Monthly Archives: April 2017

ಎಂಟು ಸಣ್ಣ ಕತೆಗಳು!

images-51. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು ಆಶ್ರಯದಾಣಕ್ಕೆ ಹುಡುಕುತ್ತಾ ತಳಮಳಗೊಂಡು ಅಲೆದು ಮಳೆಯಲ್ಲಿ ನೆಂದರು!

2. ಮನುಷ್ಯ ಮತ್ತು ದೇವರು ಅಚಾನಕ್ಕಾಗಿ ಭೇಟಿಯಾದರು. ಇಬ್ಬರೂ ಆಶ್ಚರ್ಯಕರವಾಗಿ ಒಮ್ಮೆಲೇ ಉದ್ಘರಿಸಿದರು, ಓ..ನನ್ನ ಸೃಷ್ಟಿಕರ್ತಾ !!

3. ಇಬ್ಬರೂ ಒಟ್ಟಿಗೇ ಕೇಳಿದರು, ನೀನು ಹಿಂದುವೋ ಮುಸ್ಲಿಮನೋ? ಉತ್ತರ ಒಟ್ಟಿಗೇ ಬಂತು, ನನಗೆ ಹಸಿವಾಗಿದೆ!

4. ಈ ಮೂರ್ಖನಿಗೆ ಅಸಾಧ್ಯವೆನ್ನುವ ಪದದ ಅರ್ಥ ಗೊತ್ತಿರಲಿಲ್ಲ, ಅದಕ್ಕೇ ಅವನದನ್ನು ಸಾಧಿಸಿಯೇ ಬಿಟ್ಟ!

5. ರಾಂಗ್ ನಂಬರ್, ಉಲಿಯಿತು ಅದೇ ಚಿರಪರಿಚಿತ ಧ್ವನಿ!

6. ನಾವು ಸತ್ತ ನಂತರ ದೇವರು ಕೇಳಿದರೂ ಆಶ್ಚರ್ಯವಿಲ್ಲ, ‘ಹೆಂಗಿತ್ತು ಮಚ್ಚಾ ಸ್ವರ್ಗ ಅಂತ’!

7. ನನಗವರು ಹೇಳಿದ್ದಿದ್ದು ಇಷ್ಟೇ, ಅವಳನ್ನು ಪ್ರೀತಿಯಲ್ಲಿ ಸಿಲುಕಿಸಿಕೊಳ್ಳಲು ಅವಳು ಮನದುಂಬಿ ನಗುವಂತೆ ಮಾಡಬೇಕು; ಆದರೆ ಅವಳು ಹಾಗೆ ನಕ್ಕಾಗಲೆಲ್ಲಾ ನಾನು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಿದ್ದೆ!

8.  ಇನ್ನು ಮುಂದೆ ನಾವು ಸ್ನೇಹವನ್ನು ಬೆಸೆಯಬೇಕಿಲ್ಲ, ಮನುಷ್ಯರನ್ನು ಸ್ನೇಹಿತರೆಂದು ಕರೆದು ಫೇಸ್ಬುಕ್ ಗುಂಪಿಗೆ ಸೇರಿಸಿಕೊಂಡರಾಯಿತು!

Leave a comment

Filed under ಅನುವಾದಿತ ಕತೆಗಳು

I’m back after a short break!

images-4ಇಷ್ಟೊಂದು ನಿರ್ಲಿಪ್ತತೆ ನನ್ನನ್ನು ಯಾವತ್ತೂ ಆವರಿಸಿರಲಿಲ್ಲ. ಸೋತ ಶರಣಾಗತಿಯದ್ದೋ, ವೀರ ವಿಜಯದ್ದೋ ಹಂಗೂ ಅದಕ್ಕಿರಲಿಲ್ಲ. ಇದೇ ವಾಸ್ತವ, ಇದೇ ನಿನ್ನ ಆಪ್ಯಾಯಮಾನ ಸುಸ್ಥಿತಿ ಎಂದು ಪಿಸುಗುಟ್ಟುವ ಹಾಗೆ ಅವ್ಯಾಹತವಾಗಿ ಅದೆಷ್ಟೋ ನಿಟ್ಟುಸಿರುಗಳು ಹೊರಹೊಮ್ಮುತ್ತಾ ಹೆಪ್ಪುಗಟ್ಟಿದ ಮೋಡ ಹನಿಗಳನ್ನುದುರಿಸಿ ಆಕಾಶವನ್ನು ತೊಳೆದು ಶುಭ್ರ ಮಾಡಿದಂತೆ ಮನದಂಗಳವನ್ನು ಸಾರಿಸುತ್ತಿದ್ದವು.  ಇವತ್ತು ಎಲ್ಲಾ ಹೊಸದು. ಮುಗಿಲೆತ್ತರ ನಿಂತ ಮರಗಳು, ಗೂಡು ಸೇರುತ್ತಿರುವ ಹಕ್ಕಿಗಳು ಎಲ್ಲವೂ ಮತ್ತಷ್ಟು ಮಗದಷ್ಟು confident ಆಗಿ ಕಂಡವು. ದೂರದ watchman shed ನಲ್ಲಿ ರೊಟ್ಟಿ ಸುಡುವ ಪರಿಮಳ ಮಳೆಯ ಕಂಪಿನೊಡನೆ ಸ್ಫರ್ಧೆಗೆ ಬಿದ್ದಂತೆ ಹಿತವಾಗಿತ್ತು. ಎಲ್ಲಾ ಕಡೆ ನಿರಮ್ಮಳ. ಜೀವನದ ಅಡೆತಡೆಗಳನ್ನು ಒಂದೊಂದಾಗಿ ದಾಟುತ್ತಾ ಓಡುತ್ತಾ ಸಾಗುವ life ಎಂಬ ರಿಲೇ ರೇಸಿನಲ್ಲಿ ಯಾವುದಕ್ಕೂ ಆತ್ಮರತಿಗೆ ಅವಕಾಶವಿರಲಿಲ್ಲ. Yes, I am that I am. ಊದಿಯೇ ಊದುವ ಕೊಳಲ ಯಾವನೋ ಮರುಳ, ಕೇಳುತ್ತಾ ಕಳೆಯೋಣ ಹೀಗೆಯೇ ಇರುಳ ಎನ್ನುವ ಪರವಶತೆಯ ಸ್ಥಿತಿ ಅಥವಾ ಅದಕ್ಕೂ ಮೀರಿದ್ದು.

ಸಾವಿನಂಚು ಮುಟ್ಟಿ ವಾಪಸ್ಸಾದವವರ ಮನಸ್ಥಿತಿ ಹೇಗಿರುತ್ತದೆ ಎಂಬುದು ಅನುಭವಿಸಿರುವ ನಮ್ಮಲ್ಲನೇಕರಿಗೆ ಗೊತ್ತು. ಆದರೆ ದಿನಾ ಸಾಯುವ ನಮ್ಮಲ್ಲನೇಕರಿಗೆ ಬದುಕನ್ನು ಮೌಲ್ಯಮಾಪಿಸುವ ಕೆಲವೊಂದು parameters,  shift+delete ಆಗಿ ಹೋಗಿರುತ್ತದೆ. ಇವತ್ತು ಓದಿದ English WhatsApp message ಒಂದರ ಸಾರಾಂಶ ಹೀಗಿದೆ. ಒಬ್ಬ ವ್ಯಕ್ತಿ hi tech ಆಸ್ಪತ್ರೆಯಲ್ಲಿ ಹುಟ್ಟಿ, private school ನಲ್ಲಿ ಓದಿ, ದೊಡ್ಡ ಕಾರು ಪಡೆದು, iPhone 6+ ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಮತ್ತೊಬ್ಬ ಮನೆಯಲ್ಲಿ ಹುಟ್ಟಿ, ಸರ್ಕಾರೀ ಶಾಲೆಯಲ್ಲಿ ಓದಿ, ರಸ್ತೆ ಸಾರಿಗೆಯಲ್ಲಿ ಓಡಾಡಿ, ಸಾಧಾರಣ smart phone ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಇಲ್ಲಿ ತಳುಕು ಹಾಕಿಕೊಳ್ಳುವ ಒಂದು ಅಂಶವೆಂದರೆ lifestyle ಅನ್ನೋದು competition ಅಲ್ಲದೇ ಅಲ್ಲ, ದಾರಿ ಬೇರೆ ಬೇರೆಯಾದರೂ ಗಮ್ಯ ಒಂದೇ ಎನ್ನುವುದು. ನಮ್ಮ ಮಗ್ಗುಲಿನವನಲ್ಲಿ ದುಬಾರಿ ವಸ್ತುಗಳಿವೆ ಎಂದ ಮಾತ್ರಕ್ಕೆ ನಾವು failures ಅಲ್ಲ. ಸಂತೋಷವೆಂಬುದು ನಾವು ಹೊಂದಿರುವ ದುಬಾರಿ ವಸ್ತುಗಳು ನಮಗೆ ಕೊಡುತ್ತಿರುವ ಹಿರಿಮೆಯಲ್ಲಿಲ್ಲ. ನಮ್ಮಲ್ಲಿರುವ ಸಾಧಾರಣಾತಿಸಾಧಾರಣ ವಸ್ತುಗಳ ಸಮರ್ಪಕ ಬಳಕೆಯಲ್ಲಿದೆ. Happiness is not having what we like, it is liking what we have and learning to make most of it by giving it. Happiness is a state of mind!!!

ಬಿಡಿ, ಇವೆಲ್ಲಾ ನಮಗೆ ಗೊತ್ತಿಲ್ಲದ್ದೇ..?? ಇಂತಹ ಮಾತು-ಕತೇಲಿ ನಾವು SME ಗಳು. ಎಲ್ಲಿ ಕಮಾನ್ practical ಆಗಿ ಅಳವಡಿಸಿಕೋ ನೋಡೋಣ ಎನ್ನುವ ಸವಾಲನ್ನೇ ಎದುರಿಸಲು ಅನವರತ ಹೊರಟು ಸೋತವರು. ಉತ್ತರ ನಮಗೆ ನಿಚ್ಚಳವಾಗಿ ಗೊತ್ತಿದ್ದರೂ ಬರೆಯಲು ಭಯ. ಎಲ್ಲಿ distinction ನಲ್ಲಿ ಪಾಸಾಗಿ ನೆಲಕಚ್ಚಿಬಿಡುತ್ತೇವೋ ಎನ್ನುವ ವಿಚಿತ್ರ ದಿಗಿಲು! ಸಂತೋಷವಾಗಿರಲು ನಮಗೆ ಏನೆಲ್ಲಾ ಬೇಕು ಎನ್ನುವುದರ ಬ್ರಹ್ಮಾಂಡದುದ್ದದ list ನಮ್ಮ ಬಳಿಯಿದೆ. ಒಳ್ಳೆಯ ಗಂಡ/ಹೆಂಡತಿ, ಕಾರು, ಬ್ಯಾಂಕ್ ಬ್ಯಾಲೆನ್ಸ್, gym, healthy food, lifestyle, ಗೆಳೆಯ/ಗೆಳತಿ, ಕೊನೇ…ಗೆ ಆರೋಗ್ಯ, ಸ್ವಾತಂತ್ರ್ಯ…ಹೀಗೇ ಪಟ್ಟಿ endless ಆಗುತ್ತದೆ. ಅಯ್ಯೋ ಹೋಗಮ್ಮ, ಇದೆಲ್ಲಾ ಹೊಟ್ಟೆ ತುಂಬಿದವರ wants, ನಮ್ಮದು ಬೇರೆನೇ ಇದೆ ಅಂತೀರಾ? ಅದಕ್ಕೂ ಬರ್ತೀನಿ ಇರಿ. ಚೈನಾ ದ ಕವಿಯೊಬ್ಬನ ಬಗ್ಗೆ  ಒಂದು ಲೇಖನದಲ್ಲಿ ಓದುತ್ತಿದ್ದೆ. ಅವನ ಹೆಸರು L. ಎಲ್ಲೆಲ್ಲಿ ಹುಡುಕಿದರೂ ಸಿಗೋದೇ ಅಷ್ಟು L! ಅವನ ಕವನಗಳು ಮಾತ್ರ ವಿಪರೀತ ಹರಿತ. ಎಷ್ಟರಮಟ್ಟಿಗೆ ಬರೆಯುತ್ತಾನೆಂದರೆ ಮೊದಮೊದಲು ಕನ್ನಡಿಯಲ್ಲಿ ಕಾಣುತ್ತಿದ್ದ ನನ್ನ ಮುಖ ಈಗ ಕಾಣುತ್ತಿಲ್ಲ, ನನ್ನ boss ನ ಮುಖ ಕಾಣುತ್ತದೆ ಎನ್ನುತ್ತಾನೆ. ಕೊನೆಗೆ ಅದೂ ಇಲ್ಲ ಬರೀ ಡಾಲರುಗಳು ಕಾಣುತ್ತವೆ ಎನ್ನುತ್ತಾನೆ. ನಮಗೂ ಹಾಗೇ ಆಗಿದೆ. ನಮ್ಮ limits ನಮಗೆ ಗೊತ್ತಾದರೂ ಒಪ್ಪಿಕೊಳ್ಳುವ ತಾಕತ್ತು ನಮ್ಮ ಆಂತರ್ಯ ಕಳೆದುಕೊಂಡಿದೆ. ಕನ್ನಡಿಯಲ್ಲಿ ನಮ್ಮ ಮುಖ ನಮಗೆ ಹೇಗೆ ಕಂಡೀತು? ಎಡವನ್ನು ಬಲ ಮಾಡಿ, ಬಲವನ್ನು ಎಡ ಮಾಡಿ ಕನ್ನಡಿಯಂತೂ ತೋರಿಸುವ ಕೆಲಸ ಮಾಡುತ್ತಲೇ ಇದೆ. ಆದರೆ ನಮ್ಮ ಮುಖ ನಮಗೆ ಕಾಣುತ್ತಲೇ ಇಲ್ಲ. ಇಷ್ಟೊಂದು ಹಣೆ ನೆರಿಗೆ, ಈಗಾಗಲೇ ಇಷ್ಟು ದಪ್ಪವೇ, ಕೂದಲು ಬಿಳಿ, ಬೊಕ್ಕ ತಲೆ, ಇಲ್ಲ ಇಲ್ಲ ಇದು ನಾನಲ್ಲ, ನಮ್ಮ (ನಮಗೆ ಬೇಕಾದ) ಮುಖ ನಮಗೆ ಕಾಣಿಸುತ್ತಲೇ ಇಲ್ಲ. ಆದರೆ ವಿಚಿತ್ರ ನೋಡಿ, ನಮ್ಮ ಗಂಡ/ಹೆಂಡತಿ, ಮಕ್ಕಳು, ಮತ್ತು ಸಮಾಜದ ಕಣ್ಣಿಗೆ ನಮ್ಮ ಮುಖ ಕಾಣಿಸುತ್ತಿದೆ. ಪರಿಚಯಸ್ತರೆಲ್ಲಾ ಇದೇನು ಹೀಗಾಗಿ ಹೋದೆ, ಹುಷಾರಿಲ್ಲವೇ? ಎಂದು ಲೊಚಗುಡುತ್ತಾರೆ. ಅಂದರೆ …….ನಾವು ಸತ್ತಿಲ್ಲ, ಬದುಕಿದ್ದೇವೆ! ಬೇರೆಯವರ ದೃಷ್ಟಿಯಿಂದ, ಬೇರೆಯವರಿಗಾಗಿ ಬದುಕಿದ್ದೇವೆ. ಹಾಗಾದರೆ ನಮಗೆ ನಾವು ಯಾವತ್ತೋ ಸತ್ತಾಗಿದೆ, ಹೌದಾ!? ಬದುಕೆಂದರೆ ಇದೇನಾ ಅಥವಾ ಇದೇ ಸಾವಾ? ಬದುಕಿದ್ದರೆ ಸಂತೋಷ ಬೇಕು OK  ಸತ್ತಮೇಲೆ ಅವೆಲ್ಲಾ ಏಕೆ? ಹಾಗಾದರೆ  in reality ನಮಗೆ ಏನು ಬೇಕು? ತುಂಬಾ ತುಂಬಾ ಪ್ರೀತಿನಾ, ಕಾಮನಾ, ಹಣವಾ, ಹೊಗಳಿಕೆ ಯಾ..ಏನು? ಏನು???

ಕುವೆಂಪು ಹೇಳಿದರು,

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ

ಹರಿವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ

ದನಿಯು ದನಕಾಯುವನ ಕೊಳಲೊಡನೆ ಬರಲಿ.

ಬಾಂದಳದಿ ಹಾರಿದರು ಭುವಿಯಲ್ಲಿ ಜಾರುತಿಹ

ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.

ಬೈಗಾಗೆ ನಮ್ಮೊಡನೆ ಗೆಳಪಿಯಲೆದದ್ದಾಡೆ

ಗೋಪಾಲನಾಗಿರುವ ತಿಮ್ಮನೆನಗಿರಲಿ.

ನಮಗೂ ಇದೇ ಮತ್ತು ಇಷ್ಟೇ ಬೇಕೇ? ನಾವಿವತ್ತು ಅನುನಯದ ಕೊಳಲನ್ನು ಮೂಲೆಗೆಸೆದು ಅನುರಣದ ಶಂಖವನ್ನು ಕೈಗೆತ್ತಿಕೊಂಡಾಗಿದೆ. ಗೋಕುಲ ಯಾವಾಗಲೋ ಬಿಟ್ಟು ಮಥುರೆಯ permanent ಆಧಾರ್ ಕಾಡ್೯ ಹೋಲ್ಡರ್ ಗಳಾಗಿದ್ದೇವೆ. ಬಿಲಿಯನಿಯರ್ಗಳಾಗಿರುವ ಫಾರಿನ್ ನಲ್ಲಿ settle ಆಗಿರುವ ನಮ್ಮ ಸ್ನೇಹಿತರು, ಅಂಕಲ್, ಆಂಟಿ, ಕಸಿನ್ನು ಆಗಿರುವ ಅಕ್ರೂರರು ಪದೇ ಪದೇ ನಮ್ಮನ್ನು ಭಡಕಾಯಿಸುತ್ತಲೇ ಇದ್ದಾರೆ. ನಮ್ಮೊಳಗೆ ಕೃಷ್ಣ ಬಲರಾಮರಿಬ್ಬರೂ ನಮಗರಿವಿಲ್ಲದೆಯೇ ಒಂದಾಗಿಬಿಟ್ಟಿದ್ದಾರೆ!

ಮೊನ್ನೆ ಮಲ್ಯ ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಾಗ ಬರುತ್ತಿದ್ದ ಭಾವನೆಗಳಿವು. ಹೊರಟಾಗ ನಾನೊಬ್ಬಳೇ. ಗಂಡ, ಮಗ ಯಾರೂ ಊರಿನಲ್ಲಿಲ್ಲ. ಬಾಬು ಆಗಿನ್ನೂ ಎದ್ದಿದ್ದ. ಕರೆಮಾಡಿದಾಗ ಹೇಳಿದ ‘ಈ ಸ್ಥಿತಿಯಲ್ಲಿ ತಡಮಾಡಬೇಡ, ಬೇಗ ಹೊರಡು, ಆಸ್ಪತ್ರೆಗೆ ನಾನು ನೇರವಾಗಿ ಬರುತ್ತೇನೆ.’ Ola ದಲ್ಲಿ ಅರ್ಧ ದಾರಿಯಲ್ಲೇ ಪುಷ್ಪ ಅತ್ತೆಯ ಕರೆ ಬಂತು. ‘ಒಬ್ಬಳೇ ಹೇಗೆ ಹೊರಟೆಯಮ್ಮಾ, ಹತ್ತಿರದ ಆಸ್ಪತ್ರೆಗೆ ಸೇರ್ಕೊಳ್ಳೇ, ‘ ಆತಂಕ ವ್ಯಕ್ತಪಡಿಸಿದರು. Emergency room ಗೆ ದೌಡಾಯಿಸುತ್ತಿರುವ ನನ್ನ ಹಿಂದೆ ola ಹುಡುಗ ಓಡಿ ಬರುತ್ತಿದ್ದಾನೆ. ಅಕ್ಕಾ..ನನ್ನ ಕೈ ಹಿಡ್ಕಳಕ್ಕಾ ಎನ್ನುತ್ತಾನೆ. ಅಲ್ಲಂತೂ ಡಾಕ್ಟರ್ ಗಳು ECG, IV, oxygen mask, injection ಏನೇನೋ ಹಾಕುತ್ತಿದ್ದಾರೆ. ಉಹೂಂ, ನನಗಿವೆಲ್ಲಾ ಬೇಡ! ನನ್ನ ಮುಖ ಇದಲ್ಲವಲ್ಲಾ? ನಾನು ಎದ್ದು ಕೂಡುತ್ತೇನೆ. ನನ್ನನ್ನು patient ರೀತಿ ಮಲಗಿಸಲು ಹರಸಾಹಸ ಮಾಡುತ್ತಿದ್ದಾರೆ. ಉಮಕ್ಕ ಪೋನ್ ಮಾಡುತ್ತಾಳೆ, ಏನೂ ಆಗಿಲ್ಲದವಳಂತೆ ಮುದ್ದುಗರೆಯುತ್ತೇನೆ. ‘ಒಬ್ಬಳೇ ola ಮಾಡ್ಕೊಂಡು ಹೊರಟುಹೋಗ್ತಾರೇನೋ ಕಂದಾ..ದಾರಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ’..ಬಿಕ್ಕಿಬಿಕ್ಕಿ ಅಳ್ತಾಳೆ. ಪ್ರಥಮ ಚಿಕಿತ್ಸೆಯ ತರುವಾಯ ವಾರ್ಡಿಗೆ ಶಿಪ್ಟು ಮಾಡಲು ನನ್ನ ಕಡೆಯ attendant ಬೇಕು.  ನಾನು oxygen mask ತೆಗೆದು ಪ್ರಾಣಾಯಾಮ ಮಾಡುತ್ತೇನೆ, iv ಚುಚ್ಚಿದ ಕೈಗಳಲ್ಲೇ ಅಪಾನವಾಯು ಮುದ್ರ ಹಿಡಿಯುತ್ತೇನೆ. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೇ..sister ಗಳು doctor ಗಳು ಅಚ್ಚರಿಯ (ಅಸಹಾಯಕ!?) ನಗೆಬೀರುತ್ತಾರೆ. ಅಷ್ಟರಲ್ಲಿ ಬಂದ ಬಾಬು ‘ಧಿಮ್ಮನೆ ರಂಗಾ’ ಎಂದು ಕೂತಿದ್ದ ನನ್ನನ್ನು ಅಪ್ಪಿಕೊಂಡೊಡನೆಯೇ ಎಲ್ಲಿತ್ತೋ ಅಳು ಮುಳು ಮುಳು ಹೊರಬರುತ್ತದೆ. Doctor, my brother has come, you can shift me to ward now, ಸಂತೋಷದಿಂದ ಅಳುತ್ತೇನೆ. ಇದು ಸಂತೋಷವಾ, ದುಃಖವಾ, ನಾನು ಉಳಿಯುತ್ತೇನಾ, ಸಾಯುತ್ತೇನಾ? ಒಂದೂ ಗೊತ್ತಿಲ್ಲ. Wheelchair ಬೇಡ ಎನ್ನುತ್ತೇನೆ. ಇದೆಲ್ಲಾ ಬೇಡ ಕಣೋ lift ನಲ್ಲಿ ಹೋಗೋಣ, ಅಲ್ಲಿಯವರೆಗೂ ನಡೀತಿನಿ ಎಂದು ಬಾಬಣ್ಣನ ಕೈ ಹಿಡಿದು ಅಂಗಲಾಚುತ್ತೇನೆ. ಡಾಕ್ಟರ್ ನಿರಾಕರಿಸುತ್ತಾರೆ. ಬಾಬಣ್ಣ ಅಳಲಾಗದೇ ನಗುತ್ತಾನೆ. ‘ಕೂತ್ಕೊಳೆ ಏನಾಗುಲ್ಲ, ಇದೊಂದು ಥರ ಸನ್ಮಾನ ಕಣೆ ನಿಂಗೆ. ನೋಡು, ಕಲರ್ ಕಲರ್ ಪ್ಯಾಂಟು ಶರಟು, ಮ್ಯಾಚಿಂಗ್ ವಾಚು, ನಾನು ನಿನ್ನ ಜೊತೆಗೆ ಇರ್ತೀನಿ’ ಎನ್ನುತ್ತಾ ತಾನೇ wheelchair ಹಿಡಿದು ನಿಲ್ತಾನೆ. ಸಿಬ್ಬಂದಿ ವರ್ಗದ ಜನರ ಮೇಲೆ ಕೂಗಾಡಿ ಗಾಳಿ ಬೆಳಕು ಇರುವ ರೂಮ್ ವ್ಯವಸ್ಥೆ ಮಾಡ್ತಾನೆ. ಅರ್ಧ ಇಡ್ಲಿ ಬಲವಂತವಾಗಿ ತಿನ್ನುವ ಹಾಗೆ ಮಾಡ್ತಾನೆ. ನನಗೆ ಮಂಪರು ಕವಿಯುತ್ತದೆ.

ಅವತ್ತು TMT positive ಬರುತ್ತದೆ. Angiogram ಗೆ cathlab ಸೇರುತ್ತೇನೆ. ರಾತ್ರಿ ಯಮಯಾತನೆ. ಕಾಲು ಮಡಿಚುವಂತಿಲ್ಲ, ಏಳಲು ಸಾಧ್ಯವಿಲ್ಲ. ನೆನ್ನೆ ಬಾಬಣ್ಣನಿಂದ  ಬೈಯಿಸಿಕೊಂಡಿದ್ದ sister ಅನ್ನು ಅಣ್ಣ ಬಾಗಿಲಲ್ಲಿ ಮೆಲುಧ್ವನಿಯಲ್ಲಿ angiogram results ಕೇಳುತ್ತಾನೆ. ‘ಕೊತ್ತಿಲ್ಲಾ ಸಾರ್, ಟಾಕ್ಟರ್ went off, ಡಿ. ಎಂ. ಡಿ. ವಾಸ್ ಪೋಸಿಟಿವ್ ನೋ’ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಡುತ್ತಾಳೆ. ಬೋನಲ್ಲಿ ಕೂಡಿಟ್ಟ ಹುಲಿಯಂತಿರುವ ನನ್ನನ್ನು ಬಾಬಣ್ಣ ತರಾವರಿ ತಮಾಷೆ ಮಾಡುತ್ತಾನೆ. ಸೂಜಿ ಕಂಡರೆ ಹೆದರುವ ಮತ್ತು ಅದಕ್ಕಾಗಿ blood tests postpone ಮಾಡಿಕೊಳ್ಳುವ ಬಾಬಣ್ಣ ನನಗೆ ಊಟಮಾಡಿಸಿ sister ಅನ್ನು ಕರೆದು ಈಗ ಏನೇನು injections ಕೊಡ್ತೀರೋ ಕೊಡಿ ಎನ್ನುತ್ತಾನೆ. ಶಾಮೂ ಇದ್ದಿದ್ದರೆ ಇಬ್ಬರೂ ಸೇರಿ ಇಷ್ಟು ಹೊತ್ತಿಗೆ ನಿನ್ನ ಮನೆಗೇ ಕರ್ಕೊಂಡು ಹೋಗಿರ್ತಿದ್ವಿ ಎಂದು ನನ್ನನ್ನೂ ಹನಿಗಣ್ಣಾಗಿಸಿ ತಾನೂ ಗದ್ಗದಿತನಾಗುತ್ತಾನೆ. ‘ಎಲ್ಲಾ normal ಕಣೇ, ಅದಕ್ಕೇ ಡಾಕ್ಟರ್ ಹಾಗೇ ಹೋಗಿರೋದು, ನಾಳೆ ಮನೆಗೆ ಬಾ’ ತಲೆಸವರುತ್ತಾನೆ. ಹೌದು, ಈ ಬಾಬಣ್ಣ ನಿಜಕ್ಕೂ ಕುವೆಂಪು ಹೇಳಿದ ತಿಮ್ಮ. ಅದೇ ಸಮಯದಲ್ಲಿ  ಶಾಮ ಪೋನಾಯಿಸಿ ನನ್ನ ವರಸೆ ಕೇಳಿ ‘ನೀನೇ ಡಾಕ್ಟರ್ ಆಗೋಕ್ಕೆ ಹೋಗಬೇಡ್ವೇ..ನಿನಗೇನಾದ್ರೂ ಆಗೋದಾದ್ರೆ ನಾನು ಅಲ್ಲಿ ಇದ್ದೇ ಇರ್ತಿದ್ದೆ, ನಿನ್ನ heart ಏನೂ ಆಗಿಲ್ಲ, ಊರಿಗೆ ಬಂದ ತಕ್ಷಣ ಬರ್ತೀನಿ, ಚೆನ್ನಾಗಿ ನಿದ್ರೆಮಾಡು, ಧ್ಯಾನ ಮಾಡು’ ಎಂದು  ಪ್ರೀತಿಯಿಂದ ಗದರುತ್ತಾನೆ. ಇವನು ಇನ್ನೊಬ್ಬ ತಿಮ್ಮ!

ಯಾವುದು ಹೇಗೇ ಆಗಲಿ, ವನಮಾಲಿ ಎಂದಿಗೂ ಕೊಳಲ ಗಾನ ನಿಲ್ಲಿಸದಿರಲಿ! ಇಂತಹ ತಿಮ್ಮಂದಿರು ಎಲ್ಲರಿಗೂ ಸಿಗಲಿ!!!

Leave a comment

Filed under ಲೇಖನಗಳು