು. ಅಲ್ಲೇ ಹತ್ತಿರದಲ್ಲಿದ್ದ ಪಾರ್ಕೊಂದರಲ್ಲಿ ಇಬ್ಬರೂ ದಣಿವಾರಿಸಿಕೊಳ್ಳಲು ಕುಳಿತು ಮಾತನಾಡುತ್ತಿರುವಾಗ ಯಾರೋ ದಾರಿಹೋಕ ವೃದ್ಧರೊಬ್ಬರು ‘ನಿಮ್ಮಂಥಾ ಹೆಣ್ಣುಮಕ್ಳು ಬರೋ ಜಾಗ ಅಲ್ಲ ಕಣ್ರಮ್ಮ ಇದು, ಮನೆಗೆ ಹೋಗಿ’ ಎಂದು ಹೊರಗೆ ಕಳುಹಿಸಿದ್ದರು. ಸರಿ, ಅಷ್ಟು ಹೊತ್ತಿಗೆ ನಮ್ಮ ಕಾಲುಗಳು ಮತ್ತೆ ನಡೆಯಲು ತಯಾರಾಗಿದ್ದವು! ನಾವು ಅವತ್ತು ಖರೀದಿ ಮಾಡದಿರುವ ವಸ್ತುಗಳೇ ಕಡಿಮೆ. ಪಾತ್ರೆಗಳು, ಟೊವೆಲ್ಲುಗಳು, ಬೆಡ್ಶೀಟುಗಳು ಇನ್ನೂ ಏನೇನೋ (ನಮ್ಮಕ್ಕನ ಮದುವೆಗೆ ಬೇಕಲ್ಲಾ ಅಹ್ಹಹ್ಹ !!!). ಕೊನೆಗೆ ರಸ್ತೆ ಬದಿಯಲ್ಲಿನ ಟೇಬಲ್ ಕ್ಲಾತ್ಗಳ ಕಡೆಗೆ ನಮ್ಮಿಬ್ಬರ ಗಮನ ನಿಂತಿತು. ೨೦ ರೂಪಾಯಿ ಹೇಳಿದ ಟೇಬಲ್ ಕ್ಲಾತ್ ಗೆ ೬ ರೂಪಾಯಿ ಬೆಲೆಕಟ್ಟಿ ಅವನು ಕೊಡೋದಿಲ್ಲ ಎಂದಾಗ ನಮ್ಮ ಜಾಣ್ಮೆಗೆ ನಾವೇ ಮೆಚ್ಚುತ್ತಾ ಮುಂದೆಸಾಗುತ್ತಿರುವಾಗ ಒಬ್ಬ ವ್ಯಾಪಾರಿಗೆ ಏನನ್ನಿಸಿತೋ ನಮ್ಮ ಬೆಲೆಗೇ ಕೊಡಲು ಮುಂದಾಗಿಬಿಟ್ಟ. ಆಗ ಶುರುವಾಗಿದ್ದು ನಿಜವಾದ ಟೆನ್ಷನ್ನು! ಇಲ್ಲಿಂದ ಮುಂದಕ್ಕೆ “ಟುಡೇ ಇಸ್ ನಾಟ್ ಅವರ್ ಡೇ ” ಅಂತ ನಮ್ಮಿಬ್ಬರ ಅಂತರ್ವಾಣಿ ಹೇಳತೊಡಗಿತು! ‘ಈಗ ಬರುತ್ತೇವೆ, ೫ ನಿಮಿಷ, ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಾಳೆ’ ಅಂತ ಇಬ್ಬರೂ ಲಗುಬಗೆಯಿಂದ ಕಂಬಿ ಕಿತ್ತೆವು. ‘ನಿಜವಾಗಿಯೂ ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಿದ್ದರೆ ನಮ್ಮಿಬ್ಬರಿಗೂ ಕಪಾಳಕ್ಕೆ ಹೊಡೆದು ಹಲ್ಲು ಉದುರಿಸಿ ನೆಲಕಚ್ಚಿಸಿಬಿಡುತ್ತಿದ್ದಳು ಅಲ್ಲವಾ’ ಎಂದು ಇಬ್ಬರೂ ಬಿದ್ದು ಬಿದ್ದು ನಗುತ್ತಾ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂಥಾ ಅವರ್ಚನೀಯ ಖುಷಿಯಿಂದ ಮನೆಕಡೆಗೆ ಬಸ್ಸು ಹತ್ತಿದೆವು.  ಆಗ ಬೇಸಿಗೆ ರಜೆ ಕಾಲವಾದ್ದರಿಂದ ಬಸ್ಸೆಲ್ಲ ಖಾಲಿ ಖಾಲಿ. ಹಾಗಿದ್ದರೂ ನಾವಿಬ್ಬರೂ ನಿಂತುಕೊಂಡು ಕಿಸಿ ಕಿಸಿಗುಟ್ಟುತ್ತಿರುವುದನ್ನು ಕಂಡ ಕಂಡಕ್ಟರ್ ‘ಕೂತ್ಕೊಳ್ರಮ್ಮ ಸುಮ್ನೆ, ಕೂತ್ಕೊಂಡು ಮಾತಾಡಕ್ಕಾಗಲ್ವ ನಿಮಗೆ’ ಎಂದು ಗದರಿದಾಗಲೇ ನಮಗೆ ಎಚ್ಚರ! ಪಾಪ! ಹಂಚಿಕಡ್ಡಿ ಪರ್ಸನಾಲಿಟಿ ಇದ್ದ ನಾವಿಬ್ಬರೂ ಎಲ್ಲಿ ಮಾತಲ್ಲಿ ಎಚ್ಚರ ತಪ್ಪಿ ಗಾಳಿಯಲ್ಲಿ ಹೊರಗೆ ಹಾರಿ ಬಿಡುತ್ತೇವೆಯೊ ಎಂದು ಅವನ ಕಾಳಜಿ! ಅಂತೂ ನಾವಿಬ್ಬರೂ ೧೦೦ ವ್ಯಾಟ್ ಬಲ್ಬಿನ ಮುಖಗಳೊಂದಿಗೆ ಕ್ಷೇಮವಾಗಿ ಹೋಗಿ ಹಾಗೇ ಮನೆ ಸೇರಿದೆವು. ಮಟ ಮಟ ಮಧ್ಯಾಹ್ನ ೩ ಗಂಟೆಯವರೆಗೂ ಅಮ್ಮ ಔಟ್ ಹೌಸ್ ನಿಂದ ಹೊರಗಿನ ಗೇಟಿನವರೆಗೂ ೧೦ ಸಾರಿ ಶತಪಥ ತಿರುಗಿದ್ದಳು. ಮುಂದಿನ ಮನೆಯ ಓನರ್ ಅಜ್ಜ (ರಿಟೈರ್ಡ್ ಮಿಲಿಟರಿ ಮ್ಯಾನ್) ನಿಗೂ ನಾವಿಬ್ಬರೂ ಇನ್ನೂ ಬಂದಿಲ್ಲದ ಸುದ್ದಿ ತಲುಪಿತ್ತು. ಹಾಗಾಗಿ ಅಜ್ಜನೂ ಅಲ್ಲೇ ಗಸ್ತು ಹೊಡೆಯುತ್ತಿದ್ದರು. ಇದ್ಯಾವುದರ ಪರಿವೆಯೂ ಇಲ್ಲದ ಹುಚ್ಚುಖೋಡಿ ಅಕ್ಕ ತಂಗಿಯರಿಬ್ಬರೂ ಕಿಲ ಕಿಲ ನಗುತ್ತಾ ಗೇಟು ತೆಗೆಯುವುದನ್ನು ಕಂಡ ಅಜ್ಜ ‘ರಾಮ ರಾಮ ಅದೇನು ಮಾತಮ್ಮ ನಿಮ್ಮಿಬ್ಬರದ್ದು; ಮರದ ಬಾಯಾಗಿದ್ದರೆ ಒಡೆದು ಹೋಗಿರುತ್ತಿತ್ತು ಇಷ್ಟು ಹೊತ್ತಿಗೆ’ ಎಂದು ತಲೆತಲೆ ಚೆಚ್ಚಿಕೊಂಡರು. ನಾವಿಬ್ಬರೂ ೧-೨ ನಿಮಿಷ ಮಾತು ನಿಲ್ಲಿಸಿದ ಶಾಸ್ತ್ರ ಮಾಡಿ ಹೊರಗಿನ ನಲ್ಲಿಯಲ್ಲಿ ಕೈಕಾಲು ತೊಳೆದು ಮನೆ ಹೊಕ್ಕೆವು. ಅಮ್ಮ, ‘ಸಧ್ಯ ಬಂದ್ರಲ್ಲ , ಯಾಕ್ರಮ್ಮ ಬಿಸಿಲಲ್ಲಿ ಬೀದಿ ಬೀದಿ ಅಲೆದು ಬಾಳಕದ ಮೆಣಸಿನ ಕಾಯಿ ಥರ ಆಗ್ತೀರಾ, ಆ ದೇವರೇ ನಿಮ್ಮಿಬ್ಬರಿಗೂ ಬುದ್ಧಿ ಕೊಡಬೇಕು ಅಷ್ಟೇ’ ಎನ್ನುತ್ತಾ ನಿಡುಸೊಯ್ದು ಒಂದಿಷ್ಟು ಮೊಸರನ್ನ ಕಲೆಸಿ ತಿನ್ನಲು ಕೊಟ್ಟಳು. ನಾವಿಬ್ಬರೂ ಅದಕ್ಕೂ ನಗುತ್ತಾ ಬೇಗಬೇಗ ತಿಂದು ಬೆಳಗಿನಿಂದ ಅಲ್ಲಿಯವರೆಗಿನ ನಮ್ಮ ದಿಗ್ವಿಜಯದ ವೀರಗಾಥೆಯನ್ನೇ ವಿಷಯವಾಗಿಸಿಕೊಂಡು ಮತ್ತೆ ಮಾತು ಶುರುವಿಟ್ಟುಕೊಂಡೆವು!

Leave a comment

Filed under ಲೇಖನಗಳು

ಅಣ್ಣ-ತಂಗಿ ಜೈಲಿಗೆ ಹೋದ ಪ್ರಸಂಗ !!!!!

8TAo6ydTa ಶ್ರೀರಂಗಪಟ್ಟಣ ಬಿಟ್ಟು ಕೊಳ್ಳೇಗಾಲಕ್ಕೆ ಬಂದಮೇಲೆ ನನಗೆ ನಾನೇ ಸ್ನೇಹಿತೆಯಾಗಿದ್ದೆ. ಆಟೋಟಕ್ಕೆ ಹಲವಾರು ಗೆಳೆಯರಿದ್ದರೂ ನನ್ನ ಅಕ್ಕ, ತಮ್ಮನ ಕೊರತೆ ನೀಗುತ್ತಲೇ ಇರಲಿಲ್ಲ. ಹೀಗಿರುವಾಗ ನನ್ನ ಜೀವನದಲ್ಲಿ ತನ್ನಿರುವಿಕೆಯನ್ನು ನೆನಪುಮಾಡಿಸಿದವನೇ ನನ್ನಣ್ಣ ಶಾಮಣ್ಣ! ಅವನನ್ನು ಶಾಮ ಅಂತಲೇ ಕರೆಯುವುದು. ಅವನಾದರೋ ಬೆಂಗಳೂರು ದೊಡ್ಡಮ್ಮನ ಮಗ. ಹಾಗಂತ ಗೊತ್ತೇ ಆಗುತ್ತಿರಲಿಲ್ಲ. ಎಲ್ಲರೂ ಜೊತೆಯಲ್ಲೇ ಹುಟ್ಟಿ ಬೆಳೆಯುತ್ತಿದ್ದೇವೆ; ಕಾರಣಾಂತರಗಳಿಂದ ಬೇರೆ ಬೇರೆ ಊರು ಸೇರಿದ್ದೇವೆ ಎನಿಸುತ್ತಿತ್ತು. ಬೇಸಿಗೆ ರಜೆ ಬಂತೆಂದರೆ ಶಾಮ ಬಂದೇಬರುತ್ತಾನೆ ಎನ್ನುವ ನಿರೀಕ್ಷೆ ನನ್ನದು. ಆಗ ಅವನೂ ಪುಟ್ಟ ಹುಡುಗನಾದರೂ ಅವನೊಬ್ಬ ಚ್ಯೆಲ್ಡ್ ಜೀನಿಯಸ್ ಎಂದು ಅಣ್ಣ ತಾವು ಬದುಕಿರುವವರೆಗೂ ಹೇಳುತ್ತಿದ್ದರು. ಅದು ನಿಜವಾದ ಮಾತೇ!  ತನ್ನ ಎಳೇ ವಯಸ್ಸಿನಲ್ಲೇ ಎಷ್ಟೇ ಉದ್ದದ ಹಾಡನ್ನಾದರೂ ಬರೆದುಕೊಳ್ಳದೆ  ನೆನಪಿನಲ್ಲಿಟ್ಟುಕೊಂಡು ಹಾಡಬಲ್ಲವನಾಗಿದ್ದ, ಒಂದು ಹಾಡನ್ನು ಮತ್ತೊಂದು ರಾಗದಲ್ಲಿ (ತನ್ನ ಸ್ವಂತದ್ದು) ಎಷ್ಟೇ ದೊಡ್ಡ ಸಭೆ ಸಮುದಾಯವಿದ್ದರೂ ಅಂಜಿಕೆಯಿಲ್ಲದೆ ಹಾಡಬಲ್ಲವನಾಗಿದ್ದ! ಇಂಗ್ಲಿಷ್ ಹಾಗು ಕನ್ನಡದಲ್ಲಿ ಯಾರೊಬ್ಬರ ಸಹಾಯವೂ ಇಲ್ಲದೆ ಪುಟಗಟ್ಟಲೆ ಪತ್ರಬರೆಯುವ, ಪ್ರಾಣಿ, ಪಕ್ಷಿ, ಮನುಷ್ಯರನ್ನು ಅನುಕರಿಸುವ, ಒಂದು ವಿಷಯದ ಬಗ್ಗೆ ನಿರರ್ಗಳವಾಗಿ ವಯಸ್ಸಿಗೆ ಮೀರಿ ಮಾತನಾಡುವ ತಾಕತ್ತು ಎಲ್ಲಾ ನನ್ನ ಶಾಮಣ್ಣನಿಗಿತ್ತು! ಹಾಗೆಯೇ ಅಪ್ರತಿಮ ತುಂಟ.  ನಾವಿಬ್ಬರೂ ಅತೀ ಚಟುವಟಿಕೆಯಿರುವ ಜೀವಿಗಳಾದ್ದರಿಂದ ಅವನನ್ನು ಮತ್ತು ನನ್ನನ್ನು ಖಾಸಾ ಅಣ್ಣ ತoಗಿಯೆಂದು ಇಡೀ ಲೋಕ ಅಂಗೀಕರಿಸಲೇಬೇಕಿತ್ತು.  ಪಶು-ಪಕ್ಷಿಗಳಿಗಿಂತಾ ಮುಂಚಿತವಾಗಿಯೇ ನಾವಿಬ್ಬರೂ ದಿನಾ ಏಳುತ್ತಿದ್ದುದು. ನಮ್ಮನ್ನು ಏಳಿಸುವ ಜವಾಬ್ದಾರಿಯನ್ನು ನಾವು ಹಿರಿಯರಿಗೆ “ರಜೆಯಲ್ಲಿ” ಮಾತ್ರ ಎಂದಿಗೂ ಕೊಟ್ಟಿದ್ದಿಲ್ಲ. ನಾವಿಬ್ಬರೂ ಸುಮಾರು 6-7 ವರ್ಷದವರಿರಬಹುದು ಆಗ. ದಿನಾ ಬೆಳಗ್ಗೆ ಸುಮಾರು ಒಂದು ಪುಟ ದಿನಪತ್ರಿಕೆ ಓದಿ ಮನಸ್ಸಿಗೆ ತೋಚಿದ್ದನ್ನು ಬರೆಯುವಂತೆ ಶಾಮ ಪೀಡಿಸಿಬಿಡುತ್ತಿದ್ದ. ಅವನೂ ಹಾಗೆ ಬರೆಯುತ್ತಿದ್ದ! ಬರೆಯದಿದ್ದರೆ ‘ನಿನ್ನನ್ನು ತಿರುಗಾಡಿಸಲು ಕೆರೆದುಕೊಂಡು ಹೋಗುವುದಿಲ್ಲ; ನಾನು ಬೆಳಗ್ಗೆ ನೋಡಿದ ಎರಡು ಕೊಕ್ಕಿನ ಹಕ್ಕಿಯನ್ನು ನಿನಗೆ ತೋರಿಸುವುದಿಲ್ಲ’ ಎಂದೆಲ್ಲಾ ವಿಚಿತ್ರ ಬೆದರಿಕೆಗಳನ್ನು ಹಾಕುತ್ತಲೇ ನನ್ನನ್ನು ಬರೆಯುವಂತೆ ಮಾಡುತ್ತಿದ್ದ. ಆಗೆಲ್ಲಾ ಇವನ ರಜೆ ಬೇಗ ಮುಗಿದು ಊರಿಗೆ ಹೊರಡಬಾರದೇ ಎನ್ನಿಸುತ್ತಿತ್ತು. ಇವತ್ತು ಅರಿವಾಗುತ್ತಿದೆ ಅವನು ಅವತ್ತು ಹಾಕಿಕೊಟ್ಟ ಮೇಲ್ಪಂಕ್ತಿ ಈ ಎಲ್ಲಾ ಬರವಣಿಗೆಯ ಮೂಲವೆಂದು!

ಇಂತಹ ದಿನಗಳಲ್ಲೇ ನಮ್ಮಿಬ್ಬರ ಜೀವನದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಆ ದಿನ ಒದಗಿಬಂದದ್ದು! ಅಂದು ಒಂದು ರೋಚಕವಾದ ಆಮಿಷವೊಂದನ್ನು ಮುಂದಿಟ್ಟು ಈ ದಿನ ನನ್ನ ಕನ್ನಡ ಬರವಣಿಗೆಯ ಪುಟವನ್ನೂ ನೀನೇ ಬರೆದರೇ ನಿನ್ನನ್ನು ಜೈಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಶಾಮ ಘೋಷಿಸಿ ನನ್ನ ಸಂತೋಷವನ್ನು ಸೀಮಾತೀತಗೊಳಿಸಿಬಿಟ್ಟ! ಇಂತಹ ಸೌಭಾಗ್ಯ ಇಷ್ಟು ಸಲೀಸಾಗಿ ಒದಗಿಬರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದ್ದರಿಂದ ಬೇಗಬೇಗನೆ ‘ಅಷ್ಟೇ ತಾನೆ’ ಎನ್ನುತ್ತಾ ದುರಹಂಕಾರದಲ್ಲಿ ಎರೆಡು ಪುಟ ಬರೆದು ಬಿಸಾಕಿಬಿಟ್ಟೆ. ಶಾಮನೂ ‘ವೆರಿಗುಡ್’ ಎಂದು ಹರ್ಷದಿಂದ 4-1/2 ಸ್ಟಾರನ್ನು ಕೊಟ್ಟೇಬಿಟ್ಟ (ಬರಹ ಗುಂಡಾಗಿಲ್ಲ, ಇದ್ದಿದ್ದರೆ 5 ಸ್ಟಾರನ್ನೇ ಕೊಡುತ್ತಿದ್ದೆ ಎಂದು ಸುಳ್ಳು ಹೇಳಿಯೇಬಿಟ್ಟ). ಏಕೆಂದರೆ ಅವತ್ತು ನಾನು ಗಡಿಬಿಡಿಯಲ್ಲಿ ಏನೇನೂ ಚೆನ್ನಾಗಿ ಬರೆದಿರಲಿಲ್ಲ. ಅವೆಲ್ಲ ಇರಲಿ, ಈ ಜೈಲು ಯಾತ್ರೆಗೆ ಶಾಮ ಅಣ್ಣನನ್ನು(ನಮ್ಮ ಅಪ್ಪನ್ನ ನಾನು ಹಾಗೇ ಕರೆಯೋದು) ಅದೆಷ್ಟು ಸುಲಭವಾಗಿ ಒಪ್ಪಿಸಿಬಿಟ್ಟ! ಅಣ್ಣ ದೊಡ್ಡ ಲಾಯರ್ ಆಗಿದ್ದರಿಂದ ಅವರ ಕೋರ್ಟಿನ ಪಕ್ಕದಲ್ಲೇ ಇದ್ದ ಪೋಲಿಸ್ ಸ್ಟೇಷನ್ನಿಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದಾಗಿತ್ತು. ಆದರೆ ನನಗೆ ಅಲ್ಲಿಗೆ ಹೋಗಿ ನೋಡುವ ಆಸೆಯಿದ್ದರೂ ಏನೋ ಭಯದಿಂದಾಗಿ ತೆಪ್ಪಗಿದ್ದೆ. ಈ ದಿನ ಶಾಮನಿಗೆ ಧಾರಾಳವಾಗಿ ಅನುಮತಿಯಿತ್ತಿದ್ದ ಅಣ್ಣ ಇಂತಿಷ್ಟು ಹೊತ್ತಿಗೆ ಬಾ ಎಂದು ಹೇಳಿ ಹೋಗಿದ್ದರು. ಈ ಶಾಮನೋ ಕೋರ್ಟು ಯಾವ ಕಡೆ ಇದೆ, ಹೇಗೆ ಬರೋದು ಅನ್ನುವ ವಿಚಾರಗಳನ್ನೇ ಕೇಳಿರಲಿಲ್ಲ. ಅಣ್ಣನಿಗೆ ಯಾವಾಗಲೂ ಶಾಮನ ಮೇಲೆ ಓವರ್ ಕಾನ್ಫಿಡೆನ್ಸು! ಈ ನಟೋರಿಯಸ್ ಫೆಲೋ (ಪ್ರೀತಿಗೆ ಶಾಮನ್ನ ಹಾಗೆನ್ನುತ್ತಿದ್ದರು) ಅಮೇರಿಕಾಗೆ ಬೇಕಾದರೂ ಒಬ್ಬನೇ ಹೋಗಿ ಬರುತ್ತಾನೆ ಎಂದು ಖುಷಿ ಪಡುತ್ತಿದ್ದರು. ಅದು ನಿಜವೇ, ಈಗಿನ ಹಾಗೆ ಜೀ.ಪಿ.ಎಸ್ಸು ಇಲ್ಲ, ಮ್ಯಾಪೂ ಇಲ್ಲ, ಶಾಮಣ್ಣ ನಡೆದಿದ್ದೇ ದಾರಿ.  ಅಮ್ಮ ತಿಂಡಿ ತಿಂದು ಹೋಗ್ರೋ ಎಂದು ಒಂದಿಷ್ಟು ಅನ್ನ-ಸಾರು ಕಲೆಸಿ ಹಾಕಿದ್ದಳು. ನಮಗೆ ಅದೇ ತಿಂಡಿ, ಒಂಥರಾ ಬ್ರಂಚ್! ಗಬಬಗನೆ ತಿಂದು ಇಬ್ಬರೂ ಹೊರಟಾಗ ಅಮ್ಮ ದಾರಿ ಖರ್ಚಿಗೆಂದು ಎಂಟಾಣೆ ಕೂಡಾ ಕೊಟ್ಟಿದ್ದಳು! ಅದರಲ್ಲಿ ಸೀಬೇಕಾಯೋ, ಹಾಲುಕೋವಾನೊ, ಬೊಂಬೆ ಮಿಠಾಯೋ ಯಾವುದು ತಿನ್ನುತ್ತೇವೆ ಎನ್ನುವುದು ಕಾಲವೇ ನಿರ್ಧರಿಸಬೇಕಿತ್ತು. ಇಂತಹಾ ಒಂದು ಸುಡುಬಿಸಿಲಿನ ಮಧ್ಯಾಹ್ನ ನಾವಿಬ್ಬರೂ ಪಾದಯಾತ್ರೆ ಹೊರಟಿದ್ದು. ಎಡ, ಬಲ, ಪೇಟೆ, ಅಲ್ಲಿ, ಇಲ್ಲಿ ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ನಮ್ಮಿಬ್ಬರಿಗೆ ಕಾಲುನೋವೇ ಬರುತ್ತಿರಲಿಲ್ಲವಾ!? ಹೀಗೆಲ್ಲ ಎಷ್ಟೋ ಸಾರಿ ಅಲ್ಲಿಲ್ಲಿ ನೋಡುತ್ತಾ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೋಗುವಾಗ ಕೆಲವು ಅಪರೂಪದ ದೃಶ್ಯಗಳನ್ನು ಶಾಮಣ್ಣ ಪರಿಚಯಿಸುತ್ತಿದ್ದ. ಗಿಣಿ ಶಾಸ್ತ್ರ, ಕೊರವಂಜಿಯರು, ಮಹದೇಶ್ವರನಿಗೆ ಹರಕೆ ಹೊರಟವರು, ಕಡಲೇ ಪುರಿ ಮಾರುವವರು, ಮುಖದ ತುಂಬಾ ವಿಭೂತಿ ಹಚ್ಚಿಕೊಂಡು ಓಡಾಡುವ ಗೊರವಯ್ಯಗಳು, ಬುಡುಬುಡಿಕೆ ಗೊಗ್ಗಯ್ಯಗಳು ಹೀಗೆ ಎಲ್ಲರನ್ನೂ ತೋರಿಸಿ ಅವರ ಗುಣ ವಿಶೇಷಗಳನ್ನು ವರ್ಣಿಸುತ್ತಾ ‘ನೀನು ಒಂಟಿಯಾಗಿ ಕುಣುಕುಣಿತಾ ಇಲ್ಲೆಲ್ಲಾ ಬಂದು ಇವರ ಕೈಗೆ ಸಿಕ್ಕಿಬಿದ್ದರೆ ನಿನ್ನನ್ನು ಕದ್ದುಕೊಂಡು ಹೋಗಿ ತಿಂದುಬಿಡುತ್ತಾರೆ’ ಎನ್ನುವ ಕಟ್ಟೆಚ್ಚರಿಕೆಯನ್ನೂ ದೊಡ್ಡ-ದೊಡ್ಡ ಕಣ್ಣು ಬಿಟ್ಟುಕೊಂಡು ಹೇಳಿ ತನ್ನ ಜವಾಬ್ದಾರಿ ಮೆರೆಯುತ್ತಿದ್ದ. ಯಾವ ಊರಾದರೂ ಹಾಳಾಗಲಿ ಈಗ ನಮ್ಮ ಶಾಮ ನನ್ನ ಜೊತೆಗಿರುವುದರಿಂದ ನನ್ನನ್ನು ಯಾರೂ ಎನೂ ಮಾಡಲಾರರು ಎನ್ನುವ ಧೈರ್ಯದಿಂದ ನಾನು ಮತ್ತಷ್ಟು ಶ್ರೀಮದ್ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದೆ.

ಅವತ್ತೂ ಹೀಗೇ ಅಲೆದಲೆದು ಕೊನೆಗೆ ಕೋರ್ಟು ತಲುಪಿದೆವು. ಕೋರ್ಟಿನ ಮುಂದೆ ಸಾಲಾಗಿದ್ದ ಐಸ್ ಕ್ಯಾಂಡಿ, ಸೀಬೇಕಾಯಿಗಳ ಕಡೆಗೆ ಇಬ್ಬರಿಗೂ ಜೀವ ಎಳೆಯುತ್ತಿತ್ತು. ಇದ್ದ ಎಂಟಾಣೆಯಲ್ಲಿ ಒಂದೊಂದು ಸೀಬೇಕಾಯಿ ಗುಳುಂ ಮಾಡಿ ಕೋರ್ಟನ್ನು ಹೊಕ್ಕೆವು. ಹೇಗೋ ಮಾಡಿ ನಮ್ಮಪ್ಪನ ಆಫೀಸನ್ನು ಪತ್ತೆಹಚ್ಚಿ ಅವರ ಜೊತೆ ಪೋಲಿಸ್ ಸ್ಟೇಶನ್ನಿಗೆ ಹೋದೆವು.  ಅಣ್ಣ ಅಲ್ಲಿದ್ದ ಪೋಲಿಸಿನವರೊಬ್ಬರಿಗೆ ನಮ್ಮಿಬ್ಬರಿಗೂ ಲಾಕಪ್ ತೋರಿಸಲು ಹೇಳಿ ಹೊರಟುಬಿಟ್ಟರು. ನಾನು ಶಾಮ ಇಬ್ಬರಿಗೂ ಕುತೂಹಲ ಮತ್ತು ಅತೀ ಕುತೂಹಲ. ದಪ್ಪ ಮೀಸೆಯ, ಎತ್ತರದ, ಕೆಂಪು ಕಣ್ಣಿನ ಆಜಾನುಬಾಹು ಕಳ್ಳರು ಒಬ್ಬರಿಗಿಂತಾ ಒಬ್ಬರು ಭಯಂಕರವಾಗಿ ಇರುತ್ತಾರೆ ಎಂದು ಹಲವಾರುದಿನಗಳಿಂದ ಕನಸು ಕಂಡಿದ್ದ ನನಗೆ ಅತೀವ ದುಃಖಕರವಾದ ನೋಟ ಕಾದಿತ್ತು. ಅವರೆಲ್ಲಾ ಸಾಧಾರಣ ಮನುಷ್ಯರಂತೆ ಇದ್ದು ನನಗೆ ಇಷ್ಟೊಂದು ನಿರಾಶೆಯನ್ನುಂಟುಮಾಡಿದ್ದು ನಿಜಕ್ಕೂ ತಪ್ಪು ತಾನೆ? ಅಲ್ಲಿದ್ದ ನಾಲ್ಕು ಜನರಲ್ಲಿ ಒಬ್ಬ ಕಳ್ಳ ಮಾತ್ರ ಇದ್ದಿದ್ದರಲ್ಲಿ ಕಪ್ಪಗೆ, ದಪ್ಪಗೆ ಇದ್ದು ಕಳ್ಳರ ಜಾತಿಗೆ ಆಗಬಹುದಾಗಿದ್ದ ಅವಮಾನವನ್ನು ತಪ್ಪಿಸುವಂತಿದ್ದ. ಅದೇಕೋ ಅವನನ್ನು ಮುರಾರೀ, ಮುರಾರೀ  ಎಂದು 3-4 ಸಾರಿ ಪೋಲೀಸಿನವರು ಕೂಗಿ ಏನೋ ಹೇಳಿ, ಕೇಳಿ ಸಹಿ ಮಾಡಿಸಿಕೊಂಡರು. ಅಚಾನಕ್ ನನ್ನ ಕಡೆಗೆ ನೋಡಿದ ಮುರಾರೀ ದೊಡ್ಡದಾಗಿ ಕಣ್ಣು ಬಿಟ್ಟು, ಕೆಂಪು ಹಲ್ಲು ತೋರಿಸಿ ನಕ್ಕುಬಿಟ್ಟ. ಆ ಕ್ಷಣದಲ್ಲೇ ಭೂಮಿ ನಡುಗಿದಹಾಗಾಗಿ ಹೆದರಿ ಗುಬ್ಬಚ್ಚಿಯಾದ ನಾನು ಹೊರಡೋಣ ಬಾರೋ ಬಾರೋ ಎಂದು ಶಾಮನಿಗೆ ದುಂಬಾಲು ಬಿದ್ದು ‘ತಡಿಯೇ ಇವಳೊಬ್ಳು, ಈಗಿನ್ನೂ ಬಂದಿದೀವಿ ಅದು ಹ್ಯಾಗೆ ಹೋಗೊಕ್ಕಾಗುತ್ತೆ ‘ ಎಂದು ಬೈಸಿಕೊಂಡೆ. ಶಾಮ ಮಾತ್ರ ಅಲ್ಲಿದ್ದ ಎಲ್ಲಾ ಕಳ್ಳರ ಜೊತೆಗೆ ಪೋಲೀಸರನ್ನೂ ಮಾತಾಡಿಸಿ ಶೇಕ್ ಹ್ಯಾಂಡ್ಸ್ ಕೊಟ್ಟು, ನನಗೂ ಹಾಗೇ ಶೇಕ್ ಹ್ಯಾಂಡ್ಸ್ ಕೊಡಿಸಿ ಹೊರಗೆ ಕರೆತಂದ. ನಾನು ಅರ್ಧ ಬಿಳುಚಿದ ಮುಖದಿಂದ ಜೊತೆಗೆ ಅಲ್ಲಿಂದ ಪಾರಾಗಿ ಹೊರಬಿದ್ದ ನೆಮ್ಮದಿಯಿಂದ ಶಾಮನ ಜೊತೆಗೆ ಮನೆ ತಲುಪಿದೆ. ಆ ದಿನವೆಲ್ಲಾ ಶಾಮ ಜೈಲಿನ ಬಗ್ಗೆ ವಿವರಿಸಿದ್ದೇ ವಿವರಿಸಿದ್ದು. ಅಣ್ಣ ಮನೆಗೆ ಬಂದನಂತರ  ಪೋಲಿಸಿನೋರು ನಮ್ಮಿಬ್ಬರನ್ನೂ  ತುಂಬಾ ಗಂಭೀರವಾದ (!) ಮಕ್ಕಳೆಂದು ಹೊಗಳಿದ್ದನ್ನು ಸಂತೋಷದಿಂದ ಅಮ್ಮನೊಡನೆ ಹೇಳಿಕೊಂಡರು. ಅವತ್ತೆಲ್ಲಾ ಮನೆಯಲ್ಲಿ ಹಬ್ಬದ ವಾತಾವರಣವಿತ್ತು.  ನನಗೆ ಮಾತ್ರ ಯಾವುದೂ ಬೇಕಾಗಿರಲಿಲ್ಲ. ಮುರಾರಿ ಕಳ್ಳನ ಬೆದರಿಕೆಯ ನೋಟ, ನಗು ಪದೇ ಪದೇ ನೆನಪಾಗಿ ನಡುಕ ಬಂದಹಾಗಾಗುತ್ತಿತ್ತು. ಕೊನೆಗೆ ಶಾಮನೇ ‘ಯಾಕೇ ಹೀಗಿದ್ದೀಯ’ ಎಂದಾಗ ಕಾರಣ ಹೇಳಿ ನನ್ನ ಕಾಲಮೇಲೆ ನಾನೇ ಚಪ್ಪಡಿ ಎಳೆದುಕೊಂಡೆ. ಮುರಾರಿ ಕಳ್ಳನನ್ನು ನಾನು ಎಷ್ಟು ಮರೆಯಲು ಪ್ರಯತ್ನಿಸಿದರೂ ಈ ಶಾಮ ‘ನಾರಿಯಾ ಸೀರೆ ಕದ್ದ…ಕೃಷ್ಣಾ …ಮುರಾರೀ ಎಂದು ಹಾಡಿ ಹಾಡಿ ನಕ್ಕು ನೆನಪು ಮಾಡಿಸಿಬಿಡುತ್ತಿದ್ದ. ನಾನು ಅವನನ್ನು ಹೊಡೆಯಲು ಅಟ್ಟಿಸಿಕೊಂಡು ಹೋಗುವುದು, ಅವನು ಮನೆ ಹಿಂದಿದ್ದ ಕುಳ್ಳು ಮಾವಿನ ಮರ, ಕಾಂಪೌಂಡು ಇತ್ಯಾದಿ ಏರಿ ಅಣಕಿಸುವುದು ಎಲ್ಲಾ ಮಾಮೂಲಾಯಿತು. ಅದು ಹೇಗೋ ಒಂದೆರಡು ದಿನಗಳಲ್ಲಿ ಭಯ ತಾನೇತಾನಾಗಿ ಹೋಯಿತು.

ನಮ್ಮ ಇಂಡೋರ್ ಗೇಮ್ಸ್ ಕೂಡ ಔಟ್ ಡೋರಿನಲ್ಲೇ ಇರುತ್ತಿದ್ದರಿಂದ ನಮ್ಮ ಅಮ್ಮಂದಿರು ಬಚಾವಾಗಿದ್ದರು. ಅದರೂ ಅಟ ಮುಗಿಸಿ ಬಂದೆವಂದರೆ ನಮ್ಮ ಇಡೀ ಶರೀರಗಳು ಬಟ್ಟೆ-ಬರೆಯ ಸಮೇತವಾಗಿ ಮಣ್ಣಿನ ಬಣ್ಣಕ್ಕೆ ತಿರುಗಿ ಟಾಪ್ ಟು ಬಾಟಮ್ ಮಣ್ಣಿನ ಮಕ್ಕಳಾಗಿರುತ್ತಿದ್ದೆವು. ಅ ಮಣ್ಣಿನ ಬಣ್ಣವೇ ತೀರಾ ಅಷ್ಟೊಂದು ಡಾಕ್೯ ಅಗಿದ್ದರೆ ನಮ್ಮ ತಪ್ಪೇನಿದೆ ಹೇಳಿ? ಹಾಗಾಗಿ ನಮ್ಮ ಅಮ್ಮಂದಿರು ಸಹ ನಮ್ಮಂತಹ ಮಕ್ಕಳನ್ನು ಹೆತ್ತ ಮೇಲೆ ಯಾವುದೇ ಸಫ್೯ನ ಖರೀದಿಯಲ್ಲೂ ಸಮಜ್ದಾರಿ ಉಳಿದಿಲ್ಲ ಎನ್ನುವ ಸತ್ಯ ಮನಗಂಡಿದ್ದರು . ಇದೆಲ್ಲದರ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಹಾಗಂತ ನಾವು ದಿನಾ ಮಣ್ಣಾಟ ಆಡುತ್ತಿರಲಿಲ್ಲ, ಫಾರ್ ಎ ಛೇಂಜ್ ಒಮ್ಮೊಮ್ಮೆ ದೇಶಭಕ್ತಿ ಕಥೆಗಳನ್ನು ಹೇಳಿಕೊಳ್ಳುವುದು, ಹಿತ್ತಲಿನ ಗಿಡಮರಗಳಿಗೆ ಪಿಕ್ ಅಂಡ್ ಸ್ಪೀಕ್ ಮಾಡಿಸುವುದು, ಬೊಂಬೆಗೆ ಆಪರೇಶನ್ನು, ಇನ್ನೊಂದು ದಿನ ಪರ್ವತಾರೋಹಣ (ಮರಳಿ ಗುಡ್ಡಾ), ಮ್ಯಾಚೆಸ್ಸ್ ಕಲೆಕ್ಷನ್ನು, ಶಾಮನ ಸ್ಥಳೀಯ ಗೆಳೆಯರು ಮತ್ತು ಅವನು ಆಡುವ ಗೋಲಿ ಆಟ ಮತ್ತು ಲಗೋರಿ ನೋಡುವುದು (ಇದಕ್ಕೆ ನನ್ನನ್ನು ಸೇರಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ನನಗೆ ತುಂಬಾ ಕೋಪವಿತ್ತು), ಇರುವೆಗಳು ಹೇಗೆ ಓಡಾಡುತ್ತವೆ ಎನ್ನುವ ಬಗ್ಗೆ ರಿಸರ್ಚು, ಅಮ್ಮ ಒಣಗಿಸಲೆಂದು ಇಟ್ಟಿದ್ದ ಸಂಡಿಗೆಗಳನ್ನು ಮಳೆ ಬಂದಾಗ ಎತ್ತಿ ತರುವ ನೆಪದಲ್ಲಿ ಅರೆ-ಹಸಿ ಸ್ಟೇಜಿನಲ್ಲೇ ಸ್ವಾಹಾ ಮಾಡುವುದು, ಮನೆಯ ಹೊರಗಿನ ಮರದಲ್ಲಿದ್ದ ಅಂಟು ಕಾಯಿಗಳನ್ನು ಜಜ್ಜಿ ಬಾಲ್ ಮಾಡುವುದು, ಸೈಕಲ್ ಶಾಪಿನ ಮುಂದೆ ಮಣ್ಣಲ್ಲಿ ಮಣ್ಣಾಗಿದ್ದ ಗುಂಡುಗಳನ್ನು ವಜ್ರಕ್ಕಿಂತಾ ಅಮೂಲ್ಯ ಎನ್ನುವಂತೆ ಆರಿಸಿ ಸೈಕಲ್ ಶಾಪಿನವರ ಹತ್ತಿರ ಛೀ, ಥೂ ಎನ್ನಿಸಿಕೊಂಡು ಓಡಿಬರುವುದು ಇಂತಹ ನೂರೆಂಟು ಆಟಗಳನ್ನು ಆಡುತ್ತಾ, ಕುಣಿಯುತ್ತಾ ಕಾಲ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ, ಅಷ್ಟರಲ್ಲಿ ಶಾಮನ ರಜೆ ಮುಗಿದು ಅವನು ಊರಿಗೆ ಹೋಗುವ ದಿನ ಬಂದುಬಿಡುತ್ತಿತ್ತು, ಶಾಮ ಬೆಂಗಳೂರಿಗೆ ಹೊರಡಬೇಕಾಗುತ್ತಿತ್ತು. ಬೆಳಗಿನ ನಸು ಬೆಳಕಿನಲ್ಲೇ ನಾನೂ ಅಣ್ಣ ಹೋಗಿ ಅವನನ್ನು ಬಸ್ಸಿನಲ್ಲಿ ಕೂರಿಸಿ ಟಾಟಾ ಮಾಡಿ ಬೀಳ್ಕೊಡುತ್ತಿದ್ದೆವು. ವಾಪಸ್ಸಾಗುವಾಗ ದಾರಿಯುದ್ದಕ್ಕೂ ನಾನು ಸೊರ ಸೊರ ಅಳುತ್ತಾ ಬಂದು ಮರುದಿನದ ನನ್ನ ಶಾಲೆಯ ತಯಾರಿ ನಡೆಸಲು ಅನುವಾಗುತ್ತಿದ್ದೆ.  ಹಾಗೆಯೇ …ಶಾಮಣ್ಣನ ಮುಂದಿನ ರಜೆಯ ಬರುವಿಕೆಗೆ ದಾರಿ ಕಾಯುತ್ತಿದ್ದೆ.

Leave a comment

Filed under ಲೇಖನಗಳು

ಗೆಳೆತನ

ಎಂದೋ ಕಂಡ2
ಹಗಲುಗನಸಿ’ಗೆ’
ಪೂರಕವಾಗೊಮ್ಮೆ
ಆವಿರ್ಭವಿಸಿದ
ನನಸಿನ ಎ’ಳೆ’
ಮುಕ್ತ ವಾತ್ಸಲ್ಯದ
ನೆಚ್ಚಿನ ಸೆಳೆ’ತ’
ಹೃದಯಾಂತರಾಳದ
ಸುಚೇತ’ನ’
ನನ್ನ-ನಿನ್ನ ‘ಗೆಳೆತನ’

Leave a comment

Filed under ಕವನಗಳು